Thursday , April 19 2018
Home / News NOW / ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಮಹಿಳೆಯನ್ನು ಕೊಂದ 16ರ ಬಾಲಕ…!

ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಮಹಿಳೆಯನ್ನು ಕೊಂದ 16ರ ಬಾಲಕ…!

ನವದೆಹಲಿ : ಇಲ್ಲಿನ ಲಜ್ ಪತ್​​​ ನಗರದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಮನೆಯ ಯಜಮಾನಿಯನ್ನೇ ಕೊಂದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ತನ್ನ ಕೃತ್ಯದ ಬಗ್ಗೆ ತಿಳಿಸಿದ್ದಾರೆ. ಮಹಿಳೆಯನ್ನು ಕೊಂದ ಬಳಿಕ ಇಲ್ಲಿನ ಸಹೀಬಾದ್​ ಪೊಲೀಸ್ ಠಾಣೆಗೆ ಅಳುತ್ತಲೇ ಬಂದ ಬಾಲಕ ತಾನು ತನ್ನ ಯಜಮಾನಿಯನ್ನು ಕೊಂದಿದ್ದಾಗಿ ಹೇಳಿದ್ದಾನೆ. ಯಾಕೆ ಮಾಲಕಿಯನ್ನು ಕೊಂದೆ ಎಂದು ಪೊಲೀಸರು ಈತನನ್ನು ಕೇಳಿದಾಗ ಈತ ಅಘಾತಕಾರಿ ವಿಷಯ ಬಾಯಿಬಿಟ್ಟಿದ್ದಾನೆ.

ತಾನು ಹಣಕ್ಕಾಗಿ ಈ ಕೊಲೆ ಮಾಡಿಲ್ಲ. ಬದಲಾಗಿ, ಈ ಮಹಿಳೆ ಪದೇ ಪದೇ ನನ್ನ ಬಳಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಬೇಸತ್ತು ನಾನು ಆಕೆಯನ್ನು ಕೊಂದಿದ್ದೇನೆ ಎಂದು ಪೊಲೀಸರ ಮುಂದೆ ಈ ಬಾಲಕ ಒಪ್ಪಿಕೊಂಡಿದ್ದಾನೆ. ಈತ ಠಾಣೆಗೆ ಬರುವಾಗ ಈತನ ಕೈ ಮತ್ತು ಬಟ್ಟೆ ರಕ್ತಸಿಕ್ತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನಿಂದ ಮಾಹಿತಿ ಪಡೆದ ಪೊಲೀಸರು ಆತನೊಂದಿಗೆ ಸಂಗಮ್ ಅಪಾರ್ಟ್​ಮೆಂಟ್​ಗೆ ಹೋಗಿ ನೋಡಿದಾಗ ಮಹಿಳೆಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಈಕೆಯ ಗಂಡ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!