Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail / ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಹಲವು ವರ್ಷಗಳಿಂದ ಭಾರತ ಇದೇ ವಾದ ಮಾಡುತ್ತಿದೆ. ಆದರೆ, ಪಾಕಿಸ್ತಾನ ಮಾತ್ರ ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದೆ. ಈಗ ಭಾರತದ ವಾದಕ್ಕೆ ಪುಷ್ಟಿ ನೀಡುವಂತಹ ಸುಳಿವನ್ನು ದಾವೂದ್ ಇಬ್ರಾಹಿಂ ಸಹೋದರ ಬಂಧಿತ ಇಕ್ಬಾಲ್ ಕಸ್ಕರ್ ನೀಡಿದ್ದಾರೆ.

ಮೊನ್ನೆ ಮಹಾರಾಷ್ಟ್ರದ ಥಾಣೆ ಪೊಲೀಸರು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನನ್ನು ಬಂಧಿಸಿದ್ದರು. ಈತನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ದಾವೂದ್ನ ಸುಳಿವು ಕೂಡಾ ಸಿಕ್ಕಿದ್ದಾರೆ. ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಹೇಳಿರುವ ಇಕ್ಬಾಲ್ ಆತನ ನಾಲ್ಕೈದು ವಿಳಾಸವನ್ನೂ ಕೂಡಾ ಕೊಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈತ ತನ್ನ ಮನೆಯನ್ನು ಪದೇ ಪದೇ ಬದಲು ಮಾಡುತ್ತಲೇ ಇದ್ದ ಎಂದೂ ಹೇಳಲಾಗುತ್ತಿದೆ.

ಅದೂ ಅಲ್ಲದೆ, ಮೂರ್ನಾಕು ವರ್ಷಗಳಿಂದ ದಾವೂದ್ ತನ್ನ ಸಹೋದರನಿಗೂ ಕರೆ ಮಾಡುತ್ತಿಲ್ಲವಂತೆ. ಫೋನ್ ಟ್ರ್ಯಾಪ್ ಮಾಡುತ್ತಾರೆ ಎಂಬ ಭಯದಿಂದ ದಾವೂದ್ ಕರೆ ಮಾಡಿ ಮಾತನಾಡುವುದನ್ನು ನಿಲ್ಲಿಸಿದ್ದಾನೆ ಎಂದು ಇಕ್ಬಾಲ್ ಹೇಳಿದ್ದಾನೆ ಎಂದು ಗೊತ್ತಾಗಿದೆ.

About sudina

Check Also

ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಮುಂಬೈ : ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯೊಬ್ಬ ಪತ್ನಿಗೆ ಸಿರೀಂಜ್​ನಲ್ಲಿ ಚುಚ್ಚಿದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು …

Leave a Reply

Your email address will not be published. Required fields are marked *

error: Content is protected !!