Monday , February 18 2019
ಕೇಳ್ರಪ್ಪೋ ಕೇಳಿ
Home / Sandalwood / ಕವಲುದಾರಿಯ ಮುಹೂರ್ತ : ಅಪ್ಪು ನಿರ್ಮಾಣದ ಚಿತ್ರಕ್ಕೆ ಹಲವರ ಶುಭಹಾರೈಕೆ

ಕವಲುದಾರಿಯ ಮುಹೂರ್ತ : ಅಪ್ಪು ನಿರ್ಮಾಣದ ಚಿತ್ರಕ್ಕೆ ಹಲವರ ಶುಭಹಾರೈಕೆ

ಬೆಂಗಳೂರು : ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಈಗ ನಿರ್ಮಾಪಕ… ಕವಲುದಾರಿ ಎಂಬ ಚಿತ್ರಕ್ಕೆ ಅಪ್ಪು ದುಡ್ಡು ಹಾಕುತ್ತಿದ್ದಾರೆ. ಪುನೀತ್ ಅವರು ಹುಟ್ಟುಹಾಕಿರುವ ಪಿಆರ್​ಕೆ ಪ್ರೊಡಕ್ಷನ್ ನಡಿ ಈ ಸಿನೆಮಾ ನಿರ್ಮಾಣವಾಗುತ್ತಿದೆ… ಕವಲು ದಾರಿಯ ನಟ ರಿಷಿ. ಈ ರಿಷಿ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದವರು. ರಿಷಿಗೆ ಇಲ್ಲಿ ಪೊಲೀಸ್ ಅಧಿಕಾರಿಯ ಗೆಟಪ್… ರಿಷಿ ಪಾತ್ರದ ಹೆಸರು ಕೆ.ಎಸ್.ಶ್ಯಾಮ್… ಈ ಚಿತ್ರಕ್ಕೆ ನಟ ಶಿವರಾಜ್​ಕುಮಾರ್ ಕ್ಲಾಪ್ ಮಾಡಿ ಸಹೋದರಿಗೆ ಶುಭಹಾರೈಸಿದರು.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಡೈರೆಕ್ಟರ್ ಹೇಮಂತ್ ಕವಲುದಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ ಮೊದಲ ಚಿತ್ರದ ನಿರ್ಮಾಣಕ್ಕೆ ಪುನೀತ್ ಕೂಡಾ ಪುಳಕಗೊಂಡಿದ್ದಾರೆ… ಇನ್ನು, ಈ ಮುಹೂರ್ತ ಸಮಾರಂಭದಲ್ಲಿ ಸಾಕಷ್ಟು ಜನರು ಪಾಲ್ಗೊಂಡಿದ್ದರು. ರಾಘವೇಂದ್ರ ರಾಜ್​ಕುಮಾರ್​, ಅನಂತನಾಗ್, ಸುಮನ್ ರಂಗನಾಥ್, ನಿರ್ದೇಶಕ ಭಗವಾನ್, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಹಲವರು ಮುಹೂರ್ತದಲ್ಲಿ ಉಪಸ್ಥಿತರಿದ್ದು, ಹೊಸ ಚಿತ್ರಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಹೇಮಂತ್ ಮೇಲೆ ಪುನೀತ್​ಗೆ ತುಂಬಾ ವಿಶ್ವಾಸ. ಇವರ ಕೆಲಸವನ್ನೂ ಅಪ್ಪು ಮೆಚ್ಚಿಕೊಂಡಿದ್ದಾರೆ. ಇನ್ನು, ಚಿತ್ರದಲ್ಲಿ ಬಹುತಾರಾಗಣ ಇರಲಿದೆ. ರೋಶಿನಿ ಪ್ರಕಾಶ್, ಅಚ್ಯುತ ಕುಮಾರ್, ಸುಮನ್ ರಂಗನಾಥ್, ಅನಂತ್ ಕುಮಾರ್ ಸೇರಿದಂತೆ ಹಲವು ನಟರು ಈ ಚಿತ್ರದಲ್ಲಿದ್ದಾರೆ. ಇನ್ನು, ಪಿಆರ್ಕೆ ಬ್ಯಾನರ್ನಲ್ಲಿಯೇ ಮತ್ತೊಂದು ಚಿತ್ರ ಮಾಡುವ ಪ್ಲ್ಯಾನ್ ಕೂಡಾ ಪುನೀತ್ಗೆ ಇದೆ. ದೊಡ್ಮನೆ ಹುಡ್ಗ ನಿರ್ಮಾಪಕ ಎಂ ಗೋವಿಂದ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆಯಂತೆ.

ಪುನೀತ್ ಸದ್ಯ ಅಂಜನೀಪುತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಹರ್ಷ ಈ ಚಿತ್ರದ ಡೈರೆಕ್ಟರ್. ಕಿರಿಕ್ ಪಾರ್ಟಿ ಸುಂದರಿ ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ. ಈ ಚಿತ್ರದಲ್ಲಿ ಬಾಲಿವುಡ್ ನಟ ಮುಖೇಶ್ ತಿವಾರಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ನಟಿ ರಮ್ಯಾ ಕೃಷ್ಣ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜಸ್ಥಾನ, ಸ್ಕಾಟ್ಲೆಂಡ್ ಸೇರಿದಂತೆ ಹಲವು ಸುಂದರ ತಾಣದಲ್ಲಿ ಈ ಚಿತ್ರದ ಶೂಟಿಂಗ್ ನಡೆದಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!