Wednesday , January 24 2018
Home / Sandalwood / ಚೆಕ್​ ಬೌನ್ಸ್​ : ಪೂಜಾ ಗಾಂಧಿ ತಂದೆಗಾಗಿ ಪೊಲೀಸರ ಹುಡುಕಾಟ
Buy Bitcoin at CEX.IO

ಚೆಕ್​ ಬೌನ್ಸ್​ : ಪೂಜಾ ಗಾಂಧಿ ತಂದೆಗಾಗಿ ಪೊಲೀಸರ ಹುಡುಕಾಟ

ಬೆಂಗಳೂರು : ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಮತ್ತೊಂದು ಶಾಕ್ ಎದುರಾಗಿದೆ. ಪೂಜಾ ಗಾಂಧಿ ತಂದೆ ಪವನ್ ಗಾಂಧಿಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಚೆಕ್​ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್​ ಗಾಂಧಿಯನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಏನಿದು ಘಟನೆ…? : ಜಯನಗರ ಮತ್ತು ಬನಶಂಕರಿಯಲ್ಲಿ ಆದೀಶ್ವರ್​ ಶೋರೂಂನಲ್ಲಿ 8 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತು ಖರೀದಿಸಿದ್ದ ಪವನ್ ಗಾಂಧಿ ಚೆಕ್​ ನೀಡಿದ್ದರು. ಆದರೆ, ಪವನ್ ಗಾಂಧಿ ಬ್ಯಾಂಕ್ ಅಕೌಂಟ್ ನಲ್ಲಿ  ಹಣವಿಲ್ಲದೆ ಚೆಕ್ ಬೌನ್ಸ್ಆಗಿದೆ. ಚೆಕ್ ಬೌನ್ಸ್ ಬಳಿಕ ಪವನ್ ಗಾಂಧಿಗೆ ಶೋರೂಂ ಸಿಬ್ಬಂದಿ ಫೋನ್ ಮಾಡಿದ್ದಾರೆ. ಆದರೆ, ಪವನ್ ಗಾಂಧಿ ಸಿಬ್ಬಂದಿ ಫೋನ್​ಗೆ ಸಿಕ್ಕಿಲ್ಲ. ಹೀಗಾಗಿ, ತುಂಬಾ ದಿನ ಕಾದ ಬಳಿಕ ಆದೀಶ್ವರ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ಬಗ್ಗೆ ೨೭ನೇ ಎಸಿಎಂಎಂ ಕೋರ್ಟ್​ನಲ್ಲಿ ದೂರು ದಾಖಲಿಸಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪವನ್ ಗಾಂಧಿಯನ್ನು ಬಂಧಿಸಿ ಕರೆ ತರುವಂತೆ ಪೊಲೀಸರಿಗೆ ಆದೇಶಿಸಿದೆ. ಇನ್ನು, ವಾರೆಂಟ್ ಹಿಡಿದು ವರುಣ್ ಗಾಂಧಿ ಮನೆಗೆ ಹೋದರೆ ಅಲ್ಲಿ ಪೊಲೀಸರಿಗೇ ಶಾಕ್ ಕಾದಿತ್ತು. ಯಾಕೆಂದರೆ, 3 ತಿಂಗಳ ಹಿಂದೆಯೇ ಪವನ್ ಗಾಂಧಿ ಕುಟುಂಬಮನೆ ಖಾಲಿ ಮಾಡಿಕೊಂಡು ಹೋಗಿತ್ತು. ಹೀಗಾಗಿ, ಮೂರು ಬಾರಿ ವಾರೆಂಟ್ ಹಿಡಿದು ಹೋಗಿ ಪೊಲೀಸರು ವಾಪಸ್​ ಬಂದಿದ್ದಾರೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪವನ್ ಗಾಂಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!