Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಹನಿಪ್ರೀತ್ ಸಿಂಗ್​ ಪಾತ್ರದಲ್ಲಿ ರಾಖಿ ಸಾವಂತ್​

ಹನಿಪ್ರೀತ್ ಸಿಂಗ್​ ಪಾತ್ರದಲ್ಲಿ ರಾಖಿ ಸಾವಂತ್​

ಮುಂಬೈ : ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರಿರುವ ಡೇರಾ ಸಚ್ಛಾ ಸೌದಾದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಈಗ ಎಲ್ಲಿದ್ದಾಳೆ..? ಅದು ಗೊತ್ತಿಲ್ಲ. ಪೊಲೀಸರು ಈಕೆಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ಹನಿಪ್ರೀತ್ ಜೀವನ ಸಿನೆಮಾವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹನಿಪ್ರೀತ್ ಇನ್ಸಾನ್.. ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೊಳಗಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ… ಪಾಪಾಸ್ ಏಂಜಲ್ ಎನ್ನುವುದು ಈ ಹನಿಪ್ರೀತ್ ಇನ್ಸಾನ್ಳ ಮತ್ತೊಂದು ಹೆಸರು… ರಾಮ್ ರಹೀಮ್ ಜೈಲು ಸೇರಿದ ಬಳಿಕ ಈ ಹನಿಪ್ರೀತ್ ಎಲ್ಲಿದ್ದಾಳೆ ಎಂದು ಯಾರಿಗೂ ಗೊತ್ತಿಲ್ಲ. ಇದೇ ಕೇಸ್ನಲ್ಲಿ ಪೊಲೀಸರೂ ಈಕೆಗಾಗಿ ತಲಾಶ್ ನಡೆಸುತ್ತಿದ್ದಾರೆ. ಆದರೂ, ಆಕೆಯ ಸುಳಿವು ಇನ್ನೂ ಪತ್ತೆಯಾಗಿಲ್ಲ…

ಆದರೆ, ಬಾಲಿವುಡ್ ನಟಿ ರಾಖಿ ಸಾವಂತ್ ಮಾತ್ರ ಹನಿಪ್ರೀತ್ ಎಲ್ಲಿದ್ದಾಳೆ ಎಂಬುದರ ಬಗ್ಗೆ ಒಂದಷ್ಟು ಹೋಮ್ ವರ್ಕ್ ಮಾಡಿಕೊಂಡಿದ್ದಾರೆ… ರಾಖಿ ಪ್ರಕಾರ ಹನಿಪ್ರೀತ್ ಲಂಡನ್​ನಲ್ಲಿದ್ದಾಳಂತೆ…! ಹನಿಪ್ರೀತ್ ನನಗೆ ಏಳೆಂಟು ವರ್ಷದಿಂದ ಚೆನ್ನಾಗಿ ಗೊತ್ತು. ಆಕೆಯ ಬಗ್ಗೆ ಇಂಚಿಂಚೂ ಮಾಹಿತಿ ನನಗಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ. ರಾಖಿ ಹೀಗೆ ಹೇಳೋದಕ್ಕೆ ಕಾರಣವೂ ಇದೆ. ರಾಖಿ ರಾಮ್ ರಹೀಮ್ ಸಿಂಗ್ ಜೀವನವನನ್ನು ಸಿನೆಮಾ ಮಾಡುತ್ತಾರಂತೆ. ಈ ಸಿನೆಮಾದಲ್ಲಿ ರಾಖಿ ಹನಿಪ್ರೀತ್ರನ್ನು ಎಕ್ಸ್ಪೋಸ್ ಮಾಡುತ್ತಾರಂತೆ…!

ಈ ಚಿತ್ರಕ್ಕೆ ರಾಖಿ ಸಾವಂತ್ ಮತ್ತು ಅವರ ಸಹೋದರ ರಾಕೇಶ್ ಸಾವಂತ್ ನಿರ್ಮಾಪಕರಂತೆ. ಈ ಚಿತ್ರಕ್ಕೆ ‘ಅಬ್ ಹೋಗಾ ಇನ್ಸಾಫ್’ ಎಂದು ಟೈಟಲ್ ಕೂಡಾ ಕೊಡಲಾಗಿದೆ. ರಾಝಾ ಮುರಾದ್ ಗುರ್ಮಿತ್ ರಾಮ್ ರಹೀಂ ಸಿಂಗ್ ಪಾತ್ರ ಮಾಡುತ್ತಿದ್ದಾರೆ. ಇನ್ನು, ಏಜಾಜ್ ಖಾನ್ ಗೆ ತನಿಖಾಧಿಕಾರಿಯ ಪಾತ್ರ… ದೆಹಲಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಇಲ್ಲೇ ಸೆಟ್ ಕೂಡಾ ಹಾಕಲು ನಿರ್ಧರಿಸಲಾಗಿದೆ. ಡೇರಾ ಸಚ್ಚಾ ಸೌದಾದ ಪ್ರತಿರೂಪವನ್ನೇ ಇಲ್ಲಿ ನಿರ್ಮಿಸಲು ಇವರೆಲ್ಲಾ ಚಿಂತನೆ ನಡೆಸಿದ್ದಾರಂತೆ. ಈ ಚಿತ್ರದ ಮೂಲಕ ರಾಮ್ ರಹೀಮ್ ಬಾಬಾನ ಬಣ್ಣ ಬಯಲು ಮಾಡುವ ತನಕ ನಾನು ವಿರಮಿಸುವುದಿಲ್ಲ ಎಂದೂ ರಾಖಿ ಹೇಳಿಕೊಂಡಿದ್ದಾರೆ…

ಪಕ್ಕಾ ಕಾಮಿಡಿ ಸಿನೆಮಾ ರೀತಿಯಲ್ಲಿ ಇದನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ವೇಳೆಗೆ ಈ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಈ ಚಿತ್ರತಂಡ ಇದೆ.

 

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!