Monday , January 22 2018
Home / Gulf News / ಖುಷಿಗೆ ದುರಂತ ಅಂತ್ಯ…! : ಬನಾನ ಬೋಟ್​ಗೆ ಜೆಟ್​​ ಸ್ಕೀ ಡಿಕ್ಕಿ : ಯುವಕ ದುರ್ಮರಣ
Buy Bitcoin at CEX.IO

ಖುಷಿಗೆ ದುರಂತ ಅಂತ್ಯ…! : ಬನಾನ ಬೋಟ್​ಗೆ ಜೆಟ್​​ ಸ್ಕೀ ಡಿಕ್ಕಿ : ಯುವಕ ದುರ್ಮರಣ

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ಖೋರ್ ಫಕ್ಕನ್ : ಬನಾನ ಬೋಟ್​ಗೆ ಜೆಟ್​ ಸ್ಕೀ ಡಿಕ್ಕಿ ಹೊಡೆದ ಪರಿಣಾಮ 18 ವರ್ಷದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಖುಷಿಯಿಂದ ಕಳೆಯಲು ಈ ಯುವಕ ಇಲ್ಲಿಗೆ ಬಂದಿದ್ದ, ಆದರೆ, ಅಷ್ಟರಲ್ಲಿ ದುರಂತ ಸಂಭವಿಸಿದೆ. ಖೋರ್​ ಫಕ್ಕನ್​ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 17 ವರ್ಷದ ಇನ್ನೋರ್ವ ಯುವಕನಿಗೆ ಗಾಯಗಳಾಗಿವೆ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ. ಈ ಬನಾನ ಬೋಟ್​ನಲ್ಲಿದ್ದ ಇತರ ನಾಲ್ವರನ್ನು ಇಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು, ಅಧಿಕಾರಿಗಳು ಹೇಳುವ ಪ್ರಕಾರ ಮೃತಪಟ್ಟ ಯುವಕ ಲೈಫ್ ಜಾಕೆಟ್ ಹಾಕಿರಲಿಲ್ಲವಂತೆ. ಇಂತಹ ಆಟದಲ್ಲಿ ಭಾಗಿಯಾಗುವವರಿಗೆ ಲೈಫ್ ಜಾಕೆಟ್​ ಅನ್ನು ನೀಡಬೇಕು. ಆದರೆ, ಇಲ್ಲಿ ಯಾವುದೇ ಲೈಫ್ ಜಾಕೆಟ್​ ನೀಡಲಾಗಿರಲಿಲ್ಲ. ಸುರಕ್ಷತೆಯ ಬಗ್ಗೆ ಇವರು ಯಾವುದೇ ಗಮನ ಹರಿಸಿಲ್ಲ ಎಂದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

CEX.IO Bitcoin Exchange

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!