Saturday , January 19 2019
ಕೇಳ್ರಪ್ಪೋ ಕೇಳಿ
Home / Gulf News / ಅಬುದುಬೈನಲ್ಲಿ ಟೈಗರ್ ಜಿಂದಾ ಹೇ ಶೂಟಿಂಗ್ ಕಂಪ್ಲೀಟ್

ಅಬುದುಬೈನಲ್ಲಿ ಟೈಗರ್ ಜಿಂದಾ ಹೇ ಶೂಟಿಂಗ್ ಕಂಪ್ಲೀಟ್

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬು ದುಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕಳೆದ 60 ದಿನಗಳಿಂದ ಈ ತಂಡ ಅಬುದುಬೈನಲ್ಲಿ ಬೀಡು ಬಿಟ್ಟಿತ್ತು. ಸದ್ಯ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ಗೊತ್ತಾಗಿದೆ. ಇನ್ನು, ಚಿತ್ರ ಬಿಡುಗಡೆಗೆ ದಿನಾಂಕ ಕೂಡಾ ನಿಗದಿಯಾಗಿದ್ದು, ಡಿಸೆಂಬರ್ 22ಕ್ಕೆ ಈ ಚಿತ್ರ ತೆರೆಗೆ ಬರಲಿದೆ.


2012 ರ ಸೂಪರ್ ಹಿಟ್ ಚಿತ್ರ ಏಕ್​ ಥಾ ಟೈಗರ್ ಚಿತ್ರದ ಎರಡನೇ ಭಾಗ ಇದು. ಅಲಿ ಅಬ್ಬಾಸ್ ಜಾಫರ್ ಈ ಚಿತ್ರದ ನಿರ್ದೇಶಕ. ಆದಿತ್ಯಾ ಚೋಪ್ರಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಕೂಡಾ ಈ ಚಿತ್ರದಲ್ಲಿ ವಿಲನ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!