Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅಬುದುಬೈನಲ್ಲಿ ಟೈಗರ್ ಜಿಂದಾ ಹೇ ಶೂಟಿಂಗ್ ಕಂಪ್ಲೀಟ್​

ಅಬುದುಬೈನಲ್ಲಿ ಟೈಗರ್ ಜಿಂದಾ ಹೇ ಶೂಟಿಂಗ್ ಕಂಪ್ಲೀಟ್​

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬು ದುಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕಳೆದ 60 ದಿನಗಳಿಂದ ಈ ತಂಡ ಅಬುದುಬೈನಲ್ಲಿ ಬೀಡು ಬಿಟ್ಟಿತ್ತು. ಸದ್ಯ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ಗೊತ್ತಾಗಿದೆ. ಇನ್ನು, ಚಿತ್ರ ಬಿಡುಗಡೆಗೆ ದಿನಾಂಕ ಕೂಡಾ ನಿಗದಿಯಾಗಿದ್ದು, ಡಿಸೆಂಬರ್ 22ಕ್ಕೆ ಈ ಚಿತ್ರ ತೆರೆಗೆ ಬರಲಿದೆ.


2012 ರ ಸೂಪರ್ ಹಿಟ್ ಚಿತ್ರ ಏಕ್​ ಥಾ ಟೈಗರ್ ಚಿತ್ರದ ಎರಡನೇ ಭಾಗ ಇದು. ಅಲಿ ಅಬ್ಬಾಸ್ ಜಾಫರ್ ಈ ಚಿತ್ರದ ನಿರ್ದೇಶಕ. ಆದಿತ್ಯಾ ಚೋಪ್ರಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಕೂಡಾ ಈ ಚಿತ್ರದಲ್ಲಿ ವಿಲನ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!