Monday , May 21 2018
Home / Sandalwood / ಸಾವಲ್ಲೂ ಪ್ರಶ್ನೆಯಾಗಿಯೇ ಉಳಿದ ಸಿಲ್ಕ್​ಸ್ಮಿತಾ…

ಸಾವಲ್ಲೂ ಪ್ರಶ್ನೆಯಾಗಿಯೇ ಉಳಿದ ಸಿಲ್ಕ್​ಸ್ಮಿತಾ…

ಚೆನ್ನೈ : ನಟಿ ಸಿಲ್ಕ್​ ಸ್ಮಿತಾ ಹೆಸರು ಕೇಳದವರೇ ಇಲ್ಲ… ಒಂದರ್ಧತದಲ್ಲಿ ಸಿಲ್ಕ್ ಸ್ಮಿತಾ ದುರಂತ ನಾಯಕಿ. ಸಿಲ್ಕ್ ಜೀವನ ಆಧರಿಸಿ ಡರ್ಟಿ ಫಿಕ್ಚರ್ಸ್​ ಎಂಬ ಚಿತ್ರವೂ ಬಂದು ಸಾಕಷ್ಟು ಹೆಸರು ಮಾಡಿತ್ತು… ಇಂತಹ ಸಿಲ್ಕ್​ ನಮ್ಮಿಂದ ದೂರವಾಗಿ ಈಗ ಬರೋಬ್ಬರಿ 21 ವರ್ಷ…

1960ರಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದ ಸಿಲ್ಕ್​ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿಯ ಕಾರಣದಿಂದ 4ನೇ ತರಗತಿಗೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ಬಲ್ಲ ಮೂಲಗಳ ಪ್ರಕಾರ ಇವರು ತುಂಬಾ ಚಿಕ್ಕ ವಯಸ್ಸಿನಲ್ಲೇ ದಾಂಪತ್ಯಕ್ಕೂ ಕಾಲಿಟ್ಟಿದ್ದರು. ಆದರೆ, ಪತಿ ಸಿಲ್ಕ್​ ಸ್ಮಿತಾರನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ಅವರು ಮದ್ರಾಸು ಅಂದರೆ ಈಗಿನ ಚೆನ್ನೈಗೆ ಬಂದಿದ್ದರು.

ಹೀಗೆ ಚೆನ್ನೈಗೆ ಬಂದ ಸ್ಮಿತಾ ಇಲ್ಲಿ ಸಿನಿಲೋಕಕ್ಕೆ ಕಾಲಿಟ್ಟರು. 1979ರಲ್ಲಿ ತೆರೆ ಕಂಡ ವಂಡಿಚಕ್ರಮ್ ಎಂಬ ಚಿತ್ರದಲ್ಲಿ ಇವರ ಅಭಿನಯ ತುಂಬಾ ಗಮನ ಸೆಳೆದಿತ್ತು. ಇದಾದ ಬಳಿಕ ಸಿಲ್ಕ್​ ಸ್ಮಿತಾ ಸಿನಿಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡರು. ಸುಮಾರು 17 ವರ್ಷ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಇವರು ಸುಮಾರು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಕೆಲ ಚಿತ್ರದಲ್ಲಿ ಸಿಲ್ಕ್ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸಿಲ್ಕ್​ ಸ್ಮಿತಾಗೆ ಅವರದ್ದೇ ಆದ ಫ್ಯಾನ್​ ಫಾಲೋವರ್ಸ್ ಕೂಡಾ ಇದ್ದರು. ಆಗಿನ ಕಾಲದ ಬಹುತೇಕ ಸೂಪರ್​ಸ್ಟಾರ್​ಗಳೊಂದಿಗೆ ಸ್ಮಿತಾ ಸ್ಕ್ರೀನ್​ ಶೇರ್ ಮಾಡಿಕೊಂಡಿದ್ದರು.

ಇಂತಹ ಸಿಲ್ಕ್​ ಸ್ಮಿತಾ 1996ರ ಸೆಪ್ಟೆಂಬರ್ 23 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಚೆನ್ನೈನ ತನ್ನ ಅಪಾರ್ಟ್​ಮೆಂಟ್​ನಲ್ಲಿ ಇವರು ನೇಣಿಗೆ ಶರಣಾಗಿದ್ದರು. ಆದರೆ, ಇವರ ಆತ್ಮಹತ್ಯೆಗೆ ಕಾರಣ ಇಂದಿಗೂ ನಿಗೂಢ. ಕೆಲವರ ಪ್ರಕಾರ ಇದು ಆತ್ಮಹತ್ಯೆ, ಇನ್ನು ಕೆಲವರ ಪ್ರಕಾರ ಕೊಲೆ. ಆದರೆ, ನಿಜ ಏನೆಂಬುದು ಸಿಲ್ಕ್​ ಸ್ಮಿತಾರೊಂದಿಗೇ ಕೊನೆಯಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!