Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ‘ವಿರಾಟ್ ಮತ್ತು ನಾನು ಯಾವುದೇ ಬ್ಯುಸಿನೆಸ್ ಮಾಡುವ ಯೋಚನೆಯಲ್ಲಿಲ್ಲ’

‘ವಿರಾಟ್ ಮತ್ತು ನಾನು ಯಾವುದೇ ಬ್ಯುಸಿನೆಸ್ ಮಾಡುವ ಯೋಚನೆಯಲ್ಲಿಲ್ಲ’

ಮುಂಬೈ : ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಮುಂಬೈಯಲ್ಲಿ ಹೊಸ ರೆಸ್ಟೋರೆಂಟ್​ ತೆರೆಯುತ್ತಾರೆ ಎಂಬ ಸುದ್ದಿ ಮೊನ್ನೆ ಬಹಳ ಹಬ್ಬಿತ್ತು. ಪ್ರಮುಖ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದ್ದವು. ಮುಂಬೈಯಲ್ಲಿ ಇವರಿಬ್ಬರು ಜೊತೆಯಾಗಿ ಖರೀದಿಸಿರುವ ಜಾಗದಲ್ಲೇ ಈ ರೆಸ್ಟೋರೆಂಟ್ ಕೂಡಾ ಕಾರ್ಯಾರಂಭ ನಡೆಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಅನುಷ್ಕಾ ಹೇಳಿದ್ದಾರೆ. ಸದ್ಯದ ವರೆಗೆ ಅಂತಹ ಯೋಚನೆ ಇಲ್ಲ. ಈ ಬಗ್ಗೆ ನಾವು ಯೋಚನೆ ಕೂಡಾ ಮಾಡಿಲ್ಲ. ಈಗ ಹಬ್ಬಿರುವ ಸುದ್ದಿ ಸುಳ್ಳು ಎಂದು ಅನುಷ್ಕಾ ಸ್ಪಷ್ಟಪಡಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!