Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ದೀಪಿಕಾ ಪಡುಕೋಣೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರಂತೆ…! ಹೌದಾ…?

ದೀಪಿಕಾ ಪಡುಕೋಣೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರಂತೆ…! ಹೌದಾ…?

ಮುಂಬೈ : ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಕ್ಯೂಟ್ ಕಪಲ್. ಇವರಿಬ್ಬರ ಪ್ರೇಮಕತೆ ಎಲ್ಲರಿಗೂ ಗೊತ್ತಿರುವಂತಹದ್ದೇ… ಆರಂಭದಲ್ಲಿ ಇವರಿಬ್ಬರು ತಮ್ಮ ಪ್ರೇಮವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರೂ ಈಗ ಅದೆಲ್ಲಾ ಬಹಿರಂಗವಾಗಿದೆ. ಒಂದರ್ಥದಲ್ಲಿ ಈ ಜೋಡಿ ಕೂಡಾ ನಿರಾಳ.

ಇರಲಿ, ಸದ್ಯ ಈ ಜೋಡಿ ಮತ್ತೆ ಸುದ್ದಿಗೆ ಬಂದಿದೆ. ಅದು ನಿಶ್ಚಿತಾರ್ಥದ ವಿಷಯದ ಮೂಲಕ. ದೀಪಿಕಾ ಮತ್ತು ರಣವೀರ್ ಸಿಂಗ್ ಈಗಾಗಲೇ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಗುಟ್ಟಾಗಿ ಇವರಿಬ್ಬರ ಎಂಗೇಜ್​ಮೆಂಟ್ ಮುಗಿದಿದೆ ಎಂಬ ದೊಡ್ಡ ಸುದ್ದಿ ಇದೆ. ಸಂದರ್ಶನವೊಂದರಲ್ಲಿ ರಣವೀರ್ ಮಾತನಾಡಿದ್ದ ರೀತಿ ಮತ್ತು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಮನ ಸೆಳೆದ ದೀಪಿಕಾ ಉಂಗುರ ಈ ಸುದ್ದಿ ಹುಟ್ಟಲು ಕಾರಣ.


ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಣವೀರ್​, ಮದುವೆ ಬಗೆಗಿನ ಚಿಂತನೆ ನಮ್ಮ ಮನಸ್ಸಿನಲ್ಲಿ ದಾಟಿ ಹೋಗಿದೆ. ಇದು ಸಹಜ ಕೂಡಾ ಎಂದು ಹೇಳಿದ್ದರು. ಅಲ್ಲದೆ, ದೀಪಿಕಾ ಜೊತೆಗಿನ ಸಂಬಂಧ ತುಂಬಾ ಪವಿತ್ರವಾಗಿದ್ದು, ದೈವಿಕವಾಗಿದ್ದೂ ಎಂದೂ ಹೇಳಿಕೊಂಡಿದ್ದರು. ಇದಾದ ಸ್ವಲ್ಪ ದಿನಕ್ಕೆ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ದೀಪಿಕಾಗಿಂತಲೂ ಅವರ ಕೈಯಲ್ಲಿದ್ದ ವಿಶಿಷ್ಟ ಉಂಗುರ ಎಲ್ಲರ ಗಮನ ಸೆಳೆದಿತ್ತು. ಬಹುಶಃ ಇದು ನಿಶ್ಚಿತಾರ್ಥದ ಉಂಗುರವೇ ಎಂದು ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!