Monday , July 23 2018
ಕೇಳ್ರಪ್ಪೋ ಕೇಳಿ
Home / Film News / Bollywood / ‘ಏಕಕಾಲದಲ್ಲಿ ಮೂವರನ್ನು ಲವ್ ಮಾಡುತ್ತಿದ್ದೆ…!’

‘ಏಕಕಾಲದಲ್ಲಿ ಮೂವರನ್ನು ಲವ್ ಮಾಡುತ್ತಿದ್ದೆ…!’

ಮುಂಬೈ : ಬಾಲಿವುಡ್​ ನಟ ಸಂಜಯ್​ ದತ್​ ಇತ್ತೀಚಿನ ದಿನಗಳಲ್ಲಿ ತುಂಬಾ ಓಪನ್ ಆಗಿ ಮಾತನಾಡುತ್ತಿದ್ದಾರೆ. ತಮ್ಮ ಜೈಲು ಜೀವನ, ಮಾದಕ ವ್ಯಸನ ಹೀಗೆ ವೈಯಕ್ತಿಕ ಬದುಕಿನ ಬಗ್ಗೆ ದತ್​ ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ. ಈ ಮೂಲಕ ನನ್ನಂತೆ ಯಾರೂ ಆಗಬೇಡಿ ಎಂದೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಾತನಾಡುತ್ತಾ ಸಂಜಯ್ ತನ್ನ ಲವ್ ಅಫೇರ್​ಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಏಕಕಾಲದಲ್ಲಿ ಮೂವರೊಂದಿಗೆ ನಾನು ಅಫೇರ್ ಹೊಂದಿದ್ದೆ ಎನ್ನುವುದು ಸಂಜಯ್ ಮಾತು. ಆದರೆ, ಸಂಜಯ್ ಪ್ರೀತಿಗೆ ಬಿದ್ದವರು ಯಾರು ಎಂಬ ಗುಟ್ಟನ್ನು ಸಂಜು ಬಿಟ್ಟು ಕೊಟ್ಟಿಲ್ಲ. ‘ಈ ವಿಚಾರದಲ್ಲಿ ನೀವು ತುಂಬಾ ಜಾಣರಿರಬೇಕು. ಇನ್ನೊಬ್ಬರೊಂದಿಗೆ ಏನು ಆಗುತ್ತಿದೆ ಎಂಬುದು ಮತ್ತೊಬ್ಬರಿಗೆ ಗೊತ್ತಾಗಬಾರದು’ ಎಂದು ಸಂಜಯ್ ಚಟಾಕಿ ಹಾರಿಸಿದ್ದಾರೆ. ಹೀಗೆ ತಮ್ಮ ಪ್ಲೇಬಾಯ್​ ಇಮೇಜ್ ಬಗ್ಗೆ ಮಾತನಾಡಿರುವ ಸಂಜಯ್​, ಸುಂದರ ಪ್ರೀತಿಯ ಕ್ಷಣಗಳು ಅದ್ಭುತ ಎಂದು ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!