Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅತ್ಯಾಚಾರ ಆರೋಪ : ಚೆನ್ನೈ ಎಕ್ಸ್​ಪ್ರೆಸ್​ ನಿರ್ಮಾಪಕ ಅರೆಸ್ಟ್

ಅತ್ಯಾಚಾರ ಆರೋಪ : ಚೆನ್ನೈ ಎಕ್ಸ್​ಪ್ರೆಸ್​ ನಿರ್ಮಾಪಕ ಅರೆಸ್ಟ್

ಹೈದರಾಬಾದ್ : ಬಾಲಿವುಡ್​​​ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಈಗ ಅತ್ಯಾಚಾರದ ಆರೋಪ ಕೇಳಿ ಬಂದಿದೆ. 25 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಕರೀಂ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಕರೀಂ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಮೊನ್ನೆ ದೂರು ನೀಡಿದ್ದರು. ಇದಾದ ಬಳಿಕ ಕರೀಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕೂಡಾ ಹೈದರಾಬಾದ್ ಹೈಕೋರ್ಟ್ನಲ್ಲಿ ವಜಾ ಆಗಿತ್ತು. ಈ ಹಿನ್ನೆಲೆಯಲ್ಲಿ ಹಯಾತ್ನಗರ ಪೊಲೀಸ್ ಠಾಣೆಗೆ ಕರೀಂ ಶರಣಾಗಿದ್ದರು. ಚೆನ್ನೈ ಎಕ್ಸ್‌ ಪ್ರೆಸ್‌, ದಿಲ್ ವಾಲೆ, ಹ್ಯಾಪಿ ನ್ಯೂಇಯರ್ ಮತ್ತು ರಾ ಒನ್ ಸೇರಿದಂತೆ ಹಲವು ಚಿತ್ರಗಳನ್ನು ಮೊರಾನಿ ನಿರ್ಮಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!