Sunday , February 17 2019
ಕೇಳ್ರಪ್ಪೋ ಕೇಳಿ
Home / Sandalwood / ಸ್ಕ್ರೀನ್ ಶೇರ್​​ ಮಾಡಿಕೊಳ್ಳುತ್ತಾರಾ ಕಿಚ್ಚ ಸುದೀಪ್, ಪವರ್​ಸ್ಟಾರ್ ಪುನೀತ್​…?

ಸ್ಕ್ರೀನ್ ಶೇರ್​​ ಮಾಡಿಕೊಳ್ಳುತ್ತಾರಾ ಕಿಚ್ಚ ಸುದೀಪ್, ಪವರ್​ಸ್ಟಾರ್ ಪುನೀತ್​…?

ಬೆಂಗಳೂರು : ಸ್ಯಾಂಡಲ್​ವುಡ್ ಇತಿಹಾಸದಲ್ಲಿ ಮಲ್ಟಿಸ್ಟಾರ್​​​ಗಳಿರುವ ಸಿನೆಮಾಗಳು ಬಂದಿವೆ. ಆದರೆ, ಇವುಗಳ ಸಂಖ್ಯೆ ಕಡಿಮೆ. ಒಂದೇ ಚಿತ್ರಗಳಲ್ಲಿ ಹಲವು ಖ್ಯಾತ ಕಲಾವಿದರನ್ನು ನೋಡುವುದೆಂದರೆ ಅದು ಕಣ್ಣಿಗೆ ಹಬ್ಬ… ಈ ಹಿಂದೆ ರವಿಚಂದ್ರನ್​ ಸಿನೆಮಾಗಳಲ್ಲಿ ಇಂತಹ ಖುಷಿ ಸಿಗುತ್ತಿತ್ತು… ರವಿಚಂದ್ರನ್​​​​ ತಮ್ಮ ಸಿನೆಮಾದಲ್ಲಿ ಹಲವು ಕಲಾವಿದರನ್ನು ಹಾಕಿಕೊಂಡು ಗೆದ್ದಿದ್ದರು. ಇವಷ್ಟೇ ಅಲ್ಲದೆ, ಇನ್ನಿತರ ಒಂದಷ್ಟು ಸಿನೆಮಾಗಳಲ್ಲೂ ಬೇರೆ ಬೇರೆ ಕಲಾವಿದರು ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ತೆರೆಯನ್ನು ಜಗಮಗಿಸುತ್ತಿದ್ದರು. ಜೊತೆಗೆ ಸಿನಿಮಾ ಲೋಕವನ್ನೂ ಶ್ರೀಮಂತಗೊಳಿಸುತ್ತಿದ್ದರು…

ಸದ್ಯ ಎರಡು ಚಿತ್ರಗಳು ಕನ್ನಡದಲ್ಲಿ ಮಲ್ಪಿಸ್ಟಾರ್​ಗಳಿರುವ ಕಾರಣದಿಂದಲೂ ಸೌಂಡ್ ಮಾಡುತ್ತಿದೆ. ಅದು ಒಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಪ್ರೇಮ್​ ನಿರ್ದೇಶನದಲ್ಲಿ ಶಿವಣ್ಣ ಮತ್ತು ಸುದೀಪ್ ಅಭಿನಯಿಸುತ್ತಿರುವ ದಿ ವಿಲನ್​… ಕುರುಕ್ಷೇತ್ರದ ಒಂದು ಪೌರಾಣಿಕ ಚಿತ್ರ. ಇದರಲ್ಲಿ ಹಲವು ಖ್ಯಾತನಾಮರೆಲ್ಲಾ ಅಭಿನಯಿಸುತ್ತಿದ್ದಾರೆ… ಇನ್ನು, ದಿ ವಿಲನ್ ಕೂಡಾ ಒಂದು ಮಾಸ್​ ಸಿನೆಮಾ… ಇದೇ ಮೊದಲ ಬಾರಿಗೆ ಶಿವರಾಜ್​ ಕುಮಾರ್ ಮತ್ತು ಸುದೀಪ್ ಇಲ್ಲಿ ಜೊತೆಯಾಗಿದ್ದಾರೆ…

ಈ ಎರಡೂ ಚಿತ್ರಗಳು ಈಗ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಈ ನಡುವೆ, ಮತ್ತೊಂದು ಮಲ್ಟಿಸ್ಟಾರ್ ಚಿತ್ರದ ಮಾತು ಕನ್ನಡದಲ್ಲಿ ಕೇಳಿ ಬರುತ್ತಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬೋದರೆ ಸುದೀಪ್ ಮತ್ತು ಪುನೀತ್​ ಅವರನ್ನು ಒಂದೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆಯಂತೆ…

ಸುದೀಪ್​ ಶಿವರಾಜ್​ಕುಮಾರ್ ಅವರೊಂದಿಗೆ ಅಭಿನಯಿಸುತ್ತಿರುವ ಬೆನ್ನಲ್ಲೇ ಗಾಂಧೀನಗರದ ಗಲ್ಲಿಗಲ್ಲಿಗಳಲ್ಲಿ ಇಂತಹದ್ದೊಂದು ಸುದ್ದಿ ಚಾಲ್ತಿಗೆ ಬಂದಿದೆ. ಈ ಸುದ್ದಿ ಕೇಳಿದಾಗಲೇ ಅಭಿಮಾನಿಗಳ ಮೈಯೆಲ್ಲಾ ರೋಮಾಂಚನವಾಗಿದೆ. ಯಾಕೆಂದರೆ, ಇಬ್ಬರು ಸ್ಟಾರ್ ನಟರು ಒಟ್ಟಾಗಿ ತೆರೆಯಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ಅದೆಷ್ಟೋ ಅಭಿಮಾನಿಗಳ ಹೆಬ್ಬಯಕೆಯೂ ಹೌದು… ಸದ್ಯ ಹರಿದಾಡುತ್ತಿರುವ ಸುದ್ದಿಯೇ ನಿಜವಾಗಿದ್ದರೆ ಅಭಿಮಾನಿಗಳ ಕನಸು ಬಹುಬೇಗ ನನಸಾಗಲಿದೆ.

ಸುದೀಪ್ ಮತ್ತು ಪುನೀತ್​ ಜೊತೆಯಾಗಿ ನಟಿಸುಯತ್ತಾರೆ ಎಂಬ ಸುದ್ದಿಗೆ ಇನ್ನಷ್ಟು ವೇಗ ಪಡೆಯಲು ಕಾರಣ ನಿರ್ಮಾಪಕ ಸಿ.ಆರ್.ಮನೋಹರ್​. ಮನೋಹರ್ ಅವರು ತಮಿಳಿನ ಸೂಪರ್​ಹಿಟ್​​ ಚಿತ್ರ ವಿಕ್ರಂವೇದದ ರಿಮೇಕ್​​ ರೈಟ್ಸ್ ಪಡೆದಿದ್ದಾರಂತೆ. ಹೀಗೆ ರಿಮೇಕ್ ರೈಟ್ಸ್ ಪಡೆದುಕೊಂಡು ಬಂದಿರುವ ಮನೋಹರ್ ಮನಸ್ಸಿನಲ್ಲಿ ಸುದೀಪ್ ಮತ್ತು ಪುನೀತ್ ಈ ಚಿತ್ರ ಮಾಡಬೇಕೆಂನ ಹೆಬ್ಬಯಕೆಯ ಇದೆಯಂತೆ.. ಇದಕ್ಕಾಗಿ ಮಾತುಕತೆಗೂ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತದೆ ಸುದ್ದಿ ಮೂಲ.

ತಮಿಳಿನಲ್ಲಿ ವಿಕ್ರಂ ವೇದ ಸಿನಿಮಾದಲ್ಲಿ ಮಾಧವನ್​ ಮತ್ತು ವಿಜಯ್​ ಸೇತುಪತಿ ನಡೆಸಿದ್ದರು. ಕನ್ನಡತಿ ಶೃದ್ಧಾ ಶ್ರೀನಾಥ್​​ ಅವರೂ ವಕೀಲೆಯ ಪಾತ್ರವನ್ನು ನಿರ್ವಹಿಸಿದ್ದರು. ಮಾಧವನ್​ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದರೆ, ವಿಜಯ್ ಸೇತುಪತಿ ಗ್ಯಾಂಗ್​ಸ್ಟರ್​ ಗೆಟಪ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. 11 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದ್ದ ಈ ಚಿತ್ರ ಬಾಕ್ಸ್​ ಆಫೀಸ್​​ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು…

ಸಿ.ಆರ್​.ಮನೋಹರ್ ಈ ಚಿತ್ರದ ರೀಮೇಕ್​ ರೈಟ್ಸ್​ ಪಡೆದುಕೊಂಡಿದ್ದಾರೆ ಎನ್ನುತ್ತಿದೆ ಸದ್ಯದ ಸುದ್ದಿ. ಆದರೆ, ಒಂದೊಮ್ಮೆ ವಿಕ್ರಂವೇದ ರಿಮೇಕ್​ ಮಾಡದರೂ ಅದರಲ್ಲಿ ಸುದೀಪ್ ಮತ್ತು ಪುನೀತ್ ಪಾತ್ರ ಯಾವುದಿರಬಹುದು ಎಂಬ ಕುತೂಹಲ ಕೂಡಾ ಇಲ್ಲದೇ ಇರದು… ಆದರೆ, ಒಳ್ಳೆಯ ಕತೆ ಸಿಕ್ಕರೆ ನಾವು ಖಂಡಿತಾ ಜೊತೆಯಾಗಿ ಕತೆ ಮಾಡುತ್ತೇವೆ ಎಂದು ಈ ಹಿಂದೆಯೇ ಪುನೀತ್ ಮತ್ತು ಸುದೀಪ್ ಹೇಳಿದ್ದರು. ಸದ್ಯದ ಪರಿಸ್ಥಿತಿ ಒಂದಕ್ಕೊಂದು ತಾಳೆಯಾದಂತೆ ಕಾಣುತ್ತಿದೆ. ಆದರೆ, ಇದು ಈಗ ಬರೀ ಸುದ್ದಿ ಅಷ್ಟೇ. ಅಧಿಕೃತ ಸುದ್ದಿಗೆ ಇನ್ನೂ ಒಂದಷ್ಟು ದಿನ ಕಾಯಲೇಬೇಕಾಗಿದೆ… ಏನೇ ಆದರೂ ಮಲ್ಟಿಸ್ಟಾರ್​ಗಳು ಇರುವ ಚಿತ್ರಗಳನ್ನು  ನೋಡುವುದೇ ಒಂದು ಖುಷಿ. ಇಂತಹ ಚಿತ್ರಗಳು ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆಯೂ ಹೌದು. ಹೀಗಾಗಿ, ಮಲ್ಟಿಸ್ಟಾರ್​ಗಳು ಇರುವ ಹೆಚ್ಚೆಚ್ಚು ಸಿನೆಮಾ ಬರುತ್ತಿರಲಿ ಎಂಬುದೇ ಎಲ್ಲರ ಹಾರೈಕೆ…

 

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!