Sunday , November 18 2018
ಕೇಳ್ರಪ್ಪೋ ಕೇಳಿ
Home / Sandalwood / ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಆಮಿ ಈಗ ಹಾಲಿವುಡ್​ ಸೂಪರ್​ ಗರ್ಲ್​​​​…!

ಚೆನ್ನೈ : ಹಾಲ್ಬಣ್ಣದ ಚೆಲುವೆ ಆಮಿ ಜಾಕ್ಸನ್ ಈಗ ಬಣ್ಣದ ಲೋಕದಲ್ಲಿ ಸಖತ್ ಬ್ಯುಸಿ. ಈ ವಿದೇಶಿ ಚೆಲುವೆ ಈಗ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಆಮಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈ ನಡುವೆ, ಹಾಲಿವುಡ್​ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಆಮಿ ಜಾಕ್ಸನ್​​…

ಆಮಿ ಜಾಕ್ಸನ್​… ಬ್ರಿಟಿಷ್​ ಬೆಡಗಿ… ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಬಂದಿರುವ ಆಮಿ ಕಾಲಿವುಡ್​, ಟಾಲಿವುಡ್​​ನಲ್ಲಿ ಚಿರಪರಿಚಿತ ಹೆಸರು… ತಮಿಳು, ತೆಲುಗಿನ ಹಲವು ಸೂಪರ್​ಹಿಟ್​ ಚಿತ್ರಗಳಲ್ಲಿ ಮಿಂಚಿರುವವರು ಆಮಿ… ಬೋಲ್ಡ್​​ ಮತ್ತು ಕ್ಲಾಸಿಕ್ ಎರಡೂ ಪಾತ್ರವನ್ನೂ ನಿರ್ವಹಿಸಿ ಗೆದ್ದವರು ಈ ಬೆಡಗಿ… ಸದ್ಯ ಕನ್ನಡಕ್ಕೂ ಆಮಿ ಬಂದಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಕಿಚ್ಚ ಸುದೀಪ್ ಮತ್ತು ಶಿವರಾಜ್​ ಕುಮಾರ್​ ಅಭಿನಯದ ದಿ ವಿಲನ್​ ಚಿತ್ರಕ್ಕೆ ಆಮಿಯೇ ನಾಯಕಿ… ಚಿಕ್ಕಮಗಳೂರಿನ ಹಸಿರ ತಾಣದಲ್ಲಿ ಈ ಚಿತ್ರದ ಶೂಟಿಂಗ್ ಕೂಡಾ ನಡೆದಿದೆ… ಈ ಬಿಗ್​ಬಜೆಟ್​ ಚಿತ್ರದ ಮೂಲಕ ಆಮಿ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ…

ಅದೂ ಅಲ್ಲದೆ, ಸೂಪರ್​ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದಲ್ಲೂ ಆಮಿ ನಾಯಕಿ… ಶಂಕರ್​ ನಿರ್ದೇಶನದ ಚಿತ್ರ ಇದು. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಆಮಿಗೂ ಸಾಕಷ್ಟು ಹೆಸರು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ… ಇಂತಹ ಆಮಿ ಈಗ ಸೂಪರ್​ ಗರ್ಲ್​​. ಹಾಲಿವುಡ್​​ನಲ್ಲಿ ಸ್ಟಂಟ್​ ಗರ್ಲ್​ ಪಾತ್ರ ಮಾಡಲು ಹೊರಟಿದ್ದಾರೆ ಆಮಿ. ಇದು ಇಲ್ಲಿ ಪ್ರಖ್ಯಾತ ಟಿವಿ ಸೀರಿಯಲ್​. ಹೆಸರು ಸೂಪರ್​ ಗರ್ಲ್. ಈ ಸೀರಿಯಲ್​ನಲ್ಲಿ ಆಮಿಯದ್ದು ಕೂಡಾ ಪ್ರಮುಖ ಪಾತ್ರ. ಇದು ಈ ಸರಣಿಯ ಮೂರನೇ ಸೀರಿಯಲ್​. ಇದೊಂದು ಆಕ್ಷನ್ ಅಡ್ವೆಂಚರ್​ ಸೀರಿಯಲ್​.


ಈ ಸುದ್ದಿಯನ್ನು ಆಮಿ ತಮ್ಮ ಟ್ವಿಟರ್​ನಲ್ಲಿ ದೃಢಪಡಿಸಿದ್ದಾರೆ. ಹೀಗಾಗಿ, ಈ ಚಿತ್ರದ ಶೂಟಿಂಗ್​ಗಾಗಿ ಆಮಿ ಕೆನಡಾಕ್ಕೂ ಹಾರಲಿದ್ದಾರೆ… ಹಾಲಿವುಡ್​, ಕಾಲಿವುಡ್​, ಟಾಲಿವುಡ್​, ಸ್ಯಾಂಡಲ್​ವುಡ್​ ಹೀಗೆ ಹಲವು ವುಡ್​​ಗಳಲ್ಲಿ ಜಾಕ್ಸನ್​ ಆಕ್ಷನ್ ಮೋಡಿ ಎಲ್ಲರ ಗಮನ ಸೆಳೆದಿದೆ… ಈಗ ಈ ಅಡ್ವೆಂಚರ್​ ಸೀರಿಯಲ್ ಮೂಲಕ ಆಮಿ ಮೋಡಿ ಮಾಡಲು ಹೊರಟ್ಟಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!