Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Bollywood / Viral: ಡಿಂಪಲ್​​ ಸನ್ನಿ ಡಿಯೋಲ್​ ಕೈ ಹಿಡಿದುಕೊಂಡಿದ್ದೇ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ…!

Viral: ಡಿಂಪಲ್​​ ಸನ್ನಿ ಡಿಯೋಲ್​ ಕೈ ಹಿಡಿದುಕೊಂಡಿದ್ದೇ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ…!

ಮುಂಬೈ : ನಿಮಗೆ ಇಷ್ಟ ಇರಲಿ, ಇಲ್ಲದೇ ಇರಲಿ. ಸದ್ಯ ಸೋಶಿಯಲ್​ ಮೀಡಿಯಾದಿಂದ ನೀವು ಪಾರಾಗುವುದಕ್ಕೆ ಸಾಧ್ಯವೇ ಇಲ್ಲ. ಜಸ್ಟ್ ಒಂದು ವಾರದ ಹಿಂದೆ ರಣಬೀರ್ ಕಪೂರ್ ಮತ್ತು ಪಾಕಿಸ್ತಾನದ ನಟಿ ಮಹಿರಾ ಖಾನ್​​ ನ್ಯೂಯಾರ್ಕ್​ನಲ್ಲಿದ್ದ ಫೋಟೋ ವೈರಲ್ ಆಗಿತ್ತು. ಇದೀಗ ಡಿಂಪಲ್​ ಕಪಾಡಿಯಾ ಮತ್ತು ಸನ್ನಿ ಡಿಯೋಲ್ ಸರದಿ.. ಡಿಂಪಲ್ ಸನ್ನಿ ಕೈ ಹಿಡಿದದ್ದೇ ಟ್ವಿಟರ್​ನಲ್ಲಿ ಈ ದೊಡ್ಡ ಟ್ರೆಂಡ್ ಆಗಿದೆ.

ಡಿಂಪಲ್ ಮತ್ತು ಸನ್ನಿ ಬಾಲಿವುಡ್​ನಲ್ಲಿ ಮಾಜಿ ಪ್ರೇಮ ಪತಂಗಗಳು ಎಂಬುದು ಸುದ್ದಿ. ಕಳೆದ ತಿಂಗಳು ಲಂಡನ್​ನಲ್ಲಿದ್ದ ಈ ಜೋಡಿ  ಒಂದಷ್ಟು ಜಾಗಗಳಿಗೆ ಹೋಗಿ ಭೇಟಿ ನೀಡಿತ್ತಂತೆ. ಈ ಬಗ್ಗೆ ಮುಂಬೈ ಮಿರರ್​ ವರದಿ ಮಾಡಿತ್ತು. ಇದನ್ನು ಸ್ವಯಂ ಘೋಷಿತ ಚಿತ್ರ ವಿಮರ್ಶಕ ಕಮಾಲ್ ಆರ್​ ಖಾನ್​​​ ಟ್ವಿಟರ್​ನಲ್ಲಿ ಮೊದಲ ಬಾರಿಗೆ ಇವರಿಬ್ಬರ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಅಲ್ಲದೆ, ಸನ್ನಿ ಮತ್ತು ಡಿಂಪಲ್​ ತಮ್ಮ ರಜಾ ದಿನಗಳನ್ನು ಸುಂದರವಾಗಿ ಕಳೆಯುತ್ತಿದ್ದಾರೆ. ಇವರಿಬ್ಬರು ಸುಂದರ ಜೋಡಿಯಂತೆ ಕಾಣಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.


ಯಾವಾಗ ಖಾನ್​ ಇಂತಹದ್ದೊಂದು ಟ್ವೀಟ್ ಹಾಕಿದರೋ ಅದಕ್ಕೆ ಸರಣಿಯಾಗಿ ಇಂತಹದ್ದೇ ಅಭಿಪ್ರಾಯದ ಟ್ವೀಟ್​ಗಳು ಬರಲಾರಂಭಿಸಿತು. ಕೆಲವರು 80 ರ ದಶಕದಲ್ಲಿ ಸನ್ನಿ ಮತ್ತು ಡಿಂಪಲ್ ನಡುವೆ ಕೇಳಿ ಬರುತ್ತಿದ್ದ ಪ್ರೇಮ ಕತೆಯನ್ನೂ ನೆನಪಿಸಿಕೊಳ್ಳುವುದಕ್ಕೆ ಆರಂಭಿಸಿದ್ದರು.


ಡಿಂಪಲ್​ ಕಪಾಡಿಯಾ ಮತ್ತು ಸನ್ನಿ ಡಿಯೋಲ್​ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬಳಿಕ ಇವರಿಬ್ಬರ ನಡುವೆ ಪ್ರೀತಿ ಇತ್ತು ಎನ್ನಲಾಗಿತ್ತು. ಅದೂ ಅಲ್ಲದೆ, ಪ್ರತ್ಯೇಕ ಮದುವೆಯ ಬಳಿಕವೂ ಇವರಿಬ್ಬರ ಪ್ರೀತಿ ಮುಂದುವರಿದಿತ್ತಂತೆ. ಇನ್ನು, ಡಿಂಪಲ್ ರಾಜೇಶ್ ಖನ್ನಾರಿಂದ ದೂರ ಆಗುವುದಕ್ಕೂ ಸನ್ನಿ ಕಾರಣ ಅನ್ನುತ್ತದೆ ಕೆಲವು ಮಾಧ್ಯಮಗಳ ವರದಿ. ಆದರೆ, ಇವರಿಬ್ಬರ ಪ್ರೀತಿಯ ವಿಚಾರ ಬರೀ ಸುದ್ದಿಯಷ್ಟೇ. ಇದುವರೆಗೆ ಇದನ್ನು ದೃಢಪಡಿಸಿದವರು ಯಾರೂ ಇಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!