Saturday , September 22 2018
ಕೇಳ್ರಪ್ಪೋ ಕೇಳಿ
Home / Film News / Mollywood / ನಾಳೆ ದಿಲೀಪ್​ ‘ರಾಮಲೀಲಾ’ ಚಿತ್ರ ರಿಲೀಸ್​ : ಕೇಳಿ ಬಂದಿದೆ ಬಹಿಷ್ಕಾರದ ಕೂಗು

ನಾಳೆ ದಿಲೀಪ್​ ‘ರಾಮಲೀಲಾ’ ಚಿತ್ರ ರಿಲೀಸ್​ : ಕೇಳಿ ಬಂದಿದೆ ಬಹಿಷ್ಕಾರದ ಕೂಗು

ತಿರುವನಂತಪುರಂ : ನಟ ದಿಲೀಪ್​. ಮಾಲಿವುಡ್​ ಸ್ಟಾರ್​.  ತನ್ನ ಅಭಿನಯ, ಕಾಮಿಡಿ ಮೂಲಕವೇ ಗಮನ ಸೆಳೆದಿದ್ದ ನಟ ದಿಲೀಪ್​​.. ತನ್ನ ಪ್ರತಿಭೆಯ ಮೂಲಕವೇ ಕಚಗುಳಿ ಇಡುತ್ತಿದ್ದ ಈ ಕಲಾವಿದ ಈಗ ಕೇರಳದ ಬಹುತೇಕರ ಕಣ್ಣಿನಲ್ಲಿ ವಿಲನ್​​​…ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಷಡ್ಯಂತ್ರ ರೂಪಿಸಿದ್ದ ಆರೋಪ ದಿಲೀಪ್​ ಮೇಲಿದೆ… ಹೀಗಾಗಿ, ಜುಲೈ 10ರಿಂದ ದಿಲೀಪ್​ ಜೈಲಿನಲ್ಲಿದ್ದಾರೆ… ಜಾಮೀನಿಗೆ ಎಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಮೇಲಿಂದ ಮೇಲೆ ಅದು ವಜಾ ಆಗುತ್ತಲೇ ಇದೆ… ಹೀಗಾಗಿ, ಸದ್ಯಕ್ಕಂತೂ ದಿಲೀಪ್​ಗೆ ಬಿಡುಗಡೆ ಭಾಗ್ಯವಿಲ್ಲ. ಆದರೆ, ಜೈಲಿನಲ್ಲಿರೋ ದಿಲೀಪ್​ ನಟಿಸಿದ ಚಿತ್ರಕ್ಕೆ ರಿಲೀಸ್ ಭಾಗ್ಯ ಬಂದಿದೆ… ಆ ಚಿತ್ರವೇ ರಾಮಲೀಲಾ…

ಈ ರಾಮಲೀಲಾ ಸೆಪ್ಟೆಂಬರ್​ 28ಕ್ಕೆ ಬಿಡುಗಡೆಗೆ ಸಜ್ಜಾಗಿದೆ… ದಿಲೀಪ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ದಿಲೀಪ್​ ಜೈಲು ಜೀವನದ ಕಾರಣದಿಂದ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ.. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಜುಲೈಗೇ ತೆರೆ ಕಾಣಬೇಕಾಗಿತ್ತು. ಆದರೆ, ಅದು ಆಗಿರಲಿಲ್ಲ. ಈಗ ಇದೇ ವಾರ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಅಷ್ಟರಲ್ಲೇ ವಿರೋಧದ ಮಾತುಗಳು ಕೇಳಲಾರಂಭಿಸಿದೆ…

ರಾಮಲೀಲಾ ಚಿತ್ರಕ್ಕೆ ಈಗ ಬಹಿಷ್ಕಾರದ ಮಾತುಗಳು ಕೇಳಿ ಬರುತ್ತಿದೆ. ಈ ಬಹಿಷ್ಕಾರದ ಕಿಡಿಯನ್ನು ಮೊದಲು ಹೊತ್ತಿಸಿದ್ದ ಕೇರಳದ ಪ್ರಮುಖ ಬರಹಗಾರರಾದ ಶಾರದಾಕುಟ್ಟಿ… ದಿಲೀಪ್​​​​ ಅಪರಾಧ ಮತ್ತು ಅಕ್ರಮ ಕೆಲಸ ಮಾಡಿದ್ದಾರೆ. ಹಲವಾರು ಪ್ರಭಾವಿ ಕಲಾವಿದರು ಮತ್ತು ರಾಜಕೀಯ ನಾಯಕರು ದಿಲೀಪ್​ಗೆ ಬೆಂಬಲ ನೀಡಿದ್ದಾರೆ. ಆದರೆ, ಸಂಕಷ್ಟಕ್ಕೀಡಾದ ನಟಿಯ ಬೆಂಬಲಕ್ಕೆ ತುಂಬಾ ಜನ ಬಂದಿಲ್ಲ ಎಂಬ ನೇರ ಆರೋಪ ಶಾರದಾ ಕುಟ್ಟಿ ಅವರದ್ದು. ಹೀಗಾಗಿ, ನಾನು ದಿಲೀಪ್ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು ಎಂದು ಶಾರದಾ ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಹಿಷ್ಕಾರದ ಧ್ವನಿಗೆ ಹಲವರು ಬೆಂಬಲಿಸಿದ್ದಾರೆ. ಇದು ನಿರ್ದೇಶಕ ಗೋಪಿ ಅವರನ್ನು ಸಂಕಷ್ಟಕ್ಕೆ ತಳ್ಳಿದೆ. ನಾನು ಈ ಚಿತ್ರವನ್ನು ಮಾಡಲು ನಾಲ್ಕು ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ. ಇದು ನನ್ನ ಮೊದಲ ಚಿತ್ರ. ಈ ಚಿತ್ರದ ಮೂಲಕ ನನ್ನ ಕೆಲಸವನ್ನು ಜನ ನೋಡಬೇಕೆಂಬ ಆಸೆ ನನ್ನದು ಎಂದು ಗೋಪಿ ಹೇಳಿಕೊಂಡಿದ್ದಾರೆ.  ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್​ ಕೂಡಾ ಈ ಬಹಿಷ್ಕಾರದ ಕೂಗನ್ನು ವಿರೋಧಿಸಿದ್ದಾರೆ. ಚಿತ್ರ ಬಿಡುಗಡೆಯನ್ನು ತಡೆಯುವ ಹಕ್ಕು ನಮಗೆ ಯಾರಿಗೂ ಇಲ್ಲ. ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪ್ರೇಕ್ಷಕರಿಗೆ ಬಿಟ್ಟು ಬಿಡೋಣ ಎಂದು ಮಂಜು ಹೇಳಿದ್ದಾರೆ. ಮಂಜು ವಾರಿಯರ್ ಅಭಿನಯದ ‘ಉದಹರಣಮ್​​ ಸುಜಾತ’ ಚಿತ್ರವೂ ಇದೇ ದಿನ ತೆರೆಗೆ ಬರುತ್ತಿದೆ.

ರಾಮಲೀಲಾ ಒಂದು ಬಿಗ್​ಬಜೆಟ್​ ಚಿತ್ರ. ಮಾಲಿವುಡ್​ನ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ… ದಿಲೀಪ್ ಸದ್ಯ ಜೈಲಿನಲ್ಲಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಷಡ್ಯಂತ್ರ ರೂಪಿಸಿದ ಆರೋಪ ದಿಲೀಪ್​ ಮೇಲಿದೆ. ಇದೇ ವರ್ಷದ ಫ್ರೆಬ್ರವರಿಯಲ್ಲಿ ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ನಟಿಯನ್ನು ಕಾರಿನಲ್ಲಿ ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಕಾಟ ಕೊಡಲಾಗಿತ್ತು. ಈ ಪ್ರಕರಣ ಮಾಲಿವುಡ್ ಮಾತ್ರವಲ್ಲದೆ, ಇಡೀ ಚಿತ್ರರಂಗವನ್ನು ಬೆಚ್ಚಿ ಬೀಳಿಸಿತ್ತು. ಘಟನೆಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು… ಇದಾದ ಬಳಿಕ ಪಲ್ಸರ್ ಸುನಿ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿತ್ತು. ಈ ಬಂಧನದ ಬಳಿಕ ದಿಲೀಪ್​​​​​ ಕೂಡಾ ಜೈಲು ಹಕ್ಕಿ ಆಗಿದ್ದರು..

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ತಿರುವನಂತಪುರಂ : ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಮಾಧವನ್​ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ …

Leave a Reply

Your email address will not be published. Required fields are marked *

error: Content is protected !!