Monday , September 24 2018
ಕೇಳ್ರಪ್ಪೋ ಕೇಳಿ
Home / Interval / ಪ್ರಿಯಾಂಕಾ ಚೋಪ್ರಾರಿಗೆ ಟ್ರಾಫಿಕ್ ಸಿಗ್ನಲ್‍ನಲ್ಲಿ `ಮುಜ್‍ಸೇ ಶಾದಿ ಕರೋಗಿ’ ಎಂದ ಪೋರರು…!

ಪ್ರಿಯಾಂಕಾ ಚೋಪ್ರಾರಿಗೆ ಟ್ರಾಫಿಕ್ ಸಿಗ್ನಲ್‍ನಲ್ಲಿ `ಮುಜ್‍ಸೇ ಶಾದಿ ಕರೋಗಿ’ ಎಂದ ಪೋರರು…!

ಅದು 2004ರ ಸಮಯ. ನಿರ್ದೇಶಕ ಡೇವಿಡ್ ಧವನ್ ಒಂದು ಸಿನೆಮಾ ತೆಗೆದರು. ಆ ಸಿನೆಮಾದ ಟೈಟಲ್ `ಮುಜ್‍ಸೇ ಶಾದಿ ಕರೋಗಿ’. ಇದು ರೊಮ್ಯಾಂಟಿಕ್ ಕಾಮಿಡಿ ಫಿಲಂ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಈ ಚಿತ್ರದ ನಾಯಕ ನಾಯಕಿಯರು. ಈ ಸಿನೆಮಾ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದ ಟೈಟಲ್ ಟ್ರ್ಯಾಕ್ `ಮುಜ್‍ಸೇ ಶಾದಿ ಕರೋಗಿ’ ಕೂಡಾ ಆಗ ಸಖತ್ ಹಿಟ್ ಆಗಿತ್ತು.

ಒಂದು ಸಲ ಪ್ರಿಯಾಂಕಾ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಿಯಾಂಕಾ ಪ್ರಯಾಣಿಸುತ್ತಿದ್ದ ಈ ಕಾರು ಮುಂಬೈನ ಟ್ರಾಫಿಕ್‍ನಲ್ಲಿ ಸಿಕ್ಕಾಕ್ಕೊಂಡಿತ್ತು. ಈ ಟ್ರಾಫಿಕ್‍ನಲ್ಲಿ ಪೇಪರ್ ಮಾರುತ್ತಾ ಒಬ್ಬ ಹುಡುಗ ಬಂದ. ಆತ ಪ್ರಿಯಾಂಕಾರನ್ನು ನೋಡಿದ. ಆದರೆ, ಆ ಹುಡುಗನಿಗೆ ಇದು ಪ್ರಿಯಾಂಕಾನೇ ಎಂದು ಖಾತ್ರಿಯಾಗಲಿಲ್ಲ. ಹೀಗಾಗಿ, ಕಾರಿನ ಹತ್ತಿರಕ್ಕೆ ಬಂದು ನೋಡಿದ. ಆಗ ಕಾರಿನೊಳಗಿದ್ದದ್ದು ಪ್ರಿಯಾಂಕಾನೇ ಎಂಬುದು ಆ ಹುಡುಗನಿಗೆ ಪಕ್ಕಾ ಆಗಿತ್ತು.

ಇಷ್ಟೇ ಸಾಕಿತ್ತು. ಆ ಹುಡುಗ ಖುಷಿಯಿಂದಲೇ ಅಲ್ಲೇ ಇದ್ದ ಪೇಪರ್ ಮಾರುವ ಇತರ ತನ್ನ ಸ್ನೇಹಿತರನ್ನು ಕರೆದ. ಕ್ಷಣಾರ್ಧದಲ್ಲಿ ಎಂಟರಿಂದ ಹತ್ತು ಮಕ್ಕಳು ಅಲ್ಲಿ ಹಾಜರ್. ಪ್ರಿಯಾಂಕಾ ಮಕ್ಕಳನ್ನು ಕಂಡು ತನ್ನ ತಲೆಕೂದಲಿನ ಸಹಾಯದಿಂದ ಮುಖವನ್ನು ಮುಚ್ಚಿಕೊಂಡರು. ಆಗ ಆ ಹುಡುಗರು ಒಂದು ಹಾಡನ್ನು ಜೋರಾಗಿ ಹಾಡಿದರು. ಅದೇ `ಮುಜ್‍ಸೇ ಶಾದಿ ಕರೋಗಿ’ ಚಿತ್ರದ ಟೈಟಲ್ ಟ್ರಾಕ್ `ಮುಜ್‍ಸೇ ಶಾದಿ ಕರೋಗಿ’…

ಮಕ್ಕಳ ಬಾಯಲ್ಲಿ ಈ ಹಾಡು ಕೇಳಿ ಪ್ರಿಯಾಂಕಾಗೆ ಖುಷಿಯೋ ಖುಷಿ. ಕಾರಿನ ಕಿಟಕಿಯ ಗಾಜನ್ನು ತೆರೆದು ಮಕ್ಕಳತ್ತ ಕೈ ಬೀಸಿದರು. ಅಷ್ಟರಲ್ಲಿ ಸಿಗ್ನಲ್ ಕೂಡಾ ಬಿಟ್ಟಿತ್ತು. ಪ್ರಿಯಾಂಕಾರಿದ್ದ ಕಾರು ಮುಂದಕ್ಕೆ ಹೋಯ್ತು… ಮಕ್ಕಳು ಅದೇ ಕಾರನ್ನು ಬೆನ್ನಟ್ಟಿದರು… ಪ್ರಿಯಾಂಕಾ ಇಂದಿಗೂ ಈ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ… ಇದು ಅವರಿಗೆ ಸಿಕ್ಕ ವಿಶೇಷ ಗೌರವ ಎಂಬುದು ಪ್ರಿಯಾಂಕಾರ ಬಲವಾದ ನಂಬಿಕೆ…

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!