Sunday , April 22 2018
Home / News NOW / `ಜಯಲಲಿತಾ ಇದ್ದ ವಾರ್ಡ್ ನಲ್ಲಿ ಸಿಸಿ ಟಿವಿ ಇರಲಿಲ್ಲ…’

`ಜಯಲಲಿತಾ ಇದ್ದ ವಾರ್ಡ್ ನಲ್ಲಿ ಸಿಸಿ ಟಿವಿ ಇರಲಿಲ್ಲ…’

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸಾವು ಇನ್ನೂ ನಿಗೂಢವಾಗಿದ್ದು, ಅನುಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಮೊನ್ನೆಯಷ್ಟೇ ತಮಿಳುನಾಡಿನ ಅರಣ್ಯ ಸಚಿವ ದಿಂಡಗಲ್ ಶ್ರೀನಿವಾಸನ್ ಜಯಲಲಿತಾ ಇಡ್ಲಿ ತಿನ್ನುತ್ತಿದ್ದರು ಎಂದು ನಾವು ಸುಳ್ಳು ಹೇಳಿದ್ದೇವು ಎಂದು ಹೇಳಿದ್ದರು. ಈ ಮಧ್ಯೆ, ಜಯಲಲಿತಾ ಆಸ್ಪತ್ರೆಯಲ್ಲಿ ಇರುವ ದೃಶ್ಯಗಳು ಎಂದು ಕೆಲವು ವೀಡಿಯೋ ಕೂಡಾ ಹರಿದಾಡುತ್ತಿತ್ತು. ಆದರೆ, ಇದೀಗ ಇವೆಲ್ಲದಕ್ಕೆ ಉತ್ತರ ಎಂಬಂತೆ ಅಪೋಲೋ ಆಸ್ಪತ್ರೆ ಒಂದು ಸ್ಪಷ್ಟನೆ ಕೊಟ್ಟಿದೆ. ಜಯಲಲಿತಾಗೆ ಚಿಕಿತ್ಸೆ ಕೊಡುತ್ತಿದ್ದ ವಾರ್ಡ್ ನಲ್ಲಿ ಸಿಸಿ ಕ್ಯಾಮೆರಾ ಇರಲಿಲ್ಲವೆಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಶಶಿಕಲಾ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ ವೀಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಈ ಹಿಂದೆ ಪಕ್ಷದಲ್ಲಿ ಮೂಲೆಗುಂಪಾದ ನಾಯಕರೊಬ್ಬರು ಹೇಳಿದ್ದರು. ಅಲ್ಲದೆ, ಸದ್ಯಕ್ಕೆ ಈ ವೀಡಿಯೋ ರಿಲೀಸ್ ಮಾಡುವುದಿಲ್ಲವೆಂದೂ ಇವರು ಹೇಳಿಕೆ ನೀಡಿದ್ದರು. ಏನೇ ಆದರೂ ಜಯ ಸಾವು ಈಗಲೂ ಪ್ರಶ್ನೆ ಆಗಿದ್ದು, ಬಗೆ ಬಗೆ ಆಯಾಮಗಳನ್ನು ಪಡೆದುಕೊಳ್ಳುತ್ತಿರುವುದಂತೂ ಸತ್ಯ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!