Friday , April 20 2018
Home / Gulf News / ಸೌದಿ ಮಹಿಳೆಯರಿಗೆ ಗುಡ್​ನ್ಯೂಸ್​ : ಮಹಿಳೆಯರ ಡ್ರೈವಿಂಗ್​ಗೆ ಇದ್ದ ನಿಷೇಧ ತೆರವು

ಸೌದಿ ಮಹಿಳೆಯರಿಗೆ ಗುಡ್​ನ್ಯೂಸ್​ : ಮಹಿಳೆಯರ ಡ್ರೈವಿಂಗ್​ಗೆ ಇದ್ದ ನಿಷೇಧ ತೆರವು

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ರಿಯಾದ್​ : ಸೌದಿ ಅರೇಬಿಯಾದ ಮಹಿಳೆಯರಿಗೆ ಶುಭ ಸುದ್ದಿ ಬಂದಿದೆ. ಇಷ್ಟು ದಿನ ಇಲ್ಲಿನ ಮಹಿಳೆಯರ ಡ್ರೈವಿಂಗ್​ಗೆ ಇದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌದಿ ಅರೇಬಿಯಾದ ಈ ನಿರ್ಧಾರಕ್ಕೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಮಹಿಳೆಯರು ಕೂಡಾ ಇದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.


1990ರಲ್ಲಿ ಮಹಿಳೆಯರಿಗೆ ವಾಹನ ಚಲಾವಣೆ ನಿಷೇಧ ನೀತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸೌದಿ ವಿಶ್ವ ವಿದ್ಯಾನಿಲಯದ ಪ್ರೊಫೆಸರ್​​ ಫೌಜಿಯಾ ಅಲ್ ಬಕರ್​​ ಈಗ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಡ್ರೈವಿಂಗ್ ನಿಷೇಧ ವಿರೋಧಿಸಿ ಸೌದಿ ಅರೇಬಿಯಾದಲ್ಲಿ ನಡೆದಿದ್ದ ಮೊದಲ ಪ್ರತಿಭಟನೆ ಆಗಿತ್ತು. ಇದರಲ್ಲಿ 47 ಮಹಿಳೆಯರು ಪಾಲ್ಗೊಂಡಿದ್ದರು. ರಿಯಾದ್​ನಲ್ಲಿ ಇವರು ವಾಹನ ಚಲಾಯಿಸಿದ್ದರು. ಇದರಿಂದ ಹಲವರ ಬಂಧನವಾಗಿತ್ತು. ಹಲವರ ಕೆಲಸವೂ ಹೋಗಿತ್ತು.

ಅನೇಕ ಸಂದರ್ಭದಲ್ಲಿ ಮಹಿಳೆಯರು ತಮಗೆ ವಾಹನ ಚಲಾವಣೆ ಅನುಮತಿ ಬೇಕು ಎಂದು ಒತ್ತಾಯಿಸುತ್ತಲೇ ಇದ್ದರು. ಈ ಕೂಗಿಗೆ ಈಗ ಸ್ಪಂದನೆ ಸಿಕ್ಕಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!