Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Kollywood / ಕಾಲಿವುಡ್​, ಟಾಲಿವುಡ್​ಗೆ ಯು ಟರ್ನ್​​… : ಸಮಂತಾ ಹೀರೋಯಿನ್​

ಕಾಲಿವುಡ್​, ಟಾಲಿವುಡ್​ಗೆ ಯು ಟರ್ನ್​​… : ಸಮಂತಾ ಹೀರೋಯಿನ್​

ಬೆಂಗಳೂರು : ಪವನ್ ಕುಮಾರ್ ನಿರ್ದೇಶನದ ಸೂಪರ್​ ಹಿಟ್ ಚಿತ್ರ ‘ಯು ಟರ್ನ್​​’ ಈಗ ಕಾಲಿವುಡ್, ಟಾಲಿವುಡ್​ಗೆ ಹೋಗುತ್ತಿದೆ. ಈ ಸುದ್ದಿ ಹಳೆಯದೇ ಆದರೂ ಈ ಚಿತ್ರಕ್ಕೆ ಈಗ ನಾಯಕಿ ಸಿಕ್ಕಿದ್ದಾರೆ. ಸದ್ಯ ಲಭ್ಯವಾದ ಮಾಹಿತಿ ಪ್ರಕಾರ, ಸಮಂತಾ ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಲಿದ್ದಾರೆ. ಕನ್ನಡದಲ್ಲಿ ಶೃದ್ಧಾ ಶ್ರೀನಾಥ್​ ನಿರ್ವಹಿಸಿದ್ದ ಪಾತ್ರವನ್ನು ಸಮಂತಾ ಮಾಡಲಿದ್ದಾರೆ. ತಮಿಳು, ತೆಲುಗಿನಲ್ಲೂ ಸಮಂತಾ ಅವರೇ ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.

ಈ ಹಿಂದೆ ಈ ಪಾತ್ರಕ್ಕೆ ನಿತ್ಯಾ ಮೆನನ್ ಹೆಸರು ಕೇಳಿ ಬರುತ್ತಿತ್ತು. ಆದರೆ, ಇದೀಗ, ಸಮಂತಾ ಆಯ್ಕೆ ಪಕ್ಕಾ ಆಗಿದೆ. ಜೊತೆಗೆ, ಶೂಟಿಂಗ್ ದಿನಾಂಕ ಕೂಡಾ ನಿಗದಿ ಮಾಡಿದ್ದಾರಂತೆ ಸಮಂತಾ. ಅಕ್ಟೋಬರ್​ 6 ರಂದು ಸಮಂತಾ ನಟ ನಾಗಚೈತನ್ಯ ಜೊತೆ ವಿವಾಹವಾಗಲಿದ್ದಾರೆ. ಈ ಮದುವೆ ಸಮಾರಂಭ ಮುಗಿದ ಬಳಿಕ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಯು ಟರ್ನ್ ಈಗಾಗಲೇ ಮಲಯಾಳಂನಲ್ಲಿ ರಿಮೇಲ್ ಆಗಿದೆ. 2017ರಲ್ಲಿ ಕ್ಯಾರ್​ಫುಲ್​ ಎಂಬ ಹೆಸರಿನಲ್ಲಿ ಈ ಚಿತ್ರ ತೆರೆ ಕಂಡು ಅಲ್ಲೂ ಸಾಕಷ್ಟು ಹೆಸರು ಮಾಡಿತ್ತು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!