Saturday , February 16 2019
ಕೇಳ್ರಪ್ಪೋ ಕೇಳಿ
Home / Gulf News / ಶಾರ್ಜಾದ ಜೈಲಿನಲ್ಲಿರುವ 149 ಭಾರತೀಯರಿಗೆ ಕ್ಷಮಾದಾನ

ಶಾರ್ಜಾದ ಜೈಲಿನಲ್ಲಿರುವ 149 ಭಾರತೀಯರಿಗೆ ಕ್ಷಮಾದಾನ

ಕಲ್ಲಿಕೋಟೆ (ಕೇರಳ) : ಹಣಕಾಸಿನ ಮತ್ತು ಕ್ರಿಮಿನಲ್​ ಕೇಸ್​ ಹೊರತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಜೈಲಿನಲ್ಲಿರುವ 149 ಭಾರತೀಯರಿಗೆ ಕ್ಷಮಾದಾನ ನೀಡಲು ಶಾರ್ಜಾ ಆಡಳಿತಗಾರ ಡಾ ಶೇಖ್​ ಸುಲ್ತಾನ್ ಬಿನ್ ಮೊಹಮ್ಮದ್​ ಅಲ್​ ಖಾಸ್ಮಿ ನಿರ್ಧಾರ ಮಾಡಿದ್ದಾರೆ. ಶಾರ್ಜಾ ಜೈಲಿನಲ್ಲಿ ಮೂರು ವರ್ಷದ ಶಿಕ್ಷೆ ಪೂರ್ಣಗೊಳಿಸಿರುವ 149 ಕೈದಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಕೈದಿಗಳಿಗೆ ಈ ನೀತಿ ಅನ್ವಯವಾಗುವುದಿಲ್ಲ ಎಂದು ತಿಳಿದು ಬಂದಿದೆ.

ಕಲ್ಲಿಕೋಟೆಯ ವಿಶ್ವವಿದ್ಯಾನಿಲಯದ ವಾರ್ಷಿಕ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ ಶೇಖ್​ ಸುಲ್ತಾನ್ ಬಿನ್ ಮೊಹಮ್ಮದ್​ ಅಲ್​ ಖಾಸ್ಮಿ ಈ ಘೋಷಣೆ ಮಾಡಿದ್ದಾರೆ. ಶಿಕ್ಷಣ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!