Wednesday , January 24 2018
Home / News NOW / ಚಿಕಿತ್ಸೆಗಾಗಿ  ಭಾರತಕ್ಕೆ ಬರಲು ಪಾಕಿಸ್ತಾನದ ಬಾಲಕಿಗೆ ವೀಸಾ ನೀಡಿದ ಸುಷ್ಮಾ
Buy Bitcoin at CEX.IO

ಚಿಕಿತ್ಸೆಗಾಗಿ  ಭಾರತಕ್ಕೆ ಬರಲು ಪಾಕಿಸ್ತಾನದ ಬಾಲಕಿಗೆ ವೀಸಾ ನೀಡಿದ ಸುಷ್ಮಾ

ನವದೆಹಲಿ : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಚಿಕಿತ್ಸೆಗಾಗಿ ಪಾಕಿಸ್ತಾನದ ಬಾಲಕಿಯೊಬ್ಬಳಿಗೆ ವೀಸಾ ನೀಡಿದ್ದಾರೆ. ಈ ಮೂಲಕ ಮತ್ತಷ್ಟು ಜನರಿಗೆ ಸುಷ್ಮಾ ಹತ್ತಿರವಾಗುತ್ತಿರುವುದರ ಜೊತೆಗೆ ಮಾದರಿಯೂ ಆಗುತ್ತಿದ್ದಾರೆ. ಏಳು ವರ್ಷದ ಪಾಕಿಸ್ತಾನಿ ಬಾಲಕಿ ವೀಸಾ ಪಡೆದಿದ್ದು, ಚಿಕಿತ್ಸೆಗಾಗಿ ಭಾರತಕ್ಕೆ ಬರಲಿದ್ದಾಳೆ. ಎರಡು ರಾಷ್ಟ್ರಗಳ ನಡುವಣ ವೈಮನಸ್ಯದ ನಡುವೆಯೂ ತಾಯಿಯೊಬ್ಬಳ ಮನವಿಗೆ ಸುಷ್ಮಾ ಸ್ಪಂದಿಸಿದ್ದಾರೆ.


ತನ್ನ ಮಗಳ ಹೃದಯ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಬಾಲಕಿಯ ತಾಯಿ ನೈದಾ ಶೋಯಬ್​​​ ಸುಷ್ಮಾಗೆ ಟ್ವಿಟರ್​ನಲ್ಲಿ ಮನವಿ ಮಾಡಿಕೊಂಡಿದ್ದರು. ಆಗಸ್ಟ್​​​ನಿಂದ ತಾನು ವೀಸಾಕ್ಕೆ ಕಾಯುತ್ತಿರುವುದಾಗಿ ಇವರು ಹೇಳಿಕೊಂಡಿದ್ದರು, ಇದಕ್ಕೆ ಸುಷ್ಮಾ ತಕ್ಷಣ ಸ್ಪಂದಿಸಿದ್ದಾರೆ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!