Saturday , November 17 2018
ಕೇಳ್ರಪ್ಪೋ ಕೇಳಿ
Home / News NOW / ಸೆಹ್ವಾಗ್​ಗೆ 1.14 ಕೋಟಿ ಮೌಲ್ಯದ ಕಾರು ಗಿಫ್ಟ್​ ಕೊಟ್ಟ ಸಚಿನ್​

ಸೆಹ್ವಾಗ್​ಗೆ 1.14 ಕೋಟಿ ಮೌಲ್ಯದ ಕಾರು ಗಿಫ್ಟ್​ ಕೊಟ್ಟ ಸಚಿನ್​

ನವದೆಹಲಿ : ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತನ್ನ ಸ್ನೇಹಿತ ವೀರೇಂದ್ರ ಸೆಹ್ವಾಗ್​ಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಸುಮಾರು 1.14 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲೂ 7 ಸೀರಿಸ್​​ನ ಕಾರನ್ನು ಸಚಿನ್ ಗಿಫ್ಟ್ ಕೊಟ್ಟಿದ್ದು, ಸೆಹ್ವಾಗ್​ ಥ್ಯಾಂಕ್ಸ್ ಹೇಳಿದ್ದಾರೆ. ಗೆಳೆಯನಿಂದ ಬಂದ ಉಡುಗೊರೆ ಕಾರಿನೊಂದು ಫೋಟೋ ಕ್ಲಿಕ್ಕಿಸಿ ಸೆಹ್ವಾಗ್ ಧನ್ಯವಾದ ತಿಳಿಸಿದ್ದಾರೆ.


ಸಚಿನ್ ಮತ್ತು ಸೆಹ್ವಾಗ್​ ಟೀಂ ಇಂಡಿಯಾದಲ್ಲಿ ಆರಂಭಿಕ ಆಟಗಾರರಾಗಿದ್ದರು. ಹಲವು ಪಂದ್ಯದಲ್ಲಿ ಇವರ ಗಮನಾರ್ಹ ಜೊತೆಯಾಟವನ್ನು ಕ್ರಿಕೆಟ್ ಪ್ರೇಮಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. 2003 ರ ಐಸಿಸಿ ವಿಶ್ವಕಪ್​​​ನಲ್ಲಿ ಇವರಿಬ್ಬರ ಜೊತೆಯಾಟ ಎಲ್ಲರಿಗೂ ಇಷ್ಟವಾಗಿತ್ತು. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!