Friday , September 21 2018
ಕೇಳ್ರಪ್ಪೋ ಕೇಳಿ
Home / Sandalwood / ಲುಕ್​ ಟೆಸ್ಟ್​ ಬಳಿಕವೇ 80 ರ ಅಜ್ಜನ ಪಾತ್ರ ಮಾಡಲು ಒಪ್ಪಿದ್ದರಂತೆ ದೇವರಾಜ್​..

ಲುಕ್​ ಟೆಸ್ಟ್​ ಬಳಿಕವೇ 80 ರ ಅಜ್ಜನ ಪಾತ್ರ ಮಾಡಲು ಒಪ್ಪಿದ್ದರಂತೆ ದೇವರಾಜ್​..

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದರ್ಶನ್ ಮತ್ತು ದೇವರಾಜ್​ ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಜ್ಜ ಮೊಮ್ಮಗನ ಸೆಂಟಿಮೆಂಟ್ ಕತೆ. ದೇವರಾಜ್​ ಈ ಚಿತ್ರದಲ್ಲಿ 80ರ ಅಜ್ಜನ ಗೆಟಪ್​ನಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಸ್ವತಃ ದರ್ಶನ್ ಅವರೂ ಫಿದಾ ಆಗಿದ್ದು, ನಾನಲ್ಲ ದೇವರಾಜ್ ಅವರೇ ಈ ಚಿತ್ರದ ಹೀರೋ ಎಂದೇ ಹೇಳಿಕೊಂಡಿದ್ದಾರೆ.

ಇನ್ನು, ದೇವರಾಜ್ ಅವರ ಪಾತ್ರದ ಬಗ್ಗೆ ನಿರ್ದೇಶಕ ಪ್ರಕಾಶ್ ಕೂಡಾ ಮಾತನಾಡಿದ್ದಾರೆ. ಡೈನಾಮಿಕ್ ಹೀರೋ ಈ ಹಿಂದೆ ಹಲವು ಪಾತ್ರಗಳನ್ನು ನಿರ್ವಹಿಸಿದವರು. ರಂಗಕರ್ಮಿಯಾಗಿ ವೃದ್ಧನ ಪಾತ್ರವನ್ನೂ ಇವರೂ ನಿರ್ವಹಿಸಿದ್ದಾರೆ. ಆದರೂ, ದೇವರಾಜ್​ ಅವರು ತಮ್ಮ ಪಾತ್ರದ ಬಗ್ಗೆ ಒಂದಷ್ಟು ಚೌಕಟ್ಟುಗಳನ್ನು ಹಾಕಿಕೊಂಡಿರುತ್ತಾರೆ. ತಮಗೆ ಮನಸ್ಸಿಗೆ ಒಪ್ಪಿಗೆಯಾದರೆ ಮಾತ್ರ ಅವರು ಪಾತ್ರ ಮಾಡುವುದು. ಈ ಪಾತ್ರವನ್ನು ಒಪ್ಪಿಕೊಳ್ಳುವ ಮುಂಚೆಯೂ ದೇವರಾಜ್ ಒಂದು ಷರತ್ತು ಹಾಕಿದ್ದರು. ಅದೇನೆಂದರೆ, ಮೊದಲು 80 ವರ್ಷದ ವೃದ್ಧನ ಗೆಟಪ್​ನಲ್ಲಿ ನಾನು ಹೇಗೆ ಕಾಣುತ್ತೇನೆ ಎಂಬ ಲುಕ್ ಟೆಸ್ಟ್​ ಆಗಬೇಕು. ಆ ಬಳಿಕ ಈ ಲುಕ್​ ನನಗೆ ಒಪ್ಪಿತವಾದರೆ ನಾನು ಈ ಪಾತ್ರ ಮಾಡುತ್ತೇನೆ ಎಂದಿದ್ದರಂತೆ ದೇವರಾಜ್​. ಈ ಐಡಿಯಾ ನಿರ್ದೇಶಕ ಪ್ರಕಾಶ್ ಅವರಿಗೂ ಇಷ್ಟವಾಯ್ತು. ದೇವರಾಜ್ ಅವರು ಹೇಳಿದಂತೆ ಲುಕ್ ಟೆಸ್ಟ್​ ಕೂಡಾ ಆಯ್ತು. ಅದು ಅವರಿಗೆ ಇಷ್ಟವೂ ಆಯ್ತು ಎಂದು ಪ್ರಕಾಶ್​ ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!