Tuesday , May 22 2018
Home / Film News / Kollywood / ರಾಜಕೀಯಕ್ಕೆ ಬರುವ ಮುಂಚೆ ಸಿನಿ ಜೀವನಕ್ಕೆ ಕಮಲ್ ಹಾಸನ್ ಗುಡ್​ಬೈ…?

ರಾಜಕೀಯಕ್ಕೆ ಬರುವ ಮುಂಚೆ ಸಿನಿ ಜೀವನಕ್ಕೆ ಕಮಲ್ ಹಾಸನ್ ಗುಡ್​ಬೈ…?

ಚೆನ್ನೈ : ಸೂಪರ್​ಸ್ಟಾರ್​ ಕಮಲ್​ ಹಾಸನ್​ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಸ್ವತಃ ಅವರೇ ಇದನ್ನು ಘೋಷಿಸಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆಗೂ ಕಮಲ್ ಒಂದು ಸುತ್ತಿನ ಮಾತುಕತೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಆದರೆ, ರಾಜಕೀಯದಲ್ಲಿ ಕಮಲ್ ಹಾದಿ ಎಂತಹದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ, ರಾಜಕೀಯಕ್ಕೆ ಬರುವ ಮೊದಲು ಕಮಲ್ ಸಿನಿ ಜೀವನಕ್ಕೆ ಗುಡ್​ಬೈ ಹೇಳುತ್ತಾರಾ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ಇಂಡಿಯಾ ಟೈಮ್ಸ್​ ಎಂಬ ಮಾಧ್ಯಮಕ್ಕೆ ಕಮಲ್ ನೀಡಿದ ಸಂದರ್ಶನದಲ್ಲೂ ಇಂತಹದ್ದೊಂದು ಸುಳಿವು ನೀಡಿದ್ದಾರೆ.‘ರಾಜಕೀಯಕ್ಕೆ ಪ್ರವೇಶ ಮಾಡಿದ ಮೇಲೆ ಅನಿವಾರ್ಯವಾಗಿ ನಾನು ಸಿನಿಲೋಕದಿಂದ ದೂರ ಇರಬೇಕಾಗುತ್ತದೆ. ರಾಜಕೀಯದಲ್ಲಿ ಯಾವುದಾದರೊಂದು ಸ್ಥಾನಮಾನಕ್ಕೇರಿದ ಸಂದರ್ಭದಲ್ಲಿ ಖಂಡಿತವಾಗಿಯೂ ನಾನು ಸಿನಿಲೋಕವನ್ನು ತೊರೆಯಬೇಕು. ಖಂಡಿತಾ ಇದು ನನಗೊಂದು ನೋವಿನ ಸಂಗತಿ. ಆದರೆ, ಬಣ್ಣದ ಲೋಕದ ಸಂಪರ್ಕವನ್ನು ನಾನು ಸಂಪೂರ್ಣ ತೊಡೆದು ಹಾಕುವುದಿಲ್ಲ. ಸಂಬಂಧ ಇಟ್ಟುಕೊಂಡಿರುತ್ತೇನೆ. ಆದರೆ, ಸಕ್ರಿಯನಾಗಿರುವುದಿಲ್ಲ’ ಎಂದು ಕಮಲ್ ಹೇಳಿದ್ದಾರೆ. ಹೀಗಾಗಿ, ರಾಜಕೀಯ ಪ್ರವೇಶಿಸಿದ ವೇಳೆ ಕಮಲ್​ ಸ್ವಲ್ಪ ಕಾಲ ಅದರತ್ತನೇ ಹೆಚ್ಚು ಗಮನ ಹರಿಸಲಿದ್ದಾರೆ ಎಂಬುದು ಸ್ಪಷ್ಟ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!