Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಎಸ್​​ಬಿಐ ಯಡವಟ್ಟು…! : 100 ಕೋಟಿ ರೂಪಾಯಿ ಬೇರೆಯವರ ಖಾತೆಗೆ ಜಮಾ…!

ಎಸ್​​ಬಿಐ ಯಡವಟ್ಟು…! : 100 ಕೋಟಿ ರೂಪಾಯಿ ಬೇರೆಯವರ ಖಾತೆಗೆ ಜಮಾ…!

ರಾಂಚಿ : ದೇಶದ ಪ್ರಮುಖ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ(ಎಸ್​ಬಿಐ) ದೊಡ್ಡ ಯಡವಟ್ಟು ಮಾಡಿಕೊಂಡಿದೆ. 100 ಕೋಟಿ ರೂಪಾಯಿ ಹಣವನ್ನು ತಪ್ಪಾಗಿ ಬೇರೆಯವರ ಖಾತೆಗೆ ಬ್ಯಾಂಕ್ ಜಮಾ ಮಾಡಿದೆ. ಜಾರ್ಖಂಡ್​​ನ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆಯಾಗಬೇಕಾಗಿದ್ದ 100 ಕೋಟಿ ಹಣವನ್ನು ಬ್ಯಾಂಕ್​​ ನಿರ್ಮಾಣ ಸಂಸ್ಥೆಯ ಖಾತೆಗೆ ಜಮಾ ಮಾಡಿದೆ.

ಎಸ್​ಬಿಐ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ಆಗಸ್ಟ್​ 5 ರಿಂದ ಸೆಪ್ಟೆಂಬರ್ 19ರ ನಡುವೆ ಈ ಹಣ ಜಮಾ ಆಗಿದೆ. ಇನ್ನು, ಈ ಹಣದಲ್ಲಿ ಶೇಕಡಾ 70 ರಷ್ಟು ಹಣವನ್ನು ಹಿಂಪಡೆದು ಮತ್ತೆ ಮಧ್ಯಾಹ್ನದ ಬಿಸಿಯೂಟದ ಖಾತೆಗೆ ಮತ್ತೆ ಜಮಾ ಮಾಡಲಾಗಿದೆ. ಆದರೆ, ಇನ್ನೂ 30 ಕೋಟಿಯಷ್ಟು ಹಣ ನಿರ್ಮಾಣ ಸಂಸ್ಥೆ ಬಳಿಯೇ ಇದೆ. ಮಕ್ಕಳ ಬಿಸಿಯೂಟಕ್ಕಾಗಿ ಶಿಕ್ಷಣ ಇಲಾಖೆ ಹಣ ಬಿಡುಗಡೆ ಮಾಡುವಂತೆ ಬ್ಯಾಂಕ್​ಗೆ ಮನವಿ ಮಾಡಿದ ಸಂದರ್ಭದಲ್ಲಿ ಈ ಯಡವಟ್ಟು ಬೆಳಕಿಗೆ ಬಂದಿದೆ.

ಇನ್ನು, ರಾಂಚಿ ವಲಯದ ನಿರ್ದೇಶಕ ಡಿ.ಕೆ. ಪಾಂಡಾ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೆ, ತಪ್ಪಿತಸ್ಥ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿದ್ದಾರೆ.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!