Friday , April 20 2018
Home / Sandalwood / ವೃಥಾ ಆರೋಪಕ್ಕೆ ಪ್ರಜ್ವಲ್, ದಿಗಂತ್ ಕಿಡಿಕಿಡಿ…

ವೃಥಾ ಆರೋಪಕ್ಕೆ ಪ್ರಜ್ವಲ್, ದಿಗಂತ್ ಕಿಡಿಕಿಡಿ…

ಬೆಂಗಳೂರು : ಮೊನ್ನೆ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ನಲ್ಲಿ ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಚಲಾಯಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಈ ವೇಳೆ, ಸುಮಾರು 300 ಗ್ರಾಮ್​ನಷ್ಟು ಗಾಂಜಾ ಕೂಡಾ ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದರು. ಈ ನಡುವೆ, ಅಪಘಾತಕ್ಕೀಡಾಗಿದ್ದ ಈ ವಾಹನದಲ್ಲಿ ಸ್ಯಾಂಡಲ್ವುಡ್ ನಟರಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಕೂಡಾ ಇದ್ದರು ಎಂದು ಸುದ್ದಿಯಾಗಿತ್ತು. ಆದರೆ, ಈ ಆರೋಪವನ್ನು ಇಬ್ಬರೂ ನಟರು ತಳ್ಳಿ ಹಾಕಿದ್ದಾರೆ.


ಫೇಸ್​​ಬುಕ್​ನಲ್ಲಿ ಸ್ಪಷ್ಟನೆ ನೀಡಿದ ಪ್ರಜ್ವಲ್ ದೇವರಾಜ್, ನಾನು ಗೋವಾದಲ್ಲಿ ಸಿನೆಮಾ ಶೂಟಿಂಗ್ ಮಾಡುತ್ತಿರೋದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ದಿಗಂತ್ ಕೂಡಾ ತಾನು ಕನಕಪುರದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾಗಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸುಮ್ಮನೆ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಇವರಿಬ್ಬರೂ ಸ್ಪಷ್ಟವಾಗಿ ಹೇಳಿದ್ದಾರೆ. ವಿಷ್ಣು ಪರಿಚಯಸ್ಥರಾದರೂ ಈ ಅಪಘಾತದಲ್ಲಿ ತಮ್ಮಿಬ್ಬರ ಹೆಸರನ್ನು ಸೇರಿಸುವುದು ಎಷ್ಟು ಸರಿ ಎಂದೂ ಇವರಿಬ್ಬರು ಪ್ರಶ್ನಿಸಿದ್ದಾರೆ. ಇನ್ನು, ಅಪಘಾತ ನಡೆಸಿದ ವಿಷ್ಣು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!