Monday , January 22 2018
Home / Sandalwood / ದರ್ಶನ್ ತಾರಕ್ ರಿಲೀಸ್ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
Buy Bitcoin at CEX.IO

ದರ್ಶನ್ ತಾರಕ್ ರಿಲೀಸ್ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಎಲ್ಲೆಲ್ಲೂ ಒಳ್ಳೆಯ ಓಪನಿಂಗ್ ಸಿಕ್ಕಿದೆ. ದರ್ಶನ್ ಅಭಿಮಾನಿಗಳು ತಾರಕ್ ಚಿತ್ರದಿಂದ ಮತ್ತಷ್ಟು ಖುಷಿಗೊಂಡಿದ್ದಾರೆ.


ತಾರಕ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49ನೇ ಚಿತ್ರ… ಇಬ್ಬರು ಬಳುಕುವ ಗೊಂಬೆಗಳು ದರ್ಶನ್ಗೆ ನಾಯಕಿಯರು… ಒಬ್ಬರು ಶೃತಿ ಹರಿಹರನ್ ಮತ್ತೊಬ್ಬರು ಸಾನ್ವಿ ಶ್ರೀವಾತ್ಸವ್… ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ಈ ಚಿತ್ರದ ಡೈರೆಕ್ಟರ್.. ತಾರಕ್ ಚಿತ್ರದಲ್ಲಿ ದರ್ಶನ್ರದ್ದು ಡಿಫ್ರೆಂಟ್ ಕ್ಯಾರೆಕ್ಟರ್. ದೇಸಿ ಮತ್ತು ಮಾರ್ಡನ್ ಲುಕ್ನಲ್ಲಿ ದರ್ಶನ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇದು ದಚ್ಚು ಅಭಿಮಾನಿಗಳಲ್ಲಿ ಇನ್ನಷ್ಟು ಖುಷಿ ತಂದಿದೆ. ರಾಜ್ಯಾದ್ಯಂತ ಸುಮಾರು 300 ಥಿಯೇಟರ್ ಗಳಲ್ಲಿ ತಾರಕ್ ದರ್ಶನವಾಗಿದೆ.


ಈ ಚಿತ್ರದಲ್ಲಿ ನಟ ದೇವರಾಜ್ ಅವರು ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದರ್ಶನ್ ತಾತಾನ ಗೆಟಪ್ನಲ್ಲಿ ಡೈನಾಮಿಕ್ ಹೀರೋ ಇದ್ದಾರೆ. 80 ವರ್ಷದ ವೃದ್ಧನ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಂಡಿದ್ದಾರೆ… ಇದು ಕೂಡಾ ಚಿತ್ರದ ಪ್ಲಸ್.. ಈ ಪಾತ್ರಕ್ಕಾಗಿ ದೇವರಾಜ್ ಕೂಡಾ ಸಖತ್ ತಯಾರಿ ನಡೆಸಿದ್ದರು. ಅದೂ ಅಲ್ಲದೆ, ಈ ಚಿತ್ರವನ್ನು ಒಪ್ಪಿಕೊಳ್ಳುವ ಮೊದಲು ಲುಕ್ ಟೆಸ್ಟ್ ಕೂಡಾ ಮಾಡಿಸಿಕೊಂಡಿದ್ದರಂತೆ ದೇವರಾಜ್. ತನಗೆ ಈ ಪಾತ್ರ ಎಷ್ಟು ಸೂಟ್ ಆಗುತ್ತದೆ ಎಂದು ನೋಡಿಕೊಂಡು ಇಷ್ಟವಾದರೆ ಮಾತ್ರ ಪಾತ್ರವನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದರಂತೆ ದೇವರಾಜ್. ಅದೇ ರೀತಿ ಲುಕ್ ಟೆಸ್ಟ್ ಮಾಡಿಸಿಕೊಂಡ ಬಳಿಕ ದೇವರಾಜ್ ಈ ಪಾತ್ರವನ್ನು ಒಪ್ಪಿಕೊಂಡಿದ್ದರಂತೆ…

ಇನ್ನು, ತಾರಕ್ ಸಿನೆಮಾದ ಬಹುಭಾಗ ಶೂಟಿಂಗ್ ಆಗಿದ್ದು ಯುರೋಪ್​ನಲ್ಲಿ . ಹೀಗಾಗಿ, ಚಿತ್ರದಲ್ಲಿ ವಿದೇಶದ ರುದ್ರ ರಮಣೀಯ ತಾಣಗಳ ದರ್ಶನವಾಗಲಿದೆ. ಇಟಲಿ ಮತ್ತು ಸ್ವಿಟ್ಜರ್ಲ್ಯಾಂಡ್ನ ಆರು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ… ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಅರ್ಜುನ್ ಜನ್ಯ ಸಂಗೀತಕ್ಕೆ ದಚ್ಚು ಅಭಿಮಾನಿಗಳೂ ಫಿದಾ ಆಗಿದ್ದಾರೆ…

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!