Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಡಿಂಪಲ್​ ಜೊತೆಗಿನ ಸನ್ನಿ ವೀಡಿಯೋಗೆ ತಂದೆ ಧರ್ಮೇಂದ್ರ ಬೆಂಬಲ…?!

ಡಿಂಪಲ್​ ಜೊತೆಗಿನ ಸನ್ನಿ ವೀಡಿಯೋಗೆ ತಂದೆ ಧರ್ಮೇಂದ್ರ ಬೆಂಬಲ…?!

ಮುಂಬೈ : ಮೊನ್ನೆ ಲಂಡನ್​ನಲ್ಲಿ ಡಿಂಪಲ್ ಕಪಾಡಿಯಾ ಮತ್ತು ಸನ್ನಿ ಡಿಯೋಲ್ ಇದ್ದ ವೀಡಿಯೋ ವೈರಲ್ ಆಗಿತ್ತು. ಇವರಿಬ್ಬರು ‘ಮಾಜಿ ಪ್ರೇಮಿ’ಗಳು ಎಂಬ ಕಾರಣಕ್ಕೆ ಈ ವೀಡಿಯೋಗೆ ಇನ್ನಷ್ಟು ಹೈಪ್ ಸಿಕ್ಕಿತ್ತು. ಹಲವರು ಟ್ವಿಟರ್​ನಲ್ಲಿ ಈ ವೀಡಿಯೋ ಶೇರ್ ಮಾಡಿಕೊಂಡಿದ್ದರು. ಆದರೆ, ಮಗನ ಈ ವೀಡಿಯೋಗೆ ತಂದೆ ಹಿರಿಯ ನಟ ಧರ್ಮೇಂದ್ರ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರಾ…? ಹೀಗೊಂದು ಚರ್ಚೆ ಈಗ ಶುರುವಾಗಿದೆ.

ಸನ್ನಿ ಮತ್ತು ಡಿಂಪಲ್ ವೀಡಿಯೋ ಮೊದಲು ಹಾಕಿದವರು ಕೆಆರ್​ಕೆ. ಈ ವೀಡಿಯೋಗೆ ಧರ್ಮೇಂದ್ರ ಅವರು ಕೂಡಾ ಲೈಕ್ ಕೊಟ್ಟಿದ್ದಾರೆ. ಇದು ಅಚ್ಚರಿ ಮೂಡಿಸಿದೆ. ಇದು ಕೆಆರ್​ಕೆ ಬರಹವನ್ನು ಧರ್ಮೇಂದ್ರ ಇಷ್ಟಪಟ್ಟಿದ್ದ ಅಥವಾ ಅಲ್ಲಿರುವ ವೀಡಿಯೋ ಇಷ್ಟಪಟ್ಟಿದ್ದಾ ಎಂದು ಇನ್ನೂ ಸ್ವಷ್ಟವಾಗಿಲ್ಲ. ಆದರೆ, ಧರ್ಮೇಂದ್ರ ಈ ಕೆಆರ್​ಕೆ ಪೋಸ್ಟ್​ಗೆ ಲೈಕ್ ಬಟನ್ ಅದುಮಿದ್ದಂತೂ ಸತ್ಯ. ಆದರೆ, ಇದು ಧರ್ಮೇಂದ್ರ ಅವರ ಅಫೀಶಿಯರ್ ಅಕೌಂಟಾ ಎಂಬುದು ಮಾತ್ರ ಇನ್ನೂ ಕನ್ಫರ್ಮ್​​ ಆಗಿಲ್ಲ.

Read Also : Viral : ಡಿಂಪಲ್​ ಸನ್ನಿ ಡಿಯೋಲ್​ ಕೈ ಹಿಡಿದುಕೊಂಡಿದ್ದೇ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ…!

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!