Friday , June 22 2018
ಕೇಳ್ರಪ್ಪೋ ಕೇಳಿ
Home / Film News / Tollywood / ಬಾಲಿವುಡ್​ಗೆ ಟಾಲಿವುಡ್ ಪ್ರಿನ್ಸ್ ಮಹೇಶ್​ ಬಾಬು…?

ಬಾಲಿವುಡ್​ಗೆ ಟಾಲಿವುಡ್ ಪ್ರಿನ್ಸ್ ಮಹೇಶ್​ ಬಾಬು…?

ಹೈದರಾಬಾದ್ : ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ಸ್ಪೈಡರ್​ ಮೂಲಕ ಹವಾ ಕ್ರಿಯೇಟ್ ಮಾಡಿದ್ದಾರೆ. ಮೊನ್ನೆ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಸ್ಪೈಡರ್​​​ ಬಾಕ್ಸ್ ಆಫೀಸ್​ನಲ್ಲೂ ಸೌಂಡ್ ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್.ಮುರುಘಾದಾಸ್​ ನಿರ್ದೇಶನದ ಚಿತ್ರ ಇದು.

ಇದೀಗ ಈ ಸ್ಪೈಡರ್​​ ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬು ಅವರೇ ಬಾಲಿವುಡ್ ಸಿನೆಮಾದಲ್ಲೂ ಇರಲಿದ್ದಾರೆ ಎಂಬುದು ಸುದ್ದಿ. ಒಂದೊಮ್ಮೆ ಇದು ನಿಜವೇ ಆದರೆ ಮಹೇಶ್​ ಬಾಬು ಸ್ಪೈಡರ್ ಮೂಲಕ ಬಾಲಿವುಡ್​ ಪ್ರವೇಶಿಸಿದಂತಾಗುತ್ತದೆ. ಮುರುಘಾದಾಸ್​ ಈಗಾಗಲೇ ಘಜನಿ, ಹಾಲಿಡೇಸ್​ ಮತ್ತು ಅಖಿರಾ ಎಂಬ ಚಿತ್ರಗಳ ಮೂಲಕ ಬಾಲಿವುಡ್​ನಲ್ಲಿ ಗುರುತಿಸಿಕೊಂಡವರು. ಈ ಮೂರೂ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸೌಂಡ್ ಮಾಡಿತ್ತು. ಇದೀಗ ಸ್ಪೈಡರ್​ ಕೂಡಾ ಇದೇ ನಿರೀಕ್ಷೆಯನ್ನು ಮೂಡಿಸಿದೆ. ಬಹುತೇಕ ಮಹೇಶ್ ಬಾಬು ಅವರೇ ಈ ಹಿಂದಿ ಚಿತ್ರದಲ್ಲೂ ಅಭಿನಯಿಸಲಿದ್ದಾರೆ ಎನ್ನುತ್ತದೆ ಬಲ್ಲ ಮೂಲಗಳು.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!