Saturday , February 16 2019
ಕೇಳ್ರಪ್ಪೋ ಕೇಳಿ
Home / Mumbai Mail / ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 22 ಮಂದಿ ದುರ್ಮರಣ, ಹಲವರಿಗೆ ಗಾಯ

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 22 ಮಂದಿ ದುರ್ಮರಣ, ಹಲವರಿಗೆ ಗಾಯ

ಮುಂಬೈ : ದಸರಾ ಹಬ್ಬದ ವೇಳೆಯೇ ಮುಂಬೈಯಲ್ಲಿ ಸೂತಕದ ಛಾಯೆ. ಎಲ್ಫೀನ್​ಸ್ಟೋನ್​ ರೈಲ್ವೇ ನಿಲ್ದಾಣದಲ್ಲಿ ದುರಂತವೊಂದು ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿ ಕಾಲ್ತುಳಿತ ಸಂಭವಿಸಿದ್ದು, 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಈ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ.

ಇಲ್ಲಿನ ಫೂಟ್​ಬ್ರಿಡ್ಜ್​ನಲ್ಲಿ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯ ಕಾರಣದಿಂದ ಜನರು ಫೂಟ್​ಬ್ರಿಡ್ಜ್​ನತ್ತ ನುಗ್ಗಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು, ಈ ಘಟನೆಯ ಉನ್ನತ ಮಟ್ಟದ ತನಿಖೆಗೆ ರೈಲ್ವೆ ಇಲಾಖೆ ಆದೇಶ ನೀಡಿದೆ.

About sudina

Check Also

ಎಚ್​ಐವಿ ಪೀಡಿತ ತಾಯಿಯ ರಕ್ತವನ್ನು ಗರ್ಭಿಣಿ ಪತ್ನಿಗೆ ಇಂಜೆಕ್ಟ್ ಮಾಡಿದ ಪಾಪಿ ಪತಿ…!

ಮುಂಬೈ : ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯೊಬ್ಬ ಪತ್ನಿಗೆ ಸಿರೀಂಜ್​ನಲ್ಲಿ ಚುಚ್ಚಿದ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು …

Leave a Reply

Your email address will not be published. Required fields are marked *

error: Content is protected !!