Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Kollywood / 2.0 ಚಿತ್ರದಲ್ಲಿ ತ್ರಿಡಿ ಅನುಭವ : ಇಲ್ಲಿದೆ ಮೇಕಿಂಗ್ ದೃಶ್ಯ

2.0 ಚಿತ್ರದಲ್ಲಿ ತ್ರಿಡಿ ಅನುಭವ : ಇಲ್ಲಿದೆ ಮೇಕಿಂಗ್ ದೃಶ್ಯ

ಚೆನ್ನೈ : ದಕ್ಷಿಣ ಭಾರತದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ಕ್ರೇಜ್​ ಸೃಷ್ಟಿಸಿತ್ತು. ಈ ಬಾಹುಬಲಿಯಂತೆ ಎಲ್ಲೆಲ್ಲೂ ಹವಾ ಸೃಷ್ಟಿಸಿರುವ ಮತ್ತೊಂದು ಸಿನೆಮಾ ಅಂದರೆ ಅದು ರಜನಿಕಾಂತ್ ಅಭಿನಯದ 2.0. ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದಲೇ ಎದುರು ನೋಡುತ್ತಿದ್ದಾರೆ. ಈ ಕಾತರಕ್ಕೆ ಸರಿಯಾಗಿ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಈ ಮೇಕಿಂಗ್​ ಮೈ ನವಿರೇಳಿಸುವಂತಿದೆ…

ರಜನಿ ಅಂದರೇನೆ ಸ್ಟೈಲ್​​, ರಜನಿ ಅಂದರೇನೇ ಲುಕ್​​​.. ಮಾಸ್​ಗೂ ಕ್ಲಾಸ್​ಗೂ ಸಲ್ಲುವ ನಾಯಕ ಇವರು… ಅದೂ ಅಲ್ಲದೆ, ಸಿಂಪ್ಲಿ ಸಿಟಿಗೂ ರಜನಿ ಮಾದರಿ… ತೆರೆ ಮೇಲೆ ಎಷ್ಟು ಸ್ಟೈಲೀಶ್​ ಆಗಿ ಕಂಡರೂ ತೆರೆ ಹೊರಗೆ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ… ಹೀಗಾಗಿಯೇ, ರಜನಿ ಅಭಿಮಾನಿಗಳ ಪಾಲಿಗೆ ದೇವರಂತೆ ಕಾಣುತ್ತಾರೆ… ಜೀವ ಕೊಡಲೂ ಸಿದ್ಧರಿರುವಂತಹ ಅಭಿಮಾನಿಗಳು ತಲೈವಾಗೆ ಇದ್ದಾರೆ… ಇಂತಹ ರಜನಿಕಾಂತ್​​​​​ ಚಿತ್ರರಂಗದಲ್ಲಿ ಈಗಲೂ ಚುರುಕು.. ದೇಹಕ್ಕೆ ವಯಸಾದರೂ ಶೂಟಿಂಗ್ ಸ್ಪಾಟ್​ಗೆ ಬಂದ ಬಳಿಕ ರಜನಿ ಅಪ್ಪಟ ಚಿರಯುವಕ… ಈಗ ರಜನಿ 2.0 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೂಪರ್​ ಸ್ಟಾರ್​ ರಜನಿಕಾಂತ್ ಮತ್ತು ನಿರ್ದೇಶಕ ಶಂಕರ್​​ರನ್ನು ಮತ್ತೊಮ್ಮೆ ಜೊತೆಯಾಗಿಸಿದ ಚಿತ್ರ ಇದು… ಈ ಚಿತ್ರ ಈಗಾಗಲೇ ಸಖತ್ ಹೈಪ್​ ಕ್ರಿಯೇಟ್ ಮಾಡಿದೆ…

ವಿಶ್ವದಾದ್ಯಂತ ಗಮನ ಸೆಳೆದಿದ್ದ ಎಂದಿರನ್ ಚಿತ್ರದ ಎರಡನೇ ಭಾಗವೇ ಈ 2.0 ಚಿತ್ರ.. ಈ ಹಿಂದೆ ಬಾಹುಬಲಿ ಸರಣಿ ವಿಶ್ವದಾದ್ಯಂತ ಹೇಗೆ ಕ್ರೇಝ್​ ಸೃಷ್ಟಿಸಿತ್ತೋ ಅದೇ ಕ್ರೇಜ್​​ ಅನ್ನು 2.0 ಕೂಡಾ ಹೊಂದಿದೆ… ಬಾಲಿವುಡ್​ ಆಕ್ಷನ್​ ಕಿಂಗ್ ಅಕ್ಷಯ್ ಕುಮಾರ್​ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಕಿಯದ್ದು ಇಲ್ಲಿ ಖಳನಾಯಕನ ಪಾತ್ರ… ಸೆಟ್ಟೇರಿದ ದಿನದಿಂದಲೇ ಹೈಪ್​ ಕ್ರಿಯೇಟ್ ಮಾಡಿರುವ ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಅಭಿಮಾನಿಗಳ ಈ ಕಾತರಕ್ಕೆ ಸರಿಯಾಗಿ 2.0 ಚಿತ್ರ ಭರ್ಜರಿ ಮೇಕಿಂಗ್ ಕೂಡಾ ರಿಲೀಸ್ ಆಗಿದೆ…

ಡೈರೆಕ್ಟರ್​​ ಶಂಕರ್​​ ಈ ಚಿತ್ರದ ಮೂಲಕ ತ್ರಿ ಎಕ್ಸ್​ಪೀರಿಯನ್ಸ್​ ನೀಡುತ್ತಿದ್ದಾರೆ… ತ್ರಿ ಡಿಯಲ್ಲಿ ಶೂಟಿಂಗ್ ಮಾಡಬೇಕೆಂದು ಈ ಚಿತ್ರವನ್ನು ಮಾಡುತ್ತಿಲ್ಲ. ಸ್ಕ್ರಿಪ್ಟ್​ ತ್ರಿಡಿ ಶೂಟಿಂಗ್​ ಅನ್ನೇ ಕೇಳುತ್ತಿರುವುದರಿಂದ ನಾವು ತ್ರಿಡಿ ವರ್ಶನ್​ನಲ್ಲೂ ಶೂಟಿಂಗ್ ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಂಕರ್​…

ಸುಮಾರು 450 ಕೋಟಿ ರೂಪಾಯಿ ಬಜೆಟ್​​ನಲ್ಲಿ ನಿರ್ಮಾಣ ಆಗಿತ್ತಿರುವ ಬಿಗ್ ಬಜೆಟ್​ ಸಿನೆಮಾ ಇದು. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಇಷ್ಟು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಏಳನೇ ಇಂಗ್ಲೀಷೇತರ ಸಿನೆಮಾ ಇದು ಎಂಬ ಹೆಗ್ಗಳಿಗೂ 2.0 ಪಾತ್ರವಾಗಿದೆ… ಈ ಚಿತ್ರ ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯವಹಾರ ಮಾಡಿದೆ. 2.0 ಚಿತ್ರದ ತೆಲುಗು ಅವತರಣಿಯ ವಿತರಣೆಯ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ… ಇದು ಒಂದು ದಾಖಲೆಯೂ ಹೌದು ಜೊತೆ ರಜನಿ ಮೇನಿಯಾ ಸೃಷ್ಟಿದ ಹವಾಕ್ಕೆ ಸಾಕ್ಷಿಯೂ ಹೌದು…

ಏಷ್ಯನ್​ ಸಿನೆಮಾಸ್​ ರಜನಿ ಚಿತ್ರದ ತೆಲುಗು ಅವತರಣಿಕೆಯ ವಿತರಣೆಯ ಹಕ್ಕನ್ನು ಬರೋಬ್ಬರಿ 80 ಕೋಟಿ ರೂಪಾಯಿಗೆ ಪಡೆದುಕೊಂಡಿದೆಯಂತೆ. ತೆಲುಗಿಗೆ ಡಬ್​ ಆಗಿರುವ ಸಿನೆಮಾವೊಂದರ ವಿತರಣೆಯ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಕೂಡಾ ಇಲ್ಲೊಂದು ದಾಖಲೆಯೇ ಸರಿ… ಇದು ಬಹುತಾರಾಗಣದ ಚಿತ್ರ.. ಅಕ್ಷಯ್​ ಕುಮಾರ್, ಆಮಿ ಜಾಕ್ಸನ್​ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ರಜನಿಕಾಂತ್ ಅಭಿಮಾನಿಗಳಂತೂ ಈ ಚಿತ್ರವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಈ ಹಿಂದೆ ಎಂದಿರನ್ ಚಿತ್ರ ರಿಲೀಸ್ ಆದ ಸಂದರ್ಭದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು… ರಜನಿಕಾಂತ್ ಮತ್ತು ಶಂಕರ್ ಇಬ್ಬರಿಗೂ ಈ ಚಿತ್ರ ಬೇರೆಯದ್ದೇ ಆದ ಇಮೇಜ್ ಅನ್ನು ತಂದುಕೊಟ್ಟಿತ್ತು. ಈಗ ಎಂದಿರನ್​ ಎರಡನೇ ಭಾಗದ ವಿಚಾರದಲ್ಲೂ ಇದೇ ರೀತಿಯ ಹೈಪ್​ ಕ್ರಿಯೇಟ್​ ಆಗಿದೆ… ಎಲ್ಲರೂ ತುಂಬಾ ಕುತೂಹಲದಿಂದಲೇ ಈ ಚಿತ್ರವನ್ನು ಎದುರು ನೋಡುತ್ತಿದ್ದಾರೆ…

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!