Sunday , October 21 2018
ಕೇಳ್ರಪ್ಪೋ ಕೇಳಿ
Home / Sandalwood / ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನವೀನ್ ಪೌಲಿ…

ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನವೀನ್ ಪೌಲಿ…

ಬೆಂಗಳೂರು : ಮಲಯಾಳಂ ಸಿನೆಮಾ ಸ್ಟಾರ್​ ನವೀನ್ ಪೌಲಿ ಈಗ ಮಂಗಳೂರಿನಲ್ಲಿ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದಾರೆ. ಸೆಪ್ಟೆಂಬರ್​ 25 ರಿಂದ ನವೀನ್​ ಕರಾವಳಿಯಲ್ಲಿ ಇದ್ದಾರೆ. ಇವರ ‘ಕಯಾಮ್ಕುಲಮ್​​​ ಕುಚುನಿ’ ಚಿತ್ರದ ಶೂಟಿಂಗ್ ಇಲ್ಲೇ ನಡೆಯುತ್ತಿದೆ. ದಕ್ಷಿಣ ಕನ್ನಡದ ಭಾಗದಲ್ಲೇ ಬಹುದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ನವೀನ್​​ಗೆ ಈ ಚಿತ್ರದಲ್ಲಿ ರಾಬಿನ್​ ಹುಡ್​ ಗೆಟಪ್​​. ಕೇರಳದ ಕಳ್ಳನೊಬ್ಬನ ಕತೆಯೇ ಇದು. ಈ ಚಿತ್ರದ ಶೂಟಿಂಗ್ ಮಂಜೇಶ್ವರ, ಉಡುಪಿ ಸೇರಿದಂತೆ ಹಲವು ಭಾಗದಲ್ಲಿ ನಡೆಯುತ್ತಿದೆ. ಇಲ್ಲಿನ ಶೂಟಿಂಗ್ ಶೆಲ್ಯೂಲ್ಡ್​ ಮುಗಿದ ಬಳಿಕ ಈ ಚಿತ್ರತಂಡ ಶ್ರೀಲಂಕಾಕ್ಕೆ ಹಾರಲಿದೆ… ಈ ನಡುವೆ, ನವೀನ್​​​ ಕನ್ನಡದ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಚಿತ್ರದ ತಮಿಳು ರಿಮೇಕ್​ ರಿಚ್ಚಿಯಲ್ಲಿ ಇದೇ ನವೀನ್ ನಾಯಕ… ಇಲ್ಲಿ ರಕ್ಷಿತ್ ನಿರ್ವಹಿಸಿದ್ದ ಪಾತ್ರವನ್ನು ನವೀನ್​ ನಿರ್ವಹಿಸುತ್ತಿದ್ದಾರೆ.

ಉಳಿದವರು ಕಂಡಂತೆ ಕನ್ನಡದ ವಿಭಿನ್ನ ಚಿತ್ರಗಳ ಸಾಲಿನಲ್ಲಿ ನಿಲ್ಲುವಂತಹದ್ದು. ಈ ಚಿತ್ರದಲ್ಲಿ ಕತೆ ಹೇಳುವ ರೀತಿಯೇ ವಿಭಿನ್ನ. ಒಂದು ಕೊಲೆಯ ಸುತ್ತಾ ಸಾಗುವ ಐದು ಕತೆಗಳನ್ನು ಇಲ್ಲಿ ಡಿಫ್ರೆಂಟ್​ ರೀತಿಯಲ್ಲಿ ಹೇಳಲಾಗಿತ್ತು. ಕ್ಲಾಸ್ ಮತ್ತು ಮಾಸ್​ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಿತ್ತು… ಈ ಚಿತ್ರ ಬೇರೆ ಚಿತ್ರರಂಗದ ಗಮನವನ್ನೂ ಸೆಳೆದಿತ್ತು. ಇದೀಗ ತಮಿಳಿನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಹೀಗೆ, ಈ ಚಿತ್ರದ ಬಳಿಕ ನವೀನ್ ಮತ್ತು ರಕ್ಷಿತ್ ಮತ್ತೊಂದು ಪ್ರಾಜೆಕ್ಟ್​ನಲ್ಲಿ ಜೊತೆಯಾಗಲಿದ್ದಾರಂತೆ. ನವೀನ್​ರದ್ದು ಇಲ್ಲಿ ಅತಿಥಿ ಪಾತ್ರವಂತೆ. ಆದರೆ, ಇದು ತುಂಬಾ ಕ್ರಿಯೇಟಿವಿ ಎಲಿಮೆಂಟ್ಸ್​ಗಳನ್ನು ಹೊಂದಿದೆ ಅಂತಾರೆ ನವೀನ್​… ಅದೂ ಅಲ್ಲದೆ, ರಕ್ಷಿತ್ ಶೆಟ್ಟಿ ನಿರ್ಮಾಣದ ಹಂಬಲ್​ ಪಾಲಿಟಿಷಿಯನ್​ ನೋಗರಾಜ್​ ಚಿತ್ರದ ಬಗ್ಗೆಯೂ ನವೀನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮತ್ತು ಕರ್ನಾಟಕದ ಬಗ್ಗೆ ನವೀನ್ ಬಹಳ ಹಳೆಯ ನಂಟು ಹೊಂದಿದವರು. ಹಲವಾರು ಕನ್ನಡಿಗರು ನವೀನ್ ಸ್ನೇಹಿತರು. ಮಂಗಳೂರು, ಬೆಂಗಳೂರಿಗೆ ಇವರು ಸದಾ ಬಂದು ಹೋಗುತ್ತಿರುತ್ತಾರೆ. ಹೀಗಾಗಿ, ಕನ್ನಡ ಮತ್ತು ಕರ್ನಾಟಕ ಇವರಿಗೆ ಹೊಸದಲ್ಲ. ಅಲ್ಲದೆ, ನಟ ರಕ್ಷಿತ್ ಶೆಟ್ಟಿ ಅವರೊಂದಿಗೂ ನವೀನ್​ಗೆ ಒಳ್ಳೆಯ ಸ್ನೇಹ ಇದೆ. ಇದೇ ಸ್ನೇಹ ನವೀನ್ ಸ್ಯಾಂಡಲ್​ವುಡ್ ಪ್ರವೇಶಕ್ಕೂ ರಹದಾರಿ ಆಗಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!