Monday , February 18 2019
ಕೇಳ್ರಪ್ಪೋ ಕೇಳಿ
Home / Film News / Kollywood / 2.0 ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರ ರಿವೀಲ್​​…

2.0 ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರ ರಿವೀಲ್​​…

ಚೆನ್ನೈ : ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಆದರೆ, ಆಮಿಯ ಪಾತ್ರ ಯಾವುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ.


ಆಮಿ ಈ ಚಿತ್ರದಲ್ಲಿ ರೋಬೋಟ್ ಪಾತ್ರವನ್ನೇ ಮಾಡಲಿದ್ದಾರೆ. ನಿರ್ದೇಶಕ ಶಂಕರ್​​ ಆಮಿ ಪಾತ್ರದ ಪೋಸ್ಟರ್​ ಅನ್ನು ಟ್ವಿಟರ್​ನಲ್ಲಿ ಹಾಕಿಕೊಂಡಿದ್ದು, ಈ ಮೂಲಕ ಆಮಿ ಪಾತ್ರದ ಬಗ್ಗೆ ಇದುವರೆಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ವಿಶ್ವದಾದ್ಯಂತ ಗಮನ ಸೆಳೆದಿದ್ದ ಎಂದಿರನ್ ಚಿತ್ರದ ಎರಡನೇ ಭಾಗವೇ ಈ 2.0 ಚಿತ್ರ.. ಈ ಹಿಂದೆ ಬಾಹುಬಲಿ ಸರಣಿ ವಿಶ್ವದಾದ್ಯಂತ ಹೇಗೆ ಕ್ರೇಝ್​ ಸೃಷ್ಟಿಸಿತ್ತೋ ಅದೇ ಕ್ರೇಜ್​​ ಅನ್ನು 2.0 ಕೂಡಾ ಹೊಂದಿದೆ… ಬಾಲಿವುಡ್​ ಆಕ್ಷನ್​ ಕಿಂಗ್ ಅಕ್ಷಯ್ ಕುಮಾರ್​ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಕಿಯದ್ದು ಇಲ್ಲಿ ಖಳನಾಯಕನ ಪಾತ್ರ…

ಸೆಟ್ಟೇರಿದ ದಿನದಿಂದಲೇ ಹೈಪ್​ ಕ್ರಿಯೇಟ್ ಮಾಡಿರುವ ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಸುಮಾರು 450 ಕೋಟಿ ರೂಪಾಯಿ ಬಜೆಟ್​​ನಲ್ಲಿ ನಿರ್ಮಾಣ ಆಗಿತ್ತಿರುವ ಬಿಗ್ ಬಜೆಟ್​ ಸಿನೆಮಾ ಇದು. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಇಷ್ಟು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಏಳನೇ ಇಂಗ್ಲೀಷೇತರ ಸಿನೆಮಾ ಇದು ಎಂಬ ಹೆಗ್ಗಳಿಗೂ 2.0 ಪಾತ್ರವಾಗಿದೆ…

About sudina

Check Also

ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಇವರ ಜೊತೆ ಜಗಳ ಮಾಡಿರುವ …

Leave a Reply

Your email address will not be published. Required fields are marked *

error: Content is protected !!