ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್ ಮದುವೆ ಡ್ಯಾನ್ಸ್ ಈಗ ಸಖತ್ ವೈರಲ್ ಆಗಿದೆ. ಅಶ್ವತಿ ಅಭಿಷೇಕ್ ಉಣ್ಣಿಕೃಷ್ಣನ್ರನ್ನು ವರಿಸಿದ್ದಾರೆ. ಈ ಮದುವೆ ಸಂದರ್ಭದಲ್ಲಿ ಸತಿ ಪತಿಗಳು ಸ್ನೇಹಿತರೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ‘ಐ ಆಮ್ ಎ ಮಲ್ಲು’ ಎಂಬ ಹಾಡಿಗೆ ಇವರು ಕುಣಿದಿದ್ದು, ಇದೀಗ ವೈರಲ್ ಆಗಿದೆ. ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ತುಂಬಾ ಹಿಟ್ ಆಗಿತ್ತು. ಇದೀಗ, ಅಶ್ವತಿ ಮದುವೆ ಡ್ಯಾನ್ಸ್ ಮೂಲಕ ಈ ಹಾಡು ಮತ್ತೆ ಪ್ರಚಾರಕ್ಕೆ ಬಂದಿದೆ.
