Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / 75ರ ಖುಷಿಯಲ್ಲಿ ಬಾಲಿವುಡ್​​​​​​​​​​ ಷೆಹನ್​ ಷಾ

75ರ ಖುಷಿಯಲ್ಲಿ ಬಾಲಿವುಡ್​​​​​​​​​​ ಷೆಹನ್​ ಷಾ

ಮುಂಬೈ : ಅಮಿತಾಭ್​ ಬಚ್ಚನ್​​… ಈ ಹೆಸರು ಕೇಳಿದ ತಕ್ಷಣ ಅಗಾಧ ಪ್ರತಿಭೆಯೊಂದು ಕಣ್ಣ ಮುಂದೆ ಸುಳಿದು ಹೋಗುತ್ತದೆ… ನೀಳಕಾಯ, ಅಪೂರ್ವ ಧ್ವನಿ ಅದು ಅಮಿತಾಭ್​ ಸಂಪತ್ತು… ಈ ಸಂಪತ್ತಿಗೆ ಇನ್ನಷ್ಟು ಬೆಲೆ ತಂದು ಕೊಟ್ಟದ್ದು ಪ್ರತಿಭೆ ಮತ್ತು ಶೃದ್ಧೆ, ಸಾಧಿಸುವ ಛಲ… ಭಾರತೀಯ ಚಿತ್ರರಂಗ ಕಂಡ ಮಹಾನ್ ನಟ ಇವರು. ಇಂತಹ ಅಮಿತಾಭ್ ಈಗ 75ನೇ ವಸಂತದ ಖುಷಿಯಲ್ಲಿದ್ದಾರೆ.

1942 ರ ಅಕ್ಟೋಬರ್​ 11 ಅಮಿತಾಭ್​ ಜನ್ಮ ದಿನ. ಉತ್ತರ ಪ್ರದೇಶದ ಅಲಹಾಬಾದ್​​​​ ಬಿಗ್​​​ ಬಿ ಹುಟ್ಟೂರು. ಕವಿ ಹರಿವಂಶ್​ ಬಚ್ಚನ್​​, ತೇಜಿ ಬಚ್ಚನ್​ ಇವರ ಹೆತ್ತವರು… ಬಚ್ಚನ್​ ಮೊದಲ ಹೆಸರು ಇಂಕಿಲಾಬ್​. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೇಳಿ ಬಂದಿದ್ದ ಇಂಕಿಲಾಬ್ ಜಿಂದಾಬಾಸ್​ ಘೋಷಣೆಯೇ ಈ ಹೆಸರಿಗೆ ಸ್ಫೂರ್ತಿ. ಇದಾದ ಬಳಿಕ ಇವರ ಹೆಸರನ್ನು ಅಮಿತಾಭ್​ ಎಂದು ಬದಲಾಯಿಸಲಾಗಿತ್ತು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಹೊರಟು ಮುಂಬೈಗೆ ಬಂದ ಅಮಿತಾಭ್​​​ಗೆ ಮೊದಲು ಅವಕಾಶಗಳೇ ಸಿಕ್ಕಿರಲಿಲ್ಲ. ಹಾಗೆ ನೀಡಿದರೆ ಆಕಾಶವಾಣಿ ವಾರ್ತಾವಾಚಕರಾಗಿ ಕೆಲಸ ಮಾಡಲು ಇವರು ನೀಡಿದ ಮೊದಲ ಸ್ಕ್ರೀನ್​ ಟೆಸ್ಟ್​ನಲ್ಲೇ ಇವರು ಫೇಲ್​. ಕಂಠ ಸರಿಯಿಲ್ಲ ಎಂಬ ಕಾರಣಕ್ಕೆ ಅಂದು ಇವರಿಗೆ ಅವಕಾಶ ನಿರಾಕರಿಸಲಾಗಿತ್ತು. ಆದರೆ, ಸಾಧನೆಯತ್ತ ಸಾಗಲೇಬೇಕು ಎಂದು ದೃಢ ನಿರ್ಧಾರ ಮಾಡಿದ್ದರು ಬಚ್ಚನ್​. ಹೀಗಾಗಿಯೇ, ಕಷ್ಟವನ್ನು ಸಂದಿಸಿದರೂ ಛಲ ಮಾತ್ರ ಇವರನ್ನು ಬಿಟ್ಟು ಹೋಗಿರಲಿಲ್ಲ…

ಇಂತಹ ಅಮಿತಾಭ್​ಗೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲು ನೆರವಾಗಿದ್ದು 1969ರ ಭುವನ್​ ಶೋಮ್​​. ಈ ಚಿತ್ರದಲ್ಲಿ ಬಚ್ಚನ್​ ವಾಯ್ಸ್​ ನರೇಟರ್​ ಆಗಿದ್ದರು. ಇದಾದ ಬಳಿಕ ಸಾಥ್​ ಹಿಂದೂಸ್ಥಾನಿ ಎಂಬ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದ ಮೂಲಕ ಅಮಿತಾಭ್​ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಷ್ಟಾಗಿ ಸೌಂಡ್ ಮಾಡದಿದ್ದರೂ ಅಮಿತಾಭ್​ಗೆ ಹೆಸರು ತಂದುಕೊಟ್ಟಿತ್ತು. ಹೀಗೆ ಸಾಗಿದ ಬಣ್ಣದ ಬದುಕಿನ ಆರಂಭದ ದಿನಗಳಲ್ಲಿ ಅಮಿತಾಭ್​ ಸಾಕಷ್ಟು ಕಷ್ಟ ಪಟ್ಟಿದ್ದರು. ಸೋಲು ಗೆಲುವಿನ ಸಿಹಿಕಹಿಯನ್ನು ಅನುಭವಿಸಿದ್ದರು. ಆದರೆ, ಇಂತಹ ಕಷ್ಟದ ದಿನಗಳು ಕೆಲವೇ ಕೆಲವು ಮಾತ್ರ. ಯಾಕೆಂದರೆ, ಇದಾದ ಬಳಿಕ ಅಮಿತಾಭ್ ನಟಿಸಿದ ಒಂದೊಂದು ಚಿತ್ರಗಳು ಮೈಲುಗಲ್ಲಾಗುತ್ತಾ ಸಾಗಿದವರು.

ಈ ನಡುವೆ, ಇವರ ನೀಳ ಕಾಯ, ಗಡಸು ಧ್ವನಿಯನ್ನೇ ಕಾರಣವಾಗಿಟ್ಟುಕೊಂಡು ಇವರನ್ನು ಚಿತ್ರರಂಗದಲ್ಲಿ ತುಳಿಯುವ ಯತ್ನ ನಡೆದದ್ದೂ ಸುಳ್ಳಲ್ಲ. ಆದರೆ, ತನ್ನ ದೇಹ ಮತ್ತು ಧ್ವನಿಯನ್ನೇ ಬಳಿಕ ಅಮಿತಾಭ್​ ಬಂಡವಾಳ ಮಾಡಿಕೊಂಡು ಗೆದ್ದು ಬೀಗಿದ್ದು ಮಾತ್ರ ಈಗ ಇತಿಹಾಸ. ಜಂಜೀರ್​, ದಿವಾರ್, ಶೋಲೆ ಹೀಗೆ ಹಿಟ್​ ಮೇಲೆ ಹಿಟ್​ ಚಿತ್ರಗಳನ್ನು ಅಮಿತಾಭ್ ಬತ್ತಳಿಕೆಯಲ್ಲಿವೆ. ಆಂಗ್ರಿ ಯಂಗ್​ ಮ್ಯಾನ್​, ಷೆಹನ್​​ಷಾ, ಸ್ಟಾರ್ ಆಫ್​ ದಿ ಮಿಲೇನಿಯಂ, ಬಿಗ್​ ಬಿ ಹೀಗೆ ಸಾಕಷ್ಟು ಬಿರುದುಗಳು ಜನರ ಪ್ರೀತಿಯ ದ್ಯೋತಕವಾಗಿ ಬಚ್ಚನ್​ ಮುಡಿಗೇರಿದ್ದವು…

ಸುಮಾರು ಆರು ದಶಕದಿಂದ ಬಿಗ್​ ಬಿ ಬಣ್ಣದ ನಂಟು ಹೊಂದಿದ್ದಾರೆ. ಈಗ ಇವರ ವಯಸ್ಸು 75. ಆದರೆ, ಯಾವುದೇ ಯುವ ನಾಯಕನಿಗಿಂತ ಕಮ್ಮಿ ಇಲ್ಲ ಅಮಿತಾಭ್ ಖದರ್​. ಬಾಲಿವುಡ್​ನಲ್ಲಿ ಈಗಲೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಮಿತಾಭ್ ಒಬ್ಬರು ಎಂದರೆ ಅಚ್ಚರಿಯಾಗಲಿರಲಾರದು… ನಿಮಗೆ ಗೊತ್ತಿರಲಿ ಅಮಿತಾಭ್​ ಈಗಲೂ ಸಿನಿಲೋಕದಲ್ಲಿ ಸಕ್ರಿಯ. ಇನ್ನೂ ಎರಡು ವರ್ಷಕ್ಕೂ ಹೆಚ್ಚು ಕಾಲ ಅಮಿತಾಭ್​ ಕಾಲ್​ ಶೀಟ್ ಇಲ್ಲ. ಅಷ್ಟು ಬ್ಯುಸಿ ಇವರು.

ಬರೀ ಬೆಳ್ಳಿತೆರೆ ಮಾತ್ರ ಅಲ್ಲ. ಕಿರುತೆರೆಯಲ್ಲೂ ಇವರು ಖ್ಯಾತಿಗಳಿಸಿದವರು. ಅಮಿತಾಭ್ ಇಂದಿಗೂ ಭಾರತದ ಟಿವಿ ಐಕಾನ್ ಅಂದೇ ಜನಪ್ರಿಯ. ಅಮಿತಾಭ್ ಅಂದ್ರೆ ಅದು ಕೌನ್ ಬನೇಗಾ ಕರೋಡ್ಪತಿಯೇ ಕಣ್ಮುಂದೆ ಬರುತ್ತದೆ. ಈ ಇಡೀ ಶೋವನ್ನು ಅಮಿತಾಭ್ ಆವರಿಸಿರುವ ಪರಿ ರಿಯಲೀ ಗ್ರೇಟ್​… ಭಾರತದ ಸಿನಿಮಾ ಇತಿಹಾಸದಲ್ಲಿ ಬಚ್ಚನ್​ ದಂತಕತೆ. ಇವರು ಇಂದಿಗೂ ಹಲವರಿಗೆ ಸ್ಫೂರ್ತಿ. ಒಂದೆರಡು ದಶಕಗಳ ಕಾಲ ಹಿಂದಿ ಸಿನೆಮಾಲೋಕದಲ್ಲಿ ವನ್​ ಮ್ಯಾನ್ ಇಂಡಸ್ಟ್ರಿ ಎಂದೇ ವಿದೇಶದ ಖ್ಯಾತನಾಮರಿಂದ ಹೊಗಳಿಸಿಕೊಂಡಿದ್ದವರು ಅಮಿತಾಭ್​. ಇನ್ನು, ಇವರಿಗೆ ಸಂದ ಪ್ರಶಸ್ತಿ, ಗೌರವಗಳಿಗೆ ಲೆಕ್ಕವೇ ಇಲ್ಲ. ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. ಇನ್ನು, ಬರೀ ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅಮಿತಾಭ್​ ತೊಡಗಿಸಿಕೊಂಡಿದ್ದರು. ಕನ್ನಡದಲ್ಲಿ ಅಮೃತಧಾರೆ ಎಂಬ ಚಿತ್ರದಲ್ಲಿ ಬಿಗ್ ಬಿ ನಟಿಸಿದ್ದರು. ಈ ಚಿತ್ರದಲ್ಲಿ ಅಮಿತಾಭ್​ ತೆಗೆದುಕೊಂಡ ಸಂಭಾವಣೆ ಎಷ್ಟು ಗೊತ್ತಾ…? ಬರೀ ಒಂದು ರೂಪಾಯಿ. ಖ್ಯಾತಿಯ ಉತ್ತುಂಗದಲ್ಲಿ ಇದ್ದ ಸಮಯದಲ್ಲೇ ಅಮಿತಾಭ್​​​ ಕನ್ನಡದಲ್ಲಿ ಬಂದು ನಟಿಸಿದ್ದರು. ಕನ್ನಡದ ಮೇಲೆ ಬಚ್ಚನ್​ಗೆ ಅಪರಿಮಿತ ಪ್ರೀತಿ. ವರನಟ ರಾಜ್​ಕುಮಾರ್​ ಜೊತೆ ಬಿಗ್​ ಬಿಗೆ ಒಳ್ಳೆಯ ಬಾಂಧವ್ಯ ಇತ್ತು. ಕನ್ನಡದ ಹಲವು ನಟರೊಂದಿಗೆ ಇವರು ಸ್ನೇಹ ಹೊಂದಿದ್ದಾರೆ. ಇಂತಹ ಮಹಾನ್ ನಟ ಈಗ 75ನೇ ವಸಂತದ ಖುಷಿಯಲ್ಲಿದ್ದಾರೆ. ವಯಸ್ಸಾದರೂ ಚಿರ ಯೌವನಿಗನಂತೆ ಮಿಂಚುವ ಬಿಗ್​ ಬಿ ಜೀವನವೂ ಎಲ್ಲರಿಗೂ ಸ್ಫೂರ್ತಿಯಾಗಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!