Thursday , December 14 2017
Home / Coastalwood / ‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಶುರು

‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಶುರು

ಮಂಗಳೂರು : ಕೋಸ್ಟಲ್​ವುಡ್​​ನ ಸ್ಟಾರ್ ಡೈರೆಕ್ಟರ್​ ಕೆ.ಸೂರಜ್ ಶೆಟ್ಟಿ ನಿರ್ದೇಶನದ ‘ಅಮ್ಮೇರ್ ಪೊಲೀಸಾ’ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಮುಡಿಪು, ಇರಾ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ಜಾಗದಲ್ಲಿ ಚಿತ್ರದ ಶೂಟಿಂಗ್ ಸಾಗುತ್ತಿದೆ.

ಇತ್ತೀಚೆಗಷ್ಟೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಅಮ್ಮೇರ್ ಪೊಲೀಸಾ’ ಚಿತ್ರದ ಮುಹೂರ್ತ ನಡೆದಿತ್ತು. ಈ ವೇಳೆ, ಕೋಸ್ಟಲ್​ವುಡ್​ನ ಹಲವು ಗಣ್ಯರು ಉಪಸ್ಥಿತರಿದ್ದರು.

ಎಕ್ಕಸಕ, ಪಿಲಿಬೈಲ್ ಯಮುನಕ್ಕ ಚಿತ್ರಗಳ ಬಳಿಕ ‘ಅಮ್ಮೇರ್ ಪೊಲೀಸಾ’ ಚಿತ್ರವನ್ನು ಸೂರಜ್​ ಶೆಟ್ಟಿ ಕೈಗೆತ್ತಿಕೊಂಡಿದ್ದರು. ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಮತ್ತು ಪೂಜಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ, ಅರವಿಂದ ಬೋಳಾರ್​, ಸತೀಶ್​ ಬಂದಲೆ, ಪ್ರಸನ್ನ ಶೆಟ್ಟಿ, ವಿಸ್ಮಯ್​ ವಿನಾಯಕ್​, ಮೈಮ್​ ರಾಮ್​ದಾಸ್​​, ದೀಪಕ್​ ರೈ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

‘ರಂಗ್​ ರಂಗ್​​ದ ದಿಬ್ಬಣ’ ಚಿತ್ರದ ವಿತರಣಾ ಹಕ್ಕು ಪಡೆದ ತೂಗುದೀಪ ಪ್ರೊಡಕ್ಷನ್ಸ್​

ಮಂಗಳೂರು : ಸ್ಯಾಂಡಲ್​ವುಡ್​ನ ಪ್ರಮುಖ ವಿತರಣಾ ಸಂಸ್ಥೆ ತೂಗುದೀಪ ಪ್ರೊಡಕ್ಷನ್ಸ್​ ಈಗ ತುಳು ಚಿತ್ರವೊಂದರ ವಿತರಣಾ ಹಕ್ಕು ಪಡೆದಿದೆ. ರಂಗ್​ …

Leave a Reply

Your email address will not be published. Required fields are marked *

error: Content is protected !!