Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ಒಂದು ಬೈಕ್​​ನಲ್ಲಿ ಐದು ಜನ : ಕೈ ಮುಗಿದ ಪೊಲೀಸ್ ಅಧಿಕಾರಿ : ವೈರಲ್ ಆಗಿದೆ ಫೋಟೋದ ಹಿಂದಿನ ಕತೆ

ಒಂದು ಬೈಕ್​​ನಲ್ಲಿ ಐದು ಜನ : ಕೈ ಮುಗಿದ ಪೊಲೀಸ್ ಅಧಿಕಾರಿ : ವೈರಲ್ ಆಗಿದೆ ಫೋಟೋದ ಹಿಂದಿನ ಕತೆ

ಹೈದರಾಬಾದ್ : ಒಂದು ಬೈಕ್​​ನಲ್ಲಿ ಐದು ಜನ ಹೋಗುತ್ತಿದ್ದ ವೇಳೆ ಅವರಿಗೆ ಕೈ ಮುಗಿಯುವ ಪೊಲೀಸ್ ಅಧಿಕಾರಿಯ ಫೋಟೋವೊಂದು ಈಗ ವೈರಲ್ ಆಗಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಈ ಐವರಿಗೆ ಪೊಲೀಸ್ ಅಧಿಕಾರಿ ತನ್ನದೇ ಈ ಶೈಲಿಯಲ್ಲಿ ಚಾಟಿ ಬೀಸಿದ್ದಾರೆ.

ಒಂದು ಬೈಕ್​​ನಲ್ಲಿ ಮೂವರು ಹೋಗುವುದೇ ಅಪರಾಧ. ಅಂತಹದರಲ್ಲಿ ಈ ಬೈಕ್​​ನಲ್ಲಿ ಐದು ಜನರಿದ್ದಾರೆ. ಅದೂ ಅಲ್ಲದೆ, ಯಾರೊಬ್ಬರೂ ಹೆಲ್ಮೆಟ್ ಧರಿಸಿಲ್ಲ. ಇದು ಟ್ರಾಫಿಕ್ ನಿಯಮದ ಸಂಪೂರ್ಣ ಉಲ್ಲಂಘನೆ. ಈ ಸವಾರಿಯನ್ನು ಕಂಡು ಸ್ವತಃ ಪೊಲೀಸ್ ಅಧಿಕಾರಿಯೂ ಒಮ್ಮೆ ಚಕಿತರಾಗಿದ್ದರು. ಈ ಫೋಟೋ ಸೆರೆ ಆಗಿದ್ದು ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ.

ಈ ಫೋಟೋದಲ್ಲಿ ಇರುವ ಪೊಲೀಸ್ ಅಧಿಕಾರಿಯ ಹೆಸರು ಬಿ.ಸುಭಾಷ್ ಕುಮಾರ್. ಮದಕಸಿರಾದ ಸರ್ಕಲ್ ಇನ್ಸ್ಪೆಕ್ಟರ್ ಇವರು. ಬೆಳಗ್ಗೆ ಸುಮಾರು 10 ಗಂಟೆಗೆ ಇವರು ಕಚೇರಿಗೆ ಹೋಗುವ ಸಂದರ್ಭದಲ್ಲಿ ಕೆ.ಹನುಮಂತರಾಯುಡು ಎಂಬ ಈ ಬೈಕ್ ಸವಾರನನ್ನು ಕಂಡಿದ್ದರು. ಹನುಮಂತರಾಯುಡು ಸೇರಿ ಈ ಬೈಕ್ನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಇದನ್ನು ನೋಡಿ ಸುಭಾಷ್ ದಂಗಾಗಿದ್ದರು. ಸಂಚಾರ ನಿಯಮ ಸುಧಾರಿಸಲು ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಇಂತಹ ಟ್ರಾಫಿಕ್ ನಿಯಮ ಉಲ್ಲಂಘನೆ ಇವರ ಮನಸ್ಸಿಗೆ ಘಾಸಿಗೊಳಿಸಿತ್ತು. ಅವರಿಗೂ ಏನು ಮಾಡಬೇಕೆಂದು ತೋಚಲಿಲ್ಲ. ಹೀಗಾಗಿ, ಈ ಸವಾರನಿಗೆ ಬೈಯದ ತನ್ನದೇ ಶೈಲಿಯಲ್ಲಿ ಆತನ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು ಸುಭಾಷ್. ಜೊತೆಗೆ, ಬೈಕ್​ನಲ್ಲಿದ್ದ ಮಕ್ಕಳಲ್ಲಿ ಪೊಲೀಸರ ಮೇಲೆ ಕೆಟ್ಟ ಅಭಿಪ್ರಾಯ ಬರಬಾರದೆಂಬ ಕಾರಣದಿಂದ ಇವರು ಈ ರೀತಿ ಶಾಂತಿಯ ಮಾರ್ಗವನ್ನೂ ಅನುಸರಿಸಿದ್ದರು.

ಇನ್ನು, ಈ ಹನುಮಂತರಾಯುಡು ಇದೇ ರೀತಿ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದನಂತೆ ಮತ್ತು ಈತನಿಗೆ ಹಲವು ಬಾರಿ ಎಚ್ಚರಿಕೆಯನ್ನೂ ಕೊಡಲಾಗಿತ್ತಂತೆ.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!