Monday , January 21 2019
ಕೇಳ್ರಪ್ಪೋ ಕೇಳಿ
Home / Film News / Kollywood / ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಇವರ ಜೊತೆ ಜಗಳ ಮಾಡಿರುವ ಬಿಲ್ಡರ್ ಷಣ್ಮುಗಸುಂದರಂ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರಾವಕ್ಕಂ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ.​​ ಕಲ್ಯಾಣ ಮಂಟಪ ನಿರ್ಮಾಣ ವಿಚಾರದಲ್ಲಿ ಈ ಗಲಾಟೆ ನಡೆದಿದೆ.

ಏನಿದು ಪ್ರಕರಣ? : ನಟ ಸಂತಾನಂ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಸಲುವಾಗಿ ಬಿಲ್ಡರ್​​ ಷಣ್ಮುಗ ಸುಂದರಂಗೆ ಅಪಾರ ಹಣ ನೀಡಿದ್ದರು. ಅಡ್ವಾನ್ಸ್​ ರೂಪದಲ್ಲಿ ಹಣ ಪಡೆದಿದ್ದ ಷಣ್ಮುಗ ಸುಂದರಂ ಕೆಲಸವನ್ನು ತುಂಬಾ ವಿಳಂಬ ಮಾಡಿದ್ದರು. ಒಂದು ಹಂತದಲ್ಲಿ ಈ ಪ್ರಾಜೆಕ್ಟ್​​ ನಿಂತು ಹೋಗಿತ್ತು. ಇದರಿಂದ ಸಿಟ್ಟಾದ ಸಂತಾನಂ ಬಿಲ್ಡರ್​ ಜೊತೆ ಜಗಳ ಮಾಡಿ ತಾನು ನೀಡಿದ್ದ ಹಣ ವಾಪಸ್ ನೀಡುವಂತೆ ಗದರಿಸಿದ್ದರು. ಇದಕ್ಕೆ ಬಿಲ್ಡರ್ ಒಪ್ಪದೇ ಇದ್ದಾಗ ಗಲಾಟೆ ಇನ್ನಷ್ಟು ಜೋರಾಗಿತ್ತು. ಈ ನಡುವೆ, ಬಿಲ್ಡರ್​ ಷಣ್ಮುಗ ಸುಂದರಂ ಮತ್ತು ಬಿಜೆಪಿ ನಾಯಕ ಪ್ರೇಮ್ ಆನಂದ್​, ಸಂತಾನಂ ಮತ್ತು ಅವರ ಮ್ಯಾನೇಜರ್​ರನ್ನು ಮೊನ್ನೆ ಹಣ ಕೊಡುತ್ತೇವೆ ಎಂದು ಕರೆಸಿಕೊಂಡಿದ್ದರು. ಈ ವೇಳೆ, ಮತ್ತೆ ಗಲಾಟೆ ನಡೆದು ಇಬ್ಬರು ಕೈ ಕೈ ಮಿಲಾಯಿಸಿದ್ದರು. ಟೇಬಲ್ ಮೇಲೆ ಇಟ್ಟಿದ್ದ ಹೂದಾನಿಯಲ್ಲಿ ಷಣ್ಮುಗ ಸುಂದರಂ ಸಂತಾನಂಗೆ ಹೊಡೆದಿದ್ದರು. ಇದರಿಂದ ಸಿಟ್ಟಾದ ಸಂತಾನಂ ಮತ್ತು ಮ್ಯಾನೇಜರ್​ ಷಣ್ಮುಗ ಸುಂದರಂಗೆ ಚೆನ್ನಾಗಿ ಥಳಿಸಿದ್ದರು. ಇದರಿಂದ ಇವರ ಮೂಗಿಗೆ ಗಾಯವಾಗಿತ್ತು.

ಈ ಬಳಿಕ ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದರು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ನಡುವೆ, ನಿರೀಕ್ಷಣಾ ಜಾಮೀನಿಗಾಗಿ ಸಂತಾನಂ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!