Saturday , February 16 2019
ಕೇಳ್ರಪ್ಪೋ ಕೇಳಿ
Home / Gulf News / ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು ನಿಂತ ಕಾರನ್ನು ತಳ್ಳಿಕೊಂಡು ಸುರಕ್ಷಿತ ಸ್ಥಳಕ್ಕೆ ತಂದ ಮತ್ತು ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡ ದುಬೈ ಪೊಲೀಸ್​ ಅಧಿಕಾರಿಯ ವೀಡಿಯೋ ಈಗ ದುಬೈಯಲ್ಲಿ ವೈರಲ್ ಆಗಿದೆ.


ಅಧಿಕಾರಿ ವಾಲೀದ್​​​ ಮಲುಲ್ಲಾಹ್​ ಅಬ್ದುಲ್ಲಾಹ್​ ಕಾರಿನ ಚಾಲಕನಿಗೆ ಈ ಸಹಾಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬ್ರೇಕ್​ ಡೌನ್ ಆಗಿ ಈ ಕಾರು ರಸ್ತೆಯ ಮಧ್ಯ ಭಾಗದಲ್ಲೇ ಕೆಟ್ಟು ನಿಂತಿತ್ತು. ಈ ವೇಳೆ, ತಕ್ಷಣ ಈ ಪೊಲೀಸ್​ ಅಧಿಕಾರಿ ಸಹಾಯಕ್ಕೆ ಧಾವಿಸಿದರು. ಇವರ ಕಾರ್ಯತತ್ಪರತೆಯನ್ನು ಹಿರಿಯ ಅಧಿಕಾರಿಗಳು ಕೊಂಡಾಡಿದ್ದಾರೆ ಮತ್ತು ಇತರರಿಗೆ ಸ್ಫೂರ್ತಿಯಾಗುವಂತಹ ಈ ವೀಡಿಯೋಗೆ ಇನ್ನಷ್ಟು ಪ್ರಚಾರ ಕೊಡುವಂತೆ ಹೇಳಿದ್ದಾರೆ.

About sudina

Check Also

ದೂರವಾಗಿದ್ದ ಸ್ನೇಹಿತರನ್ನು 23 ವರ್ಷಗಳ ಬಳಿಕ ಒಂದಾಗಿಸಿದ ಫೇಸ್​ಬುಕ್​…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದುಬೈ : ಇದೊಂದು ಅಪೂರ್ವ ಸಂದರ್ಭ. ಆ ಸಹೋದರರಿಬ್ಬರ ಭೇಟಿಯ ಕ್ಷಣ. ಈ …

Leave a Reply

Your email address will not be published. Required fields are marked *

error: Content is protected !!