Sunday , December 16 2018
ಕೇಳ್ರಪ್ಪೋ ಕೇಳಿ
Home / News NOW / ಪಂಚಕುಲ ಗಲಭೆಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಹನಿಪ್ರೀತ್ ಸಿಂಗ್

ಪಂಚಕುಲ ಗಲಭೆಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಹನಿಪ್ರೀತ್ ಸಿಂಗ್

ಚಂಡೀಗಡ : ಅತ್ಯಾಚಾರ ಆರೋಪದಲ್ಲಿ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಂ ಸಿಂಗ್ನ ಬಂಧನ ವೇಳೆ ನಡೆದಿದ್ದ ಹಿಂಸಾಚಾರದ ಮಾಸ್ಟರ್ ಮೈಂಡ್ ತಾನೇ ಎಂದು ರಾಮ್ ರಹೀಂನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಒಪ್ಪಿಕೊಂಡಿದ್ದಾಳೆ. ಅಂದು ಪಂಚಕುಲದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ 38 ಜನ ಬಲಿಯಾಗಿದ್ದರು. ಇದಾದ ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಸಾಕಷ್ಟು ಕಷ್ಟಪಟ್ಟಿದ್ದರು. ಈ ಘಟನೆಯ ನಂತರ ಹನಿಪ್ರೀತ್ ಸಿಂಗ್ ತಲೆ ಮರೆಸಿಕೊಂಡಿದ್ದರು. ಈಕೆಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.

ಬಂಧನದ ಬಳಿಕ ಈಕೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಅಂದಿನ ಹಿಂಸಾಚಾರದ ಬಗ್ಗೆ ಈಗ ಹಲವು ಮಾಹಿತಿಯನ್ನು ನೀಡಿದ್ದಾಳೆ. ಅಂದು ಹಿಂಸೆಯನ್ನು ಸೃಷ್ಟಿಸಲು ಡೇರಾ ಕಾರ್ಯಕರ್ತರಿಗೆ ಹೇಳಲಾಗಿದ್ದು, ಈ ಹಿಂಸೆಗೆ ಹಣಕಾಸಿನ ನೆರವೂ ನೀಡುತ್ತೇವೆ ಎಂದು ತಿಳಿಸಲಾಗಿತ್ತು ಎಂದು ಹನಿಪ್ರೀತ್ ಹೇಳಿದ್ದಾಗಿ ಹರಿಯಾಣ ಪೊಲೀಸರ ವಿಶೇಷ ತನಿಖಾ ತಂಡ ತಿಳಿಸಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!