Wednesday , January 23 2019
ಕೇಳ್ರಪ್ಪೋ ಕೇಳಿ
Home / News NOW / ಡೊನಾಲ್ಡ್​ ಟ್ರಂಪ್ ಪತ್ನಿಯರ ಕಿತ್ತಾಟ : ‘ಫಸ್ಟ್​ ಲೇಡಿ’ ಪಟ್ಟಕ್ಕೆ ಜಗಳ

ಡೊನಾಲ್ಡ್​ ಟ್ರಂಪ್ ಪತ್ನಿಯರ ಕಿತ್ತಾಟ : ‘ಫಸ್ಟ್​ ಲೇಡಿ’ ಪಟ್ಟಕ್ಕೆ ಜಗಳ

ನ್ಯೂಯಾರ್ಕ್​ : ಅಮೇರಿಕಾದ ಅಧ್ಯಕ್ಷ ಡೊನ್ಯಾಲ್ಡ್​ ಟ್ರಂಪ್​ ಈಗ ಪೀಕಲಾಟಕ್ಕೆ ಸಿಲುಕಿದ್ದಾರೆ. ಇವರ ಪತ್ನಿಯರು ‘ಫಸ್ಟ್​ ಲೇಡಿ’ ಪಟ್ಟಕ್ಕೆ ಜಗಳ ಶುರು ಮಾಡಿದ್ದಾರೆ. ಅಮೇರಿಕಾದ ಅಧ್ಯಕ್ಷರ ಪತ್ನಿಯನ್ನು ‘ಪ್ರಥಮ ಮಹಿಳೆ’ ಎಂದೇ ಗುರುತಿಸಲಾಗುತ್ತದೆ. ಮೊನ್ನೆ ಸೋಮವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡೊನಾಲ್ಡ್​ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್​ ತಾನೇ ‘ಪ್ರಥಮ ಮಹಿಳೆ’ ಎಂದು ಹೇಳಿಕೊಂಡಿದ್ದಾರೆ. ತನ್ನ ‘ರೈಸಿಂಗ್ ಟ್ರಂಪ್’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಇವಾನಾ ಈ ಹೇಳಿಕೆ ನೀಡಿದ್ದರು. ಇದು ‘ಪ್ರಥಮ ಮಹಿಳೆ’ ಪಟ್ಟದ ಕುರಿತ ಚರ್ಚೆಗೆ ಕಾರಣವಾಗಿದೆ.


ಇವಾನಾ ಹೇಳಿಕೆ ಟ್ರಂಪ್​​ ಹಾಲಿ ಪತ್ನಿ ಮೆಲಾನಿಯಾ ಟ್ರಂಪ್​ರನ್ನು ಸಿಟ್ಟಿಗೇರಿಸಿದೆ. ಇವಾನಾ ಹೇಳಿಕೆಗೆ ತಿರುಗೇಟು ನೀಡಿರುವ ಮೆಲಾನಿಯಾ ಇದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುವ ಹುನ್ನಾರ ಎಂದು ಹೇಳಿಕೊಂಡಿದ್ದಾರೆ.

ಇವಾನಾ ಮತ್ತು ಡೊನಾಲ್ಡ್​ ಟ್ರಂಪ್​ 1977ರಲ್ಲಿ ಮದುವೆ ಆಗಿದ್ದರು. 1992ರಲ್ಲಿ ಇವರಿಬ್ಬರು ವಿಚ್ಚೇದನ ಪಡೆದಿದ್ದರು. ಟ್ರಂಪ್​ಗೆ ಮರ್ಲಾ ಮಲ್ಪೀಸ್​ ಜೊತೆ ಅಫೇರ್ ಇದ್ದ ಕಾರಣದಿಂದ ಈ ದಂಪತಿ ಪರಸ್ಪರ ದೂರವಾಗಿದ್ದರು. ಇವಾನಾಗೆ ಮೂವರು ಮಕ್ಕಳಿದ್ದಾರೆ. ಇದಾದ ಬಳಿಕ ಮರ್ಲಾ ಮಲ್ಪೀಸ್​ರನ್ನು ವರಿಸಿದ್ದರು. ಆದರೆ, ಸೋಮವಾರ ಬಿಡುಗಡೆಯಾದ ಇವಾನಾರ ಪುಸ್ತಕದಲ್ಲಿ ಮರ್ಲಾ ಮಲ್ಪೀಸ್​ರನ್ನು ಪತ್ನಿಯೆಂದು ಉಲ್ಲೇಖಿಸಿಲ್ಲ. ಬದಲಾಗಿ, ‘ಶೋ ಗರ್ಲ್’ ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!