Tuesday , October 16 2018
ಕೇಳ್ರಪ್ಪೋ ಕೇಳಿ
Home / Sandalwood / ಶುಕ್ರವಾರ ಶಿವಣ್ಣನ ಮುತ್ತಣ್ಣ ಚಿತ್ರ ರೀರಿಲೀಸ್

ಶುಕ್ರವಾರ ಶಿವಣ್ಣನ ಮುತ್ತಣ್ಣ ಚಿತ್ರ ರೀರಿಲೀಸ್

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಚಿತ್ರಗಳು ಅಂದರೆ ಸದಾ ಕಾಲಕ್ಕೂ ಹಿಟ್​. ಶಿವಣ್ಣ ಅಭಿನಯದ ಚಿತ್ರಗಳು 20 ವರ್ಷಗಳ ಬಳಿಕ ರಿ ರಿಲೀಸ್​ ಆದರೂ ಸೂಪರ್​ ಡೂಪರ್​ ಹಿಟ್​ ಆಗುತ್ತವೆ. ಇದಕ್ಕೆ ಈ ಹಿಂದಿನ ಚಿತ್ರಗಳು ಸಾಕ್ಷಿಯಾಗಿವೆ. ಈಗ ಶಿವಣ್ಣ ಅಭಿನಯದ ಮತ್ತೊಂದು ಚಿತ್ರ ರಿ ರಿಲೀಸ್​ಗೆ ರೆಡಿ ಆಗುತ್ತಿದೆ… ಇದು ಶಿವರಾಜ್​ಕುಮಾರ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ…

ಮುತ್ತಣ್ಣ ಪಿಪಿ ಓದುವ ಮುತ್ತಣ್ಣ ಡೋಲು ಬಡಿಯುವ… ಮುತ್ತಣ್ಣ ಹಾಡು ಹಾಡುವ… ಈ ಹಾಡನ್ನು ಕೇಳಿದರೆ ಕಿವಿಯೊಮ್ಮೆ ನೆಟ್ಟಗಾಗುತ್ತದೆ… ಅಂತಹ ಶಕ್ತಿ ಈ ಹಾಡಿಗಿದೆ… ಈ ಹಾಡು ಬಂದು ಈಗ ಸುಮಾರು 23 ವರ್ಷ ಆಗಿದೆ… ಆದರೂ ಈ ಹಾಡು ಇಂದಿಗೂ ಕಿವಿಗಿಂಪು…

ಇದು ಶಿವರಾಜ್​ಕುಮಾರ್ ಅಭಿನಯದ ಮುತ್ತಣ್ಣ ಚಿತ್ರದ ಹಾಡು… ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಅವರದ್ದು ಡ್ಯೂಯೆಲ್​ ರೋಲ್​​​​… ಒಂದು ಸಾತ್ವಿಕನ ಪಾತ್ರವಾದರೆ, ಇನ್ನೊಂದು ನೆಗೆಟಿವ್​ ಶೇಡ್​ ಇರುವ ಪಾತ್ರವದು… ಶಿವರಾಜ್​ಕುಮಾರ್​ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿದ ಚಿತ್ರವೂ ಇದೇ…

ಅಣ್ಣ ತಂಗಿ ಸೆಂಟಿಮೆಂಟ್​ನ ಈ ಚಿತ್ರ ಅಂದು ಸೂಪರ್​ ಡೂಪರ್ ಹಿಟ್​ ಆಗಿತ್ತು. ಇದೀಗ ಇದೇ ಚಿತ್ರ ಮತ್ತೆ ತೆರೆಗೆ ಬರಲು ಸಜ್ಜಾಗಿದೆ… ಇದೇ ಶುಕ್ರವಾರ ಅಂದರೆ 13ನೇ ತಾರೀಕಿಗೆ ಮುತ್ತಣ್ಣ ರೀರಿಲೀಸ್ ಆಗುತ್ತಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಮುತ್ತಣ್ಣ ಚಿತ್ರ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಶಿವರಾಜ್​​ಕುಮಾರ್, ಶಶಿಕುಮಾರ್, ಭವ್ಯಶ್ರೀ ರೈ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಎಂ.ಎಸ್​​.ರಾಜಶೇಖರ್​​ ನಿರ್ದೇಶನದ ಈ ಚಿತ್ರ ಸದ್ಯ 2ಕೆ ರೆಸೆಲ್ಯೂಷನ್​​​ ಹೈ ಟೆಕ್ನಾಲಜಿಯೊಂದಿಗೆ 7.1 ಸೌಂಡ್​​ನಲ್ಲಿ ತೆರೆಗೆ ತರಲಾಗುತ್ತಿದೆ. ನಿರ್ಮಾಪಕ ಸೋಮಣ್ಣ ಗೌಡ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

1994 ರಲ್ಲಿ ಮುತ್ತಣ್ಣ ಚಿತ್ರ ರಿಲೀಸ್ ಆಗಿತ್ತು. 1970ರಲ್ಲಿ ಬಾಲಿವುಡ್​ನಲ್ಲಿ ತೆರೆ ಕಂಡಿದ್ದ ಮನಮೋಹನ್​ ದೇಸಾಯಿ ಅವರ ಸಚ್ಚಾ ಜೂಟ ಚಿತ್ರದ ರಿಮೇಕ್ ಇದು. ರಾಜೇಶ್ ಖನ್ನಾ, ಮುಮ್ತಾಜ್​, ವಿನೋದ್​ ಖನ್ನಾ ಈ ಚಿತ್ರದಲ್ಲಿ ಲೀಡ್​ ರೋಲ್​ನಲ್ಲಿದ್ದರು. ತಮಿಳಿನಲ್ಲೂ ಈ ಚಿತ್ರ 1975ರಲ್ಲಿ ನೆನತದೈ ಮುಡಿಪ್ಪವನ್​ ಎಂಬ ಟೈಟಲ್​​ನೊಂದಿಗೆ ರಿಮೇಕ್ ಆಗಿತ್ತು… 23 ವರ್ಷದ ಹಿಂದೆ ಈ ಚಿತ್ರ ರಿಲೀಸ್ ಆದ ಸಂದರ್ಭದಲ್ಲಿ ಅಯೋದ್ಯಾ ಗಲಾಟೆ ಜೋರಾಗಿಯೇ ಇತ್ತಂತೆ. ಆದರೂ, ಈ ಗಲಾಟೆಯ ನಡುವೆಯೂ ಚಿತ್ರ ಸಖತ್ ಹಿಟ್ ಆಗಿತ್ತು.

ಇದು ಶಿವರಾಜ್​ಕುಮಾರ್​ ಅವರ ಬಲು ಇಷ್ಟದ ಚಿತ್ರಗಳಲ್ಲಿ ಒಂದು. ಈ ಚಿತ್ರ ಮಾಡುವಾಗ ಶಿವಣ್ಣನ ವಯಸ್ಸು ಸುಮಾರು 32. ಸಖತ್​ ಜೋಷ್​ ಕೂಡಾ ಇತ್ತು. ಈ ಚಿತ್ರ ಮಾಡುವಾಗಲೂ ಶಿವಣ್ಣ ಸಖತ್​ ಥ್ರಿಲ್ ಆಗಿದ್ದರಂತೆ. ಇನ್ನು, ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಪುತ್ರಿ ನಿರುಪಮಾ ಕೂಡಾ ಅಭಿನಯಿಸಿದ್ದರು. ಈ ಚಿತ್ರಕ್ಕೆ ಶಿವಣ್ಣನ ಪತ್ನಿ ಗೀತಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!