Saturday , February 16 2019
ಕೇಳ್ರಪ್ಪೋ ಕೇಳಿ
Home / Sandalwood / ಪೊಲೀಸ್ ಗೆಟಪ್ ನಲ್ಲಿ ಯಶ್

ಪೊಲೀಸ್ ಗೆಟಪ್ ನಲ್ಲಿ ಯಶ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​ ಖಾಕಿಯಲ್ಲಿ ಮಿಂಚಲಿದ್ದಾರೆ. ಸದ್ಯ ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನೀಪುತ್ರ ಚಿತ್ರ ನಿರ್ದೇಶನ ಮಾಡುತ್ತಿರುವ ಹರ್ಷ ಅವರ ಮತ್ತೊಂದು ಪ್ರಾಜೆಕ್ಟ್​​ ಕೂಡಾ ಸಿದ್ಧವಾಗಿದ್ದು, ಈ ಪ್ರಾಜೆಕ್ಟ್​ನಲ್ಲಿ ಹರ್ಷ ಜೊತೆ ಯಶ್​ ಇರಲಿದ್ದಾರೆ. ಹರ್ಷ ಮತ್ತು ಯಶ್ ಕಾಂಬಿನೇಷನ್​ನ ಈ ಹೊಸ ಚಿತ್ರದ ಹೆಸರು ‘ರಾಣಾ’. ಸಿಂಹಾದ್ರಿ ಪ್ರೊಡಕ್ಷನ್​​​​​ ಬ್ಯಾನರ್​ನಲ್ಲಿ ರಮೇಶ್​ ಕಶ್ಯಪ್​​ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಯಶ್​​ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಯಶ್​ ಇದೇ ಮೊದಲ ಬಾರಿಗೆ ಖಾಕಿಯಲ್ಲಿ ಮಿಂಚಲಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!