Friday , February 23 2018
Home / Interval / ಅಕ್ಷಯ್‍ಗಾಗಿ ಜೀವವನ್ನೇ ಕೊಡಲು ಸಿದ್ಧವಾಗಿದ್ದ ರವೀನಾ ಆ ಒಂದು ಕಾರಣಕ್ಕೆ ದೂರವಾಗಿದ್ದರು, ಅಕ್ಕಿ ವಿರುದ್ಧವೇ ಸಿಡಿದೆದ್ದರು…

ಅಕ್ಷಯ್‍ಗಾಗಿ ಜೀವವನ್ನೇ ಕೊಡಲು ಸಿದ್ಧವಾಗಿದ್ದ ರವೀನಾ ಆ ಒಂದು ಕಾರಣಕ್ಕೆ ದೂರವಾಗಿದ್ದರು, ಅಕ್ಕಿ ವಿರುದ್ಧವೇ ಸಿಡಿದೆದ್ದರು…

ಬಾಲಿವುಡ್‍ನಲ್ಲಿ `ಮೊಹರ’ ಎಂಬುದು ಬಹಳ ಫೇಮಸ್ ಫಿಲಂ. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅಭಿನಯದ ಚಿತ್ರವಿದು. ಮೊದಲ ಬಾರಿಗೆ ಅಕ್ಷಯ್ ಮತ್ತು ರವೀನಾ ಈ ಚಿತ್ರದಲ್ಲಿ ಒಂದಾಗಿದ್ದರು. ಈ ರೊಮ್ಯಾಂಟಿಕ್ ಚಿತ್ರ ಸಖತ್ ಹಿಟ್ ಆಗಿತ್ತು. ಇದರ ಜೊತೆಜೊತೆಗೇ ರವೀನಾ ಮತ್ತು ಅಕ್ಷಯ್ ಕುಮಾರ್ ಬಗೆಗಿನ ರೊಮ್ಯಾಂಟಿಕ್ ಕತೆಯೂ ಜೋರಾಗಿಯೇ ಕೇಳು ಬರುತ್ತಿತ್ತು. ಇವರಿಬ್ಬರ ಪ್ರೇಮಕತೆಯೂ ಮಾಧ್ಯಮಗಳಲ್ಲಿ ಹೆಡ್‍ಲೈನ್ ಆಗಿತ್ತು.

ಇದಾದ ಬಳಿಕ ಹಲವು ಚಿತ್ರಗಳಲ್ಲಿ ರವೀನಾ ಮತ್ತು ಅಕ್ಷಯ್ ಜೊತೆಯಾಗಿದ್ದರು. ಈ ಚಿತ್ರಗಳೂ ಸಖತ್ ಹಿಟ್ ಆಗಿದ್ದವು. ಇದರ ಜೊತೆಗೇ ಇವರಿಬ್ಬರ ಪ್ರೇಮಕತೆಗೂ ಬಗೆಬಗೆ ರೆಕ್ಕೆಪುಕ್ಕಗಳ ಬಂದಿದ್ದವು. ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಈ ಜೋಡಿಯೂ ಒಂದು ಹಂತದಲ್ಲಿ ಮದುವೆಯಾಗುವುದಕ್ಕೂ ನಿರ್ಧರಿಸಿತ್ತು. ದೇವಸ್ಥಾನದಲ್ಲಿ ಮದುವೆಗೆ ನಿರ್ಧಾರ ಮಾಡಲಾಗಿತ್ತು. ಮದುವೆ ಮುನ್ನ ಅಕ್ಷಯ್ ಒಂದು ಷರತ್ತು ಕೂಡಾ ಹಾಕಿದ್ದರು. ಅದೇನೆಂದರೆ, ಮದುವೆ ಬಳಿಕ ರವೀನಾ ಚಿತ್ರಗಳಲ್ಲಿ ನಟಿಸಬಾರದೆಂದು. ಅಕ್ಷಯ್‍ಗಾಗಿ ಜೀವವೇ ಕೊಡಲು ಸಿದ್ಧವಾಗಿದ್ದ ರವೀನಾ ಇದಕ್ಕೂ ಸಮ್ಮತಿಸಿದ್ದರು. ಇದರ ಜೊತೆ ಜೊತೆಗೆ ರವೀನಾ ಮದುವೆಯ ಸಿದ್ಧತೆ ಮಾಡಿಕೊಂಡಿದ್ದರು.

ಮದುವೆ ಸಿದ್ಧತೆ ನಡುವೆಯೇ ರವೀನಾ ಮತ್ತು ಅಕ್ಷಯ್ ಚಿತ್ರವೊಂದನ್ನು ಒಪ್ಪಿಕೊಂಡರು. ಅದೇ `ಕಿಲಾಡಿಯೋಂಕಾ ಕಿಲಾಡಿ’. ಈ ಚಿತ್ರದಲ್ಲಿ ಮತ್ತೋರ್ವ ನಟಿ ರೇಖಾ ಕೂಡಾ ಅಭಿನಯಿಸಿದ್ದರು. ಶೂಟಿಂಗ್ ಭರ್ಜರಿಯಾಗಿಯೇ ಸಾಗುತ್ತಿತ್ತು. ಇಲ್ಲಿ ನಡೆಯುತ್ತಿದ್ದ ಒಂದೊಂದೇ ಘಟನೆಗಳು ರವೀನಾ ಮನಸ್ಸಿಗೆ ಘಾಸಿಗೊಳಿಸುವಂತಿತ್ತು. ಅದೇನೆಂದರೆ, ರವೀನಾ ಪ್ರಿಯಕರ ಅಕ್ಷಯ್ ಕುಮಾರ್ ದಿನದಿಂದ ದಿನಕ್ಕೆ ರೇಖಾ ಅವರಿಗೆ ಹತ್ತಿರವಾಗುತ್ತಿದ್ದರು.

ಇದು ಟಂಡನ್ ಮನಸ್ಸಿಗೆ ಹಿಂಸೆ ಉಂಟು ಮಾಡುತ್ತಿತ್ತು. ಈ ಲವ್ ಸ್ಟೋರಿ ಕೂಡಾ ಮಾಧ್ಯಮಗಳಲ್ಲಿ ಬರುವುದಕ್ಕೆ ಆರಂಭವಾಗಿತ್ತು. ಆದರೂ ಅಕ್ಷಯ್ ಪ್ರೀತಿಗೆ ಮಾರು ಹೋಗಿದ್ದ ರವೀನಾ ಇದನ್ನೆಲ್ಲಾ ಕ್ಷಣಾರ್ಥದಲ್ಲಿ ಮರೆಯುತ್ತಿದ್ದರು. ಹಾಗಂತ, ಎಲ್ಲಾ ದಿನಗಳೂ ಹೀಗೆಯೇ ಇರುತ್ತಿರಲಿಲ್ಲ. ಒಂದು ದಿನ ಅಕ್ಷಯ್ ಮತ್ತು ರೇಖಾ ತುಂಬಾ ಆಪ್ತವಾಗಿ ಇರುವುದನ್ನು ಕಂಡ ರವೀನಾ ಹೃದಯವೇ ಚೂರು ಚೂರಾಗಿತ್ತು. ಮಾನಸಿಕವಾಗಿ ರವೀನಾ ಅಂದೇ ಅಕ್ಷಯ್‍ನಿಂದ ದೂರವಾಗಲು ಆರಂಭಿಸಿದರು. ಈ ಚಿತ್ರ ಮುಗಿಯುವುದರೊಳಗೆ ಅಕ್ಷಯ್ ರವೀನಾ ದೂರ ದೂರವೇ ಆಗಿ ಹೋದರು.

ಒಂದು ದಿನ ಪತ್ರಿಕಾಗೋಷ್ಠಿ ಕರೆದ ರವೀನಾ, ನಾನು ಅಕ್ಷಯ್ ಕುಮಾರ್‍ರನ್ನು ಪ್ರೀತಿಸಿಯೇ ಇಲ್ಲ ಎಂದು ಹೇಳಿ ಬಿಟ್ಟರು. ಅಲ್ಲದೆ, ಅಕ್ಷಯ್ ವಿರುದ್ಧ ನಾನಾ ಆರೋಪಗಳನ್ನೂ ಮಾಡಿದರು. ಇದರೊಂದಿಗೆ ಎಲ್ಲವೂ ಮುಗಿದಿತ್ತು. ಒಂದು ಸುಂದರ ಪ್ರೇಮವೂ ಹಳ್ಳ ಹಿಡಿಯಿತು…

About sudina

Check Also

ಈಗಿನ ಸ್ಟಾರ್ ನಟನನ್ನು ಸ್ಟುಡಿಯೋದಿಂದ ಹೊರಗಟ್ಟಿದ್ದರು ಆ ಸ್ಟಾರ್ ಗಾಯಕಿ…!

ಅದು ‘ಕಾಯಾಮತ್ ಸೇ ಕಾಯಾಮತ್ ತಕ್’ ಚಿತ್ರದ ಹಾಡಿನ ರೆಕಾರ್ಡಿಂಗ್ ಸಂದರ್ಭ. ಈ ಹಾಡನ್ನು ರೆಕಾರ್ಡ್ ಮಾಡಲು ಸ್ಟುಡಿಯೋಗೆ ಬಂದಿದ್ದರು …

Leave a Reply

Your email address will not be published. Required fields are marked *

error: Content is protected !!