Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ಇದು ಅಕ್ಷಯ್ ಕುಮಾರ್ ಪುತ್ರನ ಗರ್ಲ್​ಫ್ರೆಂಡಾ? : ಕ್ಯಾಮೆರಾ ಕಂಡೊಡನೆ ಓಡಿದ್ದೇಗೆ ಅಕ್ಷಯ್ ಪುತ್ರ ಆರವ್​…?

ಇದು ಅಕ್ಷಯ್ ಕುಮಾರ್ ಪುತ್ರನ ಗರ್ಲ್​ಫ್ರೆಂಡಾ? : ಕ್ಯಾಮೆರಾ ಕಂಡೊಡನೆ ಓಡಿದ್ದೇಗೆ ಅಕ್ಷಯ್ ಪುತ್ರ ಆರವ್​…?

ಮುಂಬೈ : ಬಾಲಿವುಡ್​​ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಪುತ್ರ ಮೊನ್ನೆ ರೆಸ್ಟೋರೆಂಟ್  ಬಳಿ ಕಾಣಿಸಿಕೊಂಡಿದ್ದರು. ಜೊತೆಗೆ ಒಂದಷ್ಟು ಫ್ರೆಂಡ್ಸ್​ ಕೂಡಾ ಇದ್ದರು. ಆದರೆ, ಇಷ್ಟು ದಿನ ಅಷ್ಟಾಗಿ ಬಹಿರಂಗವಾಗಿ ಕಾಣಿಸಿಕೊಳ್ಳದ ಅಕ್ಕಿ ಪುತ್ರನನ್ನು ಕಂಡ ಮಾಧ್ಯಮದವರು ಫೋಟೋ ಕ್ಲಿಕ್ಕಿಸಿದ್ದರು. ಕೆಲವರು ವೀಡಿಯೋ ಮಾಡಿದ್ರು. ಇದರಿಂದ ಟೆನ್ಶನ್ ಆದ ಆರವ್​ ತರಾತುರಿಯಲ್ಲಿ ಕಾರು ಸೇರಿಕೊಂಡಿದ್ದರು. ಇಷ್ಟು ಕಸರತ್ತು ಮಾಡಿದರೂ  ಮಾಧ್ಯಮಗಳಲ್ಲಿ ಹೆಡ್​ಲೈನ್​​ ಆಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ…

ಅಂದು ಸ್ನೇಹಿತರೊಂದಿಗೆ ಅರವ್ ಇಲ್ಲಿಗೆ ಬಂದಿದ್ದರು. ಆರವ್​ ಜೊತೆ ನಟ ಸೋಹಾಲಿ ಖಾನ್​ ಪುತ್ರ ಹಾಗೂ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಅವರ ಮಗ ಕೂಡಾ ಇದ್ದರು… ಜೊತೆಗೆ ಗರ್ಲ್​​ಫ್ರೆಂಡ್ಸ್​ ಕೂಡಾ ಇವರೊಂದಿಗೆ ಇಲ್ಲಿ ಕಾಣಿಸಿಕೊಂಡಿದ್ದರು… ಆರವ್​​ನನ್ನು ಕಂಡ ಕೆಲವರು ಫೋಟೋ ಕ್ಲಿಕಿಸಿದರು, ವೀಡಿಯೋ ಮಾಡಿದರು. ಇದು ಆರವ್​ಗೂ ಕಸಿವಿಸಿ ಆಗಿತ್ತು… ಹೀಗಾಗಿ, ಓಡಿ ಹೋಗಿ ಕಾರು ಸೇರಿಕೊಂಡ ಆರವ್​ ಮುಖ ಮುಚ್ಚಿಕೊಂಡಿದ್ದರು…

ಸೆಲೆಬ್ರಿಟಿಗಳ ಮಕ್ಕಳು ಅಂದರೆ ಹಾಗೆಯೇ ಬಹುಬೇಗ ಜನರ ಗಮನ ಸೆಳೆಯುತ್ತಾರೆ. ಅವರು ಸಿನೆಮಾಲೋಕಕ್ಕೆ ಬರುವ ಮೊದಲೇ ಸ್ಟಾರ್ ಆಗಿರುತ್ತಾರೆ. ಆದರೆ, ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ ದಂಪತಿ ಮಗನ್ನು ತುಂಬಾ ಚೆನ್ನಾಗಿಯೇ ಬೆಳೆಸಿದ್ದರು. ಹೆತ್ತವರ ಸ್ಟಾರ್ ಗಿರಿ ತಲೆಗೆ ಹತ್ತದಂತೆ ನೋಡಿಕೊಂಡಿದ್ದರು. ಮಾಧ್ಯಮಗಳಿಂದಲೂ ದೂರ ಇಟ್ಟಿದ್ದರು. ಆದರೂ , ಆರವ್​ ಬಾಕಿ ಸ್ಟಾರ್ ಕಿಡ್​ಗಳಂತೆ ಸಾಕಷ್ಟು ಕುತೂಹಲವನ್ನೂ ಮೂಡಿಸಿದ್ದ. ಎಲ್ಲರ ಗಮನ ಸೆಳೆದಿದ್ದರು. ಆರವ್​ಗೆ ಈಗ ವಯಸ್ಸು 15. ಮುಂಬೈನ ಶಾಲೆಯಲ್ಲಿ ಓದುತ್ತಿದ್ದಾರೆ. ಮೊನ್ನೆ ವೀಕ್​ ಎಂಡ್​ಗೆ ಸ್ನೇಹಿತರೊಂದಿಗೆ ಬಂದಿದ್ದ ಆರವ್​​ ರೆಸ್ಟೋರೆಂಟ್​ನಲ್ಲಿ ಒಂದಷ್ಟು ಖುಷಿಯಿಂದಲೇ ಕಳೆದಿದ್ದರು. ಆದರೆ, ರೆಸ್ಟೋರೆಂಟ್​ನಿಂದ ಹೊರ ಬಂದಾಗ ಕೆಲವರು ಫೋಟೋ ತೆಗೆಯಲು ಕಾದಿರುತ್ತಾರೆ ಎಂಬ ಸಣ್ಣ ಸುಳಿವೂ ಆರವ್​ಗೆ ಇರಲಿಲ್ಲ.

ಅದೂ ಅಲ್ಲದೆ, ಅಂದು ಆರವ್​ ಜೊತೆಗೆ ಇದ್ದ ಹುಡುಗಿಯರು ಕೂಡಾ ಗಮನ ಸೆಳೆದಿದ್ದರು. ಅದರಲ್ಲಿ ಒಬ್ಬಾಕೆ ಆರವ್​ನ ಪ್ರೇಯಸಿ ಎಂದೇ ಕೆಲವರು ಮಾತನಾಡಿಕೊಳ್ಳಲು ಶುರು ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಇದೇ ಚರ್ಚೆ ಆಗುತ್ತಿತ್ತು. ಹಾಗಂತ, ಆರವ್​ ಗರ್ಲ್​ ಫ್ರೆಂಡ್​ ಬಗ್ಗೆ ಇದೇ ಮೊದಲ ಬಾರಿಗೆ ಈ ರೀತಿ ಸುದ್ದಿಯಾಗಿದ್ದಂತೂ ಅಲ್ಲ. ಈ ಹಿಂದೆಯೂ ಹಲವು ಬಾರಿ ಆರವ್​ ಇಂತಹ ಸುದ್ದಿಗೆ ವಸ್ತುವಾಗಿದ್ದ. ಏನೇ ಆದರೂ, ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡಿದರೂ ಆರವ್​ ಮರುದಿನ ಹೆಡ್​ಲೈನ್ ಆಗುವುದನ್ನು ತಪ್ಪಿಸಿಕೊಳ್ಳಲು ಆಗಲಿಲ್ಲ…

Video courtesy : Lehren TV

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!