Monday , January 22 2018
Home / News NOW / ಆರುಷಿ ಕೊಲೆ ಪ್ರಕರಣ : ಹೆತ್ತವರಿಗೆ ಬಿಗ್ ರಿಲೀಫ್​
Buy Bitcoin at CEX.IO

ಆರುಷಿ ಕೊಲೆ ಪ್ರಕರಣ : ಹೆತ್ತವರಿಗೆ ಬಿಗ್ ರಿಲೀಫ್​

ನವದೆಹಲಿ : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಒಂಬತ್ತು ವರ್ಷ ಹಿಂದಿನ ಆರುಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್​ ತನ್ನ ತೀರ್ಪನ್ನು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಕ್ಕೊಳಗಾಗಿದ್ದ ಆರುಷಿ ಹೆತ್ತವರಾದ ರಾಜೇಶ್ ಮತ್ತು ನೂಪುರ್​ ತಲ್ವಾರ್​ಗೆ ಹೈಕೋರ್ಟ್​ ರಿಲೀಫ್​ ನೀಡಿದೆ. ಈ ಪ್ರಕರಣದಿಂದ ಇವರಿಬ್ಬರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸಿಬಿಐ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದೇ ಇರುವ ಹಿನ್ನೆಲೆಯಲ್ಲಿ ಇವರಿಬ್ಬರನ್ನು ದೋಷಮುಕ್ತಗೊಳಿಸುವುದಾಗಿ ನ್ಯಾಯಾಲಯ ಹೇಳಿದೆ. ನ್ಯಾ.ಎ.ಕೆ.ಮಿಶ್ರಾ ಮತ್ತು ನ್ಯಾ. ಬಿ.ಕೆ. ನಾರಾಯಣ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

2008ರಲ್ಲಿ ತನ್ನ ಮನೆಯಲ್ಲಿಯೇ 14 ವರ್ಷದ ಆರುಷಿ ಕೊಲೆಯಾಗಿದ್ದಳು. ಅರುಷಿ ಜೊತೆ ಮನೆ ಕೆಲಸದಾಳು ಹೇಮರಾಜ್ ಕೂಡಾ ಹತ್ಯೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆತ್ತವರಾದ ರಾಜೇಶ್ ಮತ್ತು ನೂಪುರ್​ ತಲ್ವಾರ್​ಗೆ ಉತ್ತರ ಪ್ರದೇಶ ಗಾಜಿಯಾಬಾದ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರುಷಿ ಹೆತ್ತವರು ಅಲಹಾಬಾದ್ ಹೈಕೋರ್ಟ್​ ಮೊರೆ ಹೋಗಿದ್ದರು. ಈಗ ಈ ಜೀವಾವಧಿ ಶಿಕ್ಷೆಯನ್ನು ಅಲಹಬಾದ್ ಹೈಕೋರ್ಟ್​ ರದ್ದು ಮಾಡಿದೆ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!