Thursday , December 14 2017
Home / Gulf News / ಬದುಕಿನ ಕಡೇ ಕ್ಷಣಗಳನ್ನು ವೀಡಿಯೋ ಮಾಡಿದ ಇಬ್ಬರು…! : ವೈರಲ್ ಆಗಿದೆ ಅಪಘಾತದ ಈ ದೃಶ್ಯ

ಬದುಕಿನ ಕಡೇ ಕ್ಷಣಗಳನ್ನು ವೀಡಿಯೋ ಮಾಡಿದ ಇಬ್ಬರು…! : ವೈರಲ್ ಆಗಿದೆ ಅಪಘಾತದ ಈ ದೃಶ್ಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ರಿಯಾದ್​ : ಇದೊಂದು ಅಪಘಾತದ ದೃಶ್ಯ. ಸೌದಿ ಅರೇಬಿಯಾದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಕಾರಿನಲ್ಲಿ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದರು. ಈ ಯುವಕರು ತಮ್ಮ ವೀಡಿಯೋ ಮಾಡುತ್ತಿದ್ದಾಗಲೇ ಅಪಘಾತ ಸಂಭವಿಸಿದೆ…. ಹೀಗಾಗಿ, ಇವರಿಬ್ಬರ ಕಡೇ ಕ್ಷಣದ ದೃಶ್ಯ ಸೆರೆಯಾಗಿದ್ದು, ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

#عميد_الإمارات

A post shared by شبكة عميد الإمارات الإخبارية (@3meed_news) on


ಅಲ್​ ರಯಾನ್ ಮತ್ತು ಅಲ್​ ಬಿಶಾಹ್​​ ನಗರವನ್ನು ಸಂಧಿಸುವ ಪ್ರಮುಖ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಕೆಲವೊಂದು ವರದಿಗಳ ಪ್ರಕಾರ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಇದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಅದೇ ದಿನ ಹೊಸ ಕೆಲಸ ಸಿಕ್ಕಿದ್ದು, ನೌಕರಿಗೆ ಸೇರುವ ಸಲುವಾಗಿ ಆತ ಹೋಗುತ್ತಿದ್ದ ಎಂದು ಗೊತ್ತಾಗಿದೆ.

ವಾಹನ ಚಲಾಯಿಸುವಾಗ ಮೊಬೈಲ್ ಫೋನ್​ ಬಳಸುವುದು ಕೂಡಾ ಇಂತಹ ಅಪಘಾತಗಳಿಗೆ ಕಾರಣ. ಇಲ್ಲಿ ಸಂಭವಿಸುವ ಶೇಕಡಾ 78ರಷ್ಟು ಅಪಘಾತಗಳು ಡ್ರೈವಿಂಗ್ ವೇಳೆ ಮೊಬೈಲ್ ಬಳಸುವ ಕಾರಣದಿಂದಲೇ ಸಂಭವಿಸುತ್ತಿದೆ ಎಂದು ಸೌದಿ ಅರೇಬಿಯಾದ ಸಂಚಾರ ಇಲಾಖೆಯ ಮಹಾ ನಿರ್ದೇಶಕರು ಹೇಳಿದ್ದಾರೆ.

 

About sudina

Check Also

ದೂರವಾಗಿದ್ದ ಸ್ನೇಹಿತರನ್ನು 23 ವರ್ಷಗಳ ಬಳಿಕ ಒಂದಾಗಿಸಿದ ಫೇಸ್​ಬುಕ್​…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದುಬೈ : ಇದೊಂದು ಅಪೂರ್ವ ಸಂದರ್ಭ. ಆ ಸಹೋದರರಿಬ್ಬರ ಭೇಟಿಯ ಕ್ಷಣ. ಈ …

Leave a Reply

Your email address will not be published. Required fields are marked *

error: Content is protected !!