Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ‘ಪದ್ಮಾವತಿ’ ಚಿತ್ರದಲ್ಲಿ ದೀಪಿಕಾ ತೊಟ್ಟ ಧಿರಿಸು ಎಷ್ಟು ಕೆ.ಜಿ ಇದೆ…?

‘ಪದ್ಮಾವತಿ’ ಚಿತ್ರದಲ್ಲಿ ದೀಪಿಕಾ ತೊಟ್ಟ ಧಿರಿಸು ಎಷ್ಟು ಕೆ.ಜಿ ಇದೆ…?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಪದ್ಮಾವತಿ ಚಿತ್ರದ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ. ಪದ್ಮಾವತಿ ಚಿತ್ರದ ಭರ್ಜರಿ ಟ್ರೇಲರ್ ಕೂಡಾ ಎಲ್ಲರ ಮನಗೆದ್ದಿದೆ. ಆದರೆ, ಈ ಚಿತ್ರದಲ್ಲಿ ದೀಪಿಕಾ ಧರಿಸಿರುವ ಭಾರ ಎಷ್ಟು ಎಂಬ ಚರ್ಚೆ ಈಗ ಶುರುವಾಗಿದೆ. ಪ್ರಾಚೀನ ಕತೆಯನ್ನು ಚಿತ್ರವಾಗಿಸುವಾಗ ಎದುರಾಗುವಂತಹ ಸಮಸ್ಯೆಗಳೇನು ಎಂಬುದಕ್ಕೂ ಈ ಚರ್ಚೆ ಒಂದು ಉತ್ತರವಾಗಿದೆ…

ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಟ್ರೇಲರ್ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಟ್ರೇಲರ್ ಎಲ್ಲರ ಕಣ್ಣು ಕುಕ್ಕುವಂತಿದೆ… ಅಷ್ಟು ರಿಚ್ ಆಗಿಯೇ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಕೂಡಾ ಈ ಟ್ರೇಲರ್ಗೆ ಶಹಬ್ಬಾಸ್ ಹೇಳಿದ್ದಾರೆ. ಅಲ್ಲದೆ, ಚಿತ್ರದ ಕ್ಯಾಮೆರಾ ವರ್ಕ್ ಕೂಡಾ ರಾಜಮೌಳಿ ಅವರನ್ನು ಸೆಳೆದಿದೆ. ಈ ಟ್ರೇಲರ್​​ನಲ್ಲಿ ದೀಪಿಕಾ ದೇವತೆಯಂತೆ ಕಂಗೊಳಿಸುತ್ತಿದ್ದು, ಡಿಪ್ಸ್ ಅಭಿಮಾನಿಗಳೂ ಖುಷಿಯಾಗಿದ್ದಾರೆ.

ಈ ಟ್ರೇಲರ್ ಬಾಹುಬಲಿಯ ದಾಖಲೆಯನ್ನೂ ಮುರಿದಿತ್ತು. ಬಿಡುಗಡೆಯಾದ 24 ಗಂಟೆಯಲ್ಲೇ ಟ್ರೇಲರ್ ಅನ್ನು ಯುಟ್ಯೂಬ್ನಲ್ಲಿ 15 ಮಿಲಿಯನ್ ಬಳಕೆದಾರರು ವೀಕ್ಷಿಸಿದ್ದರು. 3 ನಿಮಿಷ 9 ಸೆಕೆಂಡ್‌ಗಳ ಈ ಟ್ರೇಲರ್‌ನಲ್ಲಿ ಚಿತ್ರದ ಅದ್ದೂರಿ ತನ ಸಾಕ್ಷಿ ಎಂಬಂತೆ ಇದೆ… ದೀಪಿಕಾ ಇಲ್ಲಿ ಪದ್ಮಾವತಿಯಾಗಿ ಮಿಂಚಿದರೆ, ಸಾಮ್ರಾಜ್ಯದ ಹೊಣೆ ಹೊತ್ತು ಮಹರವಾಲ್‌ ರತನ್‌ ಸಿಂಗ್‌ ಆಗಿ ಶಾಹಿದ್‌ ಕಪೂರ್‌ ಭಿನ್ನವಾಗಿ ಕಾಣುತ್ತಾರೆ. ರಣವೀರ್ ಸಿಂಗ್ಗೆ ಅಲ್ಲಾವುದ್ದೀನ್ ಖಿಲ್ಜಿ ಪಾತ್ರ… ಇವೆಲ್ಲದರ ನಡುವೆ ಈ ಚಿತ್ರದಲ್ಲಿ ರಾಣಿ ಪದ್ಮಾವತಿ ಪಾತ್ರಕ್ಕೆ ದೀಪಿಕಾ ಧರಿಸಿರುವ ಧಿರಿಸು ಎಲ್ಲರ ಗಮನ ಸೆಳೆಯಲು ಆರಂಭಿಸಿದೆ.. ದೀಪಿಕಾ ಎಷ್ಟು ಭಾರವನ್ನು ಹೊತ್ತು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎಂದು ಹಲವರು ಪ್ರಶ್ನಿಸಲಾರಂಭಿಸಿದ್ದಾರೆ…

ಈ ಹಿಂದೆ ಬನ್ಸಾಲಿ ಅವರ ದೇವದಾಸ್ ಚಿತ್ರದಲ್ಲೂ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ಇಂತಹ ಧಿರಿಸನ್ನು ಧರಿಸಿದ್ದರು. ಮಾಧುರಿ ಈ ಚಿತ್ರದ ಹಾಡಿನಲ್ಲಿ ಸುಮಾರು 30 ಕೆ.ಜಿ ಭಾರದ ಲೆಹೆಂಗಾ ತೊಟ್ಟಿದ್ದರು. ಅದೂ ಅಲ್ಲದೆ, ಆ ಟೈಮ್​ನಲ್ಲಿ ಮಾಧುರಿ ಗರ್ಭಿಣಿ. ಇಂತಹ ಪರಿಸ್ಥಿತಿಯಲ್ಲೂ ದೀಕ್ಷಿತ್ 30 ಕೆ.ಜಿ. ಭಾರ ಹೊತ್ತು ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು… ಎಲ್ಲರಿಗೂ ಗೊತ್ತಿರುವಂತೆ ಈ ಐತಿಹಾಸಿಕ ಕತೆಗಳನ್ನು ಇಟ್ಟುಕೊಂಡು ಮಾಡುವ ಚಿತ್ರದಲ್ಲಿ ಬಳಸಲಾಗುವ ಬಟ್ಟೆಗಳು ತುಂಬಾ ಭಾರವಾಗಿರುತ್ತವೆ. ಪಾಶ್ಚಾತ್ಯ ಶೈಲಿಯ ಧಿರಿಸಿಗಿಂತ ಭಾರತದ ಉಡುಗೆ ತೊಡುಗೆಗಳ ಭಾರ ಅಧಿಕ. ಇದೇ ಸಮಸ್ಯೆ ಪದ್ಮಾವತಿ ಶೂಟಿಂಗ್ ಸಂದರ್ಭದಲ್ಲೂ ಕಾಡಿದಂತೂ ಸತ್ಯ…

ಪದ್ಮಾವತಿ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈಮ್ ಮಾಡಿದ್ದು ರಿಂಪಲ್ ಮತ್ತು ಹರ್ಪೀತ್ ನರುಲಾ. ಅವರೇ ಹೇಳುವಂತೆ, ಸಾಧ್ಯವಾದಷ್ಟು ಭಾರ ಕಡಿಮೆ ಇರುವ ವಸ್ತುಗಳನ್ನೇ ಇವರು ಬಳಸಿದ್ದಾರಂತೆ. ಆದರೆ, ದೇವದಾಸ್ ಚಿತ್ರಕ್ಕೂ ಪದ್ಮಾವತಿಗೂ ಹೋಲಿಕೆಯೂ ಇಲ್ಲಿ ಕಷ್ಟ. ಯಾಕೆಂದರೆ, ದೇವದಾಸ್ ಚಿತ್ರದ ಕತೆಯ ಅವಧಿಗಿಂತಲೂ ಪದ್ಮಾವತಿ ಚಿತ್ರಕ್ಕೆ ಬಳಸಿರುವ ಸನ್ನಿವೇಶಗಳ ವರ್ಷ ಬಹಳ ಹಳೆಯದ್ದು… ಪದ್ಮಾವತಿಯ ಕತೆ ಸುಮಾರು 11-12ನೇ ಶತಮಾನದಲ್ಲಿ ನಡೆದಿರುವಂತಹದ್ದು. ಹೀಗಾಗಿ, ಇದೇ ಸಂದರ್ಭಕ್ಕೆ ಒಪ್ಪುವಂತಹ ಕಾಸ್ಟ್ಯೂಮ್ಗಳನ್ನೇ ಇಲ್ಲಿ ಬಳಕೆ ಮಾಡಲಾಗಿದೆ. ಕೈ ಮಗ್ಗದಿಂದ ತಯಾರಿಸಿದ ಬಟ್ಟೆಗಳನ್ನು ಇಲ್ಲಿ ಉಪಯೋಗಿಸಲಾಗಿದೆಯಂತೆ. ಹೀಗಾಗಿ, ಮಷೀನ್ ವರ್ಕ್ ಇರುವ ಬಟ್ಟೆಗಳು ಇಲ್ಲಿ ಬಳಕೆಯಾಗದೇ ಇರುವುದರಿಂದ ಸಹಜವಾಗಿಯೇ ಈ ಬಟ್ಟೆಗಳ ತೂಕವೂ ಅಧಿಕವಾಗಿವೆ. ಆದರೂ, ಕಾಸ್ಟ್ಯೂಮ್ ಡಿಸೈನರ್ಗಳು ದೀಪಿಕಾರನ್ನು ತುಂಬಾ ಕಂಫರ್ಟೇಬಲ್ ಆಗಿ ಇಡಲು ಯತ್ನಿಸಿದ್ದಾರೆ. ಆದರೂ, ಈ ಭಾರದಿಂದ ಡಿಪ್ಸ್ ಕೊಂಚ ಕಷ್ಟ ಪಟ್ಟಿದ್ದಂತೂ ಸತ್ಯ…

ಹಾಗಂತ, ದೀಪಿಕಾ ಇದೇ ಮೊದಲ ಬಾರಿಗೆ ಇಂತಹ ಹೇವಿ ಔಟ್ಫಿಟ್ಗಳನ್ನು ಧರಿಸುವುದಲ್ಲ. ರಾಮ್ಲೀಲಾ ಚಿತ್ರದಲ್ಲಿ ಡಿಪ್ಸ್ 30 ಕೆ.ಜಿ ತೂಕದ ಲೆಹಂಗಾ ತೊಟ್ಟಿದ್ದರು. ಇನ್ನು, ಭಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀಪಿಕಾ ತೊಟ್ಟಿದ್ದ ಆಭರಣಗಳ ತೂಕ ಸುಮಾರು 20 ಕೆ.ಜಿ ಇತ್ತು. ಈಗ ಪದ್ಮಾವತಿ ಚಿತ್ರದಲ್ಲೂ ದೀಪಿಕಾ ಸುಮಾರು ಇಷ್ಟೇ ತೂಕವನ್ನು ಹೊತ್ತು ಶೂಟಿಂಗ್ನಲ್ಲಿ ಪಾಲ್ಗೊಂಡಿರುವ ಸಾಧ್ಯತೆಯೇ ಹೆಚ್ಚು… ಈ ವರ್ಷದ ಬಹುನಿರೀಕ್ಷಿತ ಚಿತ್ರ ಪದ್ಮಾವತಿ ಡಿಸೆಂಬರ್‌ 1ರಂದು ತೆರೆಕಾಣಲಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!